Site icon Vistara News

Disha Madan: 10 ವರ್ಷದ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟ ದಿಶಾ ಮದನ್‌!

Disha Madan

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕುಲವಧು’ವಿನಲ್ಲಿ ವಚನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ದಿಶಾ ಮದನ್‌ (Disha Madan) ಕಿರುತೆರೆಗೆ ಕಾಲಿಟ್ಟಿದ್ದರು. ಬರೋಬ್ಬರಿ ಹತ್ತು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ‘ಶ್ರೀಲಕ್ಷ್ಮಿ ನಿವಾಸ’ದಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಯ ಪ್ರೋಮೊ ಔಟ್‌ ಆಗಿದ್ದು ದಿಶಾ ಕಾಣಿಸಿಕೊಂಡಿದ್ದಾರೆ.

ದಿಶಾ ಅವರು ಪೋಸ್ಟ್‌ನಲ್ಲಿ ʻʻ10 ವರ್ಷಗಳ ಹಿಂದೆ ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ನಟಿಸಲು ಪ್ರಯತ್ನಿಸಿದೆ! ಎಷ್ಟು ಪ್ರೀತಿಯನ್ನು ಸ್ವೀಕರಿಸಿದೆ ಎಂದರೆ ಹೇಳಲು ಸಾಧ್ಯವಿಲ್ಲ. ಕುಲವಧು ವಚನ ಮೂಲಕ ಅನೇಕ ಜನರು ನನ್ನನ್ನು ಗುರುತಿಸಿದ್ದಾರೆ ಒಂದು ದಶಕದ ನಂತರ, ನಾನು ಭಾವನಾಳಾಗಿ ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೆ ಸದಾ ಇರಲಿʼʼಎಂದು ಬರೆದುಕೊಂಡಿದ್ದಾರೆ.

ಶಿವರಾಜ್ ಕುಮಾರ್ ಮಗಳು ನಿವೇದಿತಾ ಅವರ ಶ್ರೀಮುತ್ತು ಸಿನಿ ಸರ್ವೀಸಸ್ ಹಾಗೂ ಸಕ್ಕತ್ ಸ್ಟುಡಿಯೋ ನಿರ್ಮಾಣದಲ್ಲಿ ಮೂಡಿ ಬಂದ ವೆಬ್ ಸಿರೀಸ್ ‘ಹೇಟ್ ಯೂ ರೋಮಿಯೋ’ದಲ್ಲಿ ಚಾರ್ವಿ ಪಾತ್ರದ ಮೂಲಕ ಗಮನ ಸೆಳೆದರು.

‘ಹಂಬಲ್ ಪೋಲಿಟಿಶಿಯನ್ ನೊಗರಾಜ್’ ವೆಬ್ ಸಿರೀಸ್‌, ಪನ್ನಗಾಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲಿ ಗಂಧರ್ವ ಲೋಕದ ಮಹಾರಾಣಿ ಉತ್ಕಲಾ ಆಗಿ ಮಿಂಚಿದ್ದರು.

Exit mobile version