Site icon Vistara News

Nannamma Super Star | ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಎಪಿಸೋಡ್‌ ಪ್ರಸಾರ: ʻನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌-2ʼ!

Nannamma Super Star

ಬೆಂಗಳೂರು : ಕಲರ್ಸ್‌ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ (Nannamma Super Star) ಮೊದಲ ಸೀಸನ್ ಹಿಟ್ ಬಳಿಕ ಸೀಸನ್ 2 ಮೂಲಕ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಬರುತ್ತಿದೆ. ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2’ ಗ್ರ್ಯಾಂಡ್ ಓಪನಿಂಗ್ ಕೂಡ ಆಗಿದೆ. ಮೊದಲ ಸೀಸನ್‌ನಲ್ಲಿ ಸೆಲೆಬ್ರೆಟಿ ತಾಯಿ ಮಕ್ಕಳಿಂದ ಕೂಡಿದ್ದ ಈ ಶೋ ಈ ಬಾರಿ ಸೆಲೆಬ್ರೆಟಿಗಳ ಜತೆ ಸಾಮಾನ್ಯ ಜನರನ್ನು ಒಳಗೊಂಡಿದೆ.

ಅಕ್ಟೋಬರ್ 15ರಂದು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಓಪನಿಂಗ್ ಆಗಿದ್ದು, ಎರಡು ಎಪಿಸೋಡ್‌ಗಳು ಪ್ರಸಾರವಾಗಿವೆ. ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಸ್ಪೆಷಲ್ ಎಪಿಸೋಡ್ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದ್ದು, ಹಬ್ಬದ ಸಡಗರ ಹೆಚ್ಚಿಸಲು ಅಮ್ಮ ಮಕ್ಕಳ 12 ಹೊಸ ಜೋಡಿಗಳು ರೆಡಿಯಾಗಿದ್ದಾರೆ.

ಈ ಬಾರಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ಇವರ ಜತೆಗೆ ಮೊದಲ ಸೀಸನ್ ವಿನ್ನರ್ ವಂಶಿಕಾ ನಿರೂಪಕಿಯಾಗಿ ರಂಜಿಸಲಿದ್ದಾರೆ. ಹಿಂದಿನಂತೆ ಈ ಸೀಸನ್‌ನಲ್ಲಿಯೂ ನಟಿ ತಾರಾ, ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ಜಡ್ಜ್‌ಗಳಾಗಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಆಕಾಂಕ್ಷಿಗಳು ಮೋಸ ಹೋಗಬೇಡಿ! ಕಲರ್ಸ್‌ ವಾಹಿನಿಯಿಂದ ಸೂಚನೆ

ಈ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಪ್ರೋಗ್ರಾಮ್ ಹೆಡ್‌ ಪ್ರಕಾಶ್ ‘ನನ್ನಮ್ಮ ಸೂಪರ್ ಸ್ಟಾರ್’ ಮಕ್ಕಳ ಇನೋಸೆನ್ಸ್ ಇಟ್ಟುಕೊಂಡು ಮನರಂಜನೆ ನೀಡುವ ಕಾರ್ಯಕ್ರಮ. ಬುದ್ದಿವಂತಿಕೆ, ಪ್ರತಿಭೆಗಿಂತ ಮಕ್ಕಳ ಮುಗ್ಧತೆಯೇ ಈ ಕಾರ್ಯಕ್ರಮದ ಕೇಂದ್ರ ಬಿಂದು. ಮೊದಲ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣದಿಂದ ಸೀಸನ್ 2 ಆರಂಭವಾಗಿದೆ. ಈ ಕಾರ್ಯಕ್ರಮ ಕೂಡ ಸಕ್ಸೆಸ್‌ ಆಗಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದರು.

ನಟಿ ತಾರಾ ಮಾತನಾಡಿ ‘ನನ್ನಮ್ಮ ಸೂಪರ್ ಸ್ಟಾರ್’ ಮೊದಲ ಸೀಸನ್ ಬಹಳ ದೊಡ್ಡ ಹೆಸರು ಮಾಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೂಡ ಜನಪ್ರಿಯತೆ ಗಳಿಸಿಕೊಂಡರು. ಹೊಸತನದಿಂದ ಕೂಡಿದ ಶೋ ಇದಾಗಿತ್ತು. ಮೊದಲ ಸೀಸನ್ ಯಶಸ್ಸೇ ಸೀಸನ್ 2 ಆರಂಭ ಮಾಡಲು ಕಾರಣ. ಈ ಬಾರಿ ಇಡೀ ಕರ್ನಾಟಕವನ್ನು ಸುತ್ತಿ ಅಲ್ಲಿರುವ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಸಾಮಾನ್ಯ ಜನರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಲೋಕೇಶ್ ಪ್ರೊಡಕ್ಷನ್ ಬ್ಯಾನರ್ ನಡಿ ಈ ಕಾರ್ಯಕ್ರಮ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಮಾತನಾಡಿದ ನಟ ಸೃಜನ್ ಲೋಕೇಶ್ ʻʻಕಲರ್ಸ್ ಕನ್ನಡದ ಜತೆ ನನ್ನದು ಎಂಟು ವರ್ಷಗಳ ಜರ್ನಿ. ಅಲ್ಲಿಂದ ಇಲ್ಲಿಯವರೆಗೂ ನನಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ನಾನು ಪ್ರೊಡಕ್ಷನ್ ಮಾಡಿರಬಹುದು ಆದರೆ ಒಂದು ತಂಡವಾಗಿ ನಾವು ಗೆದ್ದಿದ್ದೇವೆ. ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಗಿಚ್ಚಿ ಗಿಲಿ ಗಿಲಿ ಶೋ ಇದೆಲ್ಲದರ ಗೆಲುವಿಗೆ ಡೈರೆಕ್ಷನ್ ತಂಡ ಕಾರಣ. ನಿರ್ದೇಶಕ ಪ್ರಕಾಶ್ ಹಾಗೂ ವಿಜಯ್ ಕ್ರಿಯೆಟಿವಿಟಿ ಎಲ್ಲಾ ಕಾರ್ಯಕ್ರಮಗಳನ್ನು ಇಷ್ಟರ ಮಟ್ಟಿಗೆ ಗೆಲ್ಲಿಸಿದೆ. ಸ್ಪರ್ಧಿಗಳು ಕೂಡ ಅಷ್ಟೇ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆʼʼ ಎಂದು ಹೇಳಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ರಿಯಾಲಿಟಿ ಸ್ಪರ್ಧೆಗಳು ಮಕ್ಕಳ ಬಾಲ್ಯವನ್ನು ಕಸಿಯುತ್ತಿವೆ, ನಿಮ್ಮ ಮಕ್ಕಳ ಬಗ್ಗೆ ಹುಷಾರು!

Exit mobile version