ಬೆಂಗಳೂರು: ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ಡಾಲಿ ಸೋಹಿ (Dolly Sohi) ಇಂದು ಬೆಳಗ್ಗೆ (ಮಾರ್ಚ್ 8)ನಿಧನರಾದರು. ಆಕೆಯ ಸಹೋದರಿ ನಟಿ ಅಮನ್‌ದೀಪ್ ಸೋಹಿ (Amandeep Sohi) ಗುರುವಾರ (ಮಾರ್ಚ್ 7) ಜಾಂಡೀಸ್‌ನಿಂದಾಗಿ ಮೃತಪಟ್ಟಿದ್ದರು. ಒಂದು ತಿಂಗಳಿಂದ ಜಾಂಡೀಸ್‌ಗೆ ಬಳಲಿ ಕೊನಯುಸಿರೆಳಿದರು ಎಂದು ವರದಿಯಾಗಿದೆ.
ಸಹೋದರ, ಮನ್ನು ಸೋಹಿ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ʻʻಅಮನ್‌ದೀಪ್ ಸೋಹಿ ಅವರು ಮೃತಪಟ್ಟ ಬಳಿಕ ಡಾಲಿ ಸೋಹಿ ಕೂಡ ನಿಧನರಾದರು. ಮಧ್ಯಾಹ್ನ ಡೋಲಿಯ ಅಂತ್ಯಕ್ರಿಯೆ ನಡೆಯಲಿದೆʼʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Anirudh Jatkar: ಆ ತಂಡ ತಪ್ಪು ಮಾಡಿಲ್ಲ, ಪಾಪ ಮಾಡಿದ್ದಾರೆ ಎಂದು ಬೇಸರ ಹೊರಹಾಕಿದ ವಿಷ್ಣುವರ್ಧನ್ ಅಳಿಯ!
ಕಳೆದ ವರ್ಷ ಕೀಮೋಥೆರಪಿ ಸೆಷನ್ ನಂತರ ಡಾಲಿ ಫೋಟೋವನ್ನು ಹಂಚಿಕೊಂಡಿದ್ದರು. ಅದರಲ್ಲಿ, “ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳು, ಜೀವನವು ಇತ್ತೀಚೆಗೆ ರೋಲರ್ ಕೋಸ್ಟರ್ ಆಗಿದೆ, ಆದರೆ ಅದರೊಂದಿಗೆ ಹೋರಾಡಲು ನಿಮಗೆ ಶಕ್ತಿ ಇದ್ದರೆ ನಿಮ್ಮ ಪ್ರಯಾಣವು ಸುಲಭವಾಗುತ್ತದೆ. ವಿಕ್ಟಿಮ್ ಆಫ್ ಜರ್ನಿ (ಕ್ಯಾನ್ಸರ್) ಅಥವಾ ಸರ್ವೈವರ್ ಆಫ್ ಜರ್ನಿಯಲ್ಲಿ ಯಾವುದು ಆರಿಸಿಸುತ್ತೀರಿ ನಿಮಗೆ ಬಿಟ್ಟದ್ದುʼʼಎಂದು ಬರೆದುಕೊಂಡಿದ್ದರು.
‘ಝಾನಕ್’, ‘ಮೇರಿ ಆಶಿಕಿ ತುಮ್ ಸೆ ಹಿ’ ಮತ್ತು ‘ಖೂಬ್ ಲಾಡಿ ಮರ್ದಾನಿ..ಝಾನ್ಸಿ ಕಿ ರಾಣಿ’ ಮುಂತಾದ ಧಾರಾವಾಹಿಗಳಲ್ಲಿ ಡಾಲಿ ನಟಿಸಿದ್ದರು.