Site icon Vistara News

Kannada Serial | ಬಿಗ್‌ ಬಾಸ್‌ನಿಂದ ಅಂತ್ಯಗೊಳ್ಳಲಿವೆಯಂತೆ ಈ ಧಾರಾವಾಹಿಗಳು!

Kannada Serial

ಬೆಂಗಳೂರು: ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 9 ಪ್ರಾರಂಭಗೊಂಡಿದೆ. 18 ಸ್ಪರ್ಧಿಗಳು ರಿವೀಲ್‌ ಆಗಿದ್ದಾರೆ. ಇದರ ಮಧ್ಯೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳು ಅಂತ್ಯ ಕಾಣುತ್ತಿವೆ. ಇದರಿಂದಾಗಿ ಪ್ರೇಕ್ಷಕರು ಸೋಷಿಯಲ್‌ ಮೀಡಿಯಾ ಮೂಲಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮೂಲಗಳ ಪ್ರಕಾರ ಮಂಗಳಗೌರಿ ಮದುವೆ ಹಾಗೂ ಕನ್ಯಾಕುಮಾರಿ ಮುಕ್ತಾಯಗೊಳ್ಳುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ನಮ್ಮನೆ ಯುವರಾಣಿ ಧಾರಾವಾಹಿ ಅಂತ್ಯಗೊಂಡಿದೆ. ನನ್ನರಸಿ ರಾಧೆ ಧಾರಾವಾಹಿಯೂ ಅಂತ್ಯಗೊಂಡಿದೆ. ಇದರಲ್ಲಿ ಖ್ಯಾತ ನಟ ಸಿಹಿ ಕಹಿ ಚಂದ್ರು ನಟಿಸುತ್ತಿದ್ದರು. ಅವರ ಜತೆಗೆ ಪ್ರಧಾನ ಪಾತ್ರಗಳಲ್ಲಿ ಕೌಸ್ತುಭ ಮಣಿ, ಅಭಿನವ್ ವಿಶ್ವನಾಥನ್, ವೀಣಾ ರಾವ್, ವಿಜಯ ಲಕ್ಷ್ಮಿ ಕಾಶಿ ನಟಿಸುತ್ತಿದ್ದರು.

ಇದನ್ನೂ ಓದಿ | Mandya Ravi | ಕಿರುತೆರೆ ಕಲಾವಿದ ಮಂಡ್ಯ ರವಿ ಆರೋಗ್ಯ ಸ್ಥಿತಿ ಗಂಭೀರ

ನನ್ನರಸಿ ಧಾರಾವಾಹಿ ತಕ್ಕ ಮಟ್ಟಿಗೆ ಜನ ಮೆಚ್ಚುಗೆ ಪಡೆದಿತ್ತು. ಮಂಗಳಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 9 ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದ್ದ ಕಾರಣ ನನ್ನರಸಿ ರಾಧೆ ಧಾರಾವಾಹಿ ಕೊನೆಗೊಂಡಿದೆ. ರಾತ್ರಿ ಪ್ರಸಾರ ಆಗುತ್ತಿದ್ದ ಕನ್ಯಾ ಕುಮಾರಿ ಧಾರಾವಾಹಿ ಕೂಡ ಅಂತ್ಯ ಕಾಣುತ್ತಿದೆ. ಕನ್ಯಾ ಕುಮಾರಿ ಧಾರಾವಾಹಿಯನ್ನ ರಘುಚರಣ್ ತಿಪಟೂರು ಅವರು ನಿರ್ದೇಶನ ಮಾಡುತ್ತಿದ್ದರು. ಲಕ್ಷಣ ಧಾರಾವಾಹಿ 8.30ಕ್ಕೆ ಪ್ರಸಾರವಾಗುತ್ತಿದೆ.

ಅದೇ ರೀತಿ ಸಂಜೆ 5.30ಕ್ಕೆ ಪ್ರಸಾರ ಆಗುತ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿ ಕೂಡ ಅಂತ್ಯ ಕಂಡಿದೆ, ಈ ಧಾರಾವಾಹಿಯ ಸಮಯಕ್ಕೆ ಗಿಣಿರಾಮ ಧಾರಾವಾಹಿ ಪ್ರಸಾರ ಆಗಲಿದೆ ಎನ್ನಲಾಗುತ್ತಿದೆ. 

ಇದನ್ನೂ ಓದಿ | Chandan Kumar | ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್‌ ಹೋಟೆಲ್‌ನಲ್ಲಿ ಕಳ್ಳತನ: ಸಿಸಿಟಿವಿ ದೃಶ್ಯ ವೈರಲ್‌

Exit mobile version