Site icon Vistara News

Divya Shridhar: ಹೆಣ್ಣು ಮಗುವಿಗೆ ಜನ್ಮ ನೀಡಿದ ʻಆಕಾಶ ದೀಪʼ ಧಾರಾವಾಹಿ ಖ್ಯಾತಿಯ ದಿವ್ಯಾ ಶ್ರೀಧರ್

Divya Sridhar of ``Akash Deepa'' serial fame gave birth to a baby girl

ಬೆಂಗಳೂರು: ಕಳೆದ ವರ್ಷ ಪತಿ ಅರ್ನವ್ ಅಲಿಯಾಸ್ ಅಮ್ಜಾದ್ ಖಾನ್ ವಿರುದ್ಧ ದಿವ್ಯಾ ಶ್ರೀಧರ್ (Divya Shridhar) ಚೆನ್ನೈ ಪೊಲೀಸರ ಬಳಿ ಹಲ್ಲೆ ಹಾಗೂ ವಂಚನೆ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಅರ್ನವ್‌ನ ಬಂಧಿಸಿದ್ದರು. ಸದ್ಯ ನಟಿ ದಿವ್ಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ತನಗೆ ಸುಳ್ಳು ಹೇಳಿ ಮದುವೆ ಆಗಿದ್ದಾನೆ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಲವ್ ಜಿಹಾದ್‌ ಆರೋಪವನ್ನೂ ಪತಿಯ ಮೇಲೆ ಹೊರೆಸಿ, ದಿವ್ಯಾ ದೂರು ನೀಡಿದ್ದರು. ಅಕ್ಟೋಬರ್‌ 14ರಂದು ತಮಿಳುನಾಡಿನ ಕೂಟಂಬಾಕಂನಲ್ಲಿ ಧಾರಾವಾಹಿಯೊಂದರ ಚಿತ್ರೀಕರಣದಲ್ಲಿ ಅಮ್ಜಾದ್ ಖಾನ್‌ ಇದ್ದಾಗ ಅಲ್ಲಿಗೆ ತೆರಳಿದ ಪೊಲೀಸ್ ಸಿಬ್ಬಂದಿ ಸೆಟ್‌ನಲ್ಲಿಯೇ ಅಮ್ಜಾದ್ ಖಾನ್‌ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿಯು ಹೊಟ್ಟೆಗೆ ಒದ್ದಿರುವ ಕುರಿತು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ಮಗಳ ಕುರಿತು ಪೋಸ್ಟ್‌ ಹಂಚಿಕೊಂಡಿದ್ದಾರೆ ನಟಿ.

ಮಗಳ ಕುರಿತ ಪೋಸ್ಟ್‌ ಹಂಚಿಕೊಂಡ ನಟಿ ದಿವ್ಯಾ

`ಈ ಕಾಯುವಿಕೆ ದೀರ್ಘವಾಗಿತ್ತು. ಆದರೆ ಅತ್ಯಂತ ವಿಶೇಷವಾಗಿತ್ತು. ಈ ಹಿಂದೆ ಏನು ನಡೆದಿತ್ತು ಎನ್ನುವುದಕ್ಕಿಂತ ಇನ್ನು ಮುಂದೆ ಏನು ಆಗುತ್ತದೆ ಎನ್ನುವುದು ಮುಖ್ಯ. ನೀನು ನನಗೆ ಪ್ರೀತಿ, ಬಲ, ಬೆಂಬಲ ಎನ್ನವನ್ನು ಕೇಳುವುದಕ್ಕೂ ಮೊದಲೇ ಕೊಟ್ಟಿದ್ದೀಯಾ. ನನ್ನ ಭಾಗವಾಗಿದ್ದಕ್ಕಾಗಿ ನಾನು ನಿನಗೆ ಧನ್ಯವಾದ ಹೇಳುತ್ತೇನೆ. ಎಂದೆಂದು ನಿನ್ನೊಟ್ಟಿಗೆ ನಾನು ಇರುತ್ತೇನೆ. ನನ್ನ ಮುದ್ದು ಕಂದ. ಈ ಹಾದಿನಲ್ಲಿ ನನ್ನೊಟ್ಟಿಗೆ ನಿಂತ ಎಲ್ಲರಿಗೂ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ.

‘ಸೇವಂತಿ’ ಎನ್ನುವ ಧಾರಾವಾಹಿ ಮೂಲಕ ತಮಿಳು ಕಿರುತೆರೆ ಪ್ರವೇಶಿಸಿದ ನಟಿ ದಿವ್ಯಾ ಶ್ರೀಧರ್ ಮನೆ ಮಾತಾಗಿದ್ದರು. ನಟಿಗೆ 2012ರಲ್ಲಿ ಮದುವೆಯಾಗಿ ಒಂದು ಮಗು ಕೂಡ ಇತ್ತು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ದಂಪತಿ ವಿಚ್ಛೇದನ ಪಡೆದಿದ್ದರು. ದಿವ್ಯಾ ಶ್ರೀಧರ್‌ ಹಾಗೂ ಅಮ್ಜಾದ್ ಖಾನ್ 2015ರಲ್ಲಿ ‘ಕೆಳದಿ ಕಣ್ಮನಿ’ ತಮಿಳು ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು.

ಇದನ್ನೂ ಓದಿ: Divya Shridhar | ʻಆಕಾಶ ದೀಪʼ ಧಾರಾವಾಹಿ ಖ್ಯಾತಿಯ ದಿವ್ಯಾ ಶ್ರೀಧರ್ ಪತಿ ಬಂಧನ

ಧಾರಾವಾಹಿಗಳಲ್ಲಿ ನಟಿಸುವ ವೇಳೆ ಸಹ ನಟ ಅರ್ನವ್ ಅಮ್ಜದ್ ಜತೆ ದಿವ್ಯಾ ಪ್ರೀತಿಲಿ ಬಿದ್ದಿದ್ದರು. ಆತನಿಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ದಿವ್ಯಾ ಗರ್ಭಿಣಿ ಆಗಿದ್ದಾಗ ಆಕೆಗೆ ಈ ಹಿಂದೆ ಮದುವೆಯಾಗಿ ಮಗಳು ಇರುವುದು ಗೊತ್ತಾಗಿ ಮನೆಯಲ್ಲಿ ಗಲಾಟೆ ಶುರುವಾಗಿತ್ತು. ಮತ್ತೊಂದು ಕಡೆ ಅರ್ನವ್ ಮತ್ತೊಬ್ಬಳ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ದಿವ್ಯಾ ಆರೋಪಿಸಿದ್ದರು.

Exit mobile version