ನಟ ರಿತ್ವಿಕ್ ಮಠದ್ (Ritvvikk Mathad ) ಹಾಗೂ ನಟಿ ದಿವ್ಯಾ ಉರುಡುಗ (Actress Divya Uruduga) ಅಭಿನಯದ , ‘ನಿನಗಾಗಿ’ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಇದೀಗ ‘ಬಿಗ್ ಬಾಸ್ ಕನ್ನಡ 7’ರ (Bigg Boss Kannada 7) ಮೂಲಕ ಗಮನ ಸೆಳೆದ ಕಿಶನ್ ಬಿಳಗಲಿ (Kishen Bilagali ಈ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಧಾರಾವಾಹಿ ನಾಯಕಿ ರಚನಾ ಜತೆ ನಟನೆ ಮಾಡಿದ್ದಾರೆ. ಅವರದ್ದು ಒಂದು ಸಸ್ಪೆನ್ಸ್ ಕ್ಯಾರೆಕ್ಟರ್ ಆಗಿದೆ.
ಸದಾ ಒಂದಲ್ಲಾ ಒಂದು ವಿಭಿನ್ನವಾಗಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿರುವ ಕಿಶನ್ ಈಗ ಕಿರುತೆರೆ ಎಂಟ್ರಿ ಕೊಟ್ಟಿರುವುದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
ಇದನ್ನೂ ಓದಿ: Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?
ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.