Site icon Vistara News

Gattimela | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಟ್ಟಿಮೇಳ ಖ್ಯಾತಿಯ ಸ್ವಾತಿ

Gattimela

ಬೆಂಗಳೂರು: ಗಟ್ಟಿಮೇಳ (Gattimela) ಧಾರಾವಾಹಿ ಖ್ಯಾತಿಯ ಸ್ವಾತಿ ಎಚ್‌ ವಿ ಅವರು ಮೈಸೂರಿನ ನಾಗಾರ್ಜುನ ರವಿ ಅವರ ಜತೆ ನವೆಂಬರ್‌ 25 ಶುಕ್ರವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿರುವ ಸ್ವಾತಿ ಎಚ್‌ ವಿ ಅವರ ಮದುವೆಯ ಸಂಭ್ರಮದಲ್ಲಿ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ.

ʻಶುಭವಿವಾಹʼ, ʻಪುಟ್ಟಗೌರಿ ಮದುವೆʼ, ʻಗಂಗಾʼ, ʻರಂಗನಾಯಕಿʼ ಸೀರಿಯಲ್‌ಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಂಭ್ರಮದಲ್ಲಿ ಕಿರುತೆರೆ ನಟಿ ಶಿಲ್ಪಾ ಶೆಟ್ಟಿ, ನಂದಿನಿ, ಅನಿಕಾ ಸಿಂಧ್ಯ, ಅಭಿಷೇಕ್ ದಾಸ್ ಹೀಗೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದಾರೆ. 

ಇದನ್ನೂ ಓದಿ | Siddhanth Suryavanshi | ಜಿಮ್ ಮಾಡುತ್ತಿದ್ದ ವೇಳೆ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ನಿಧನ

ʻದಂಡುಪಾಳ್ಯʼ, ʻಬಿಡಲಾರೆ ನಿನ್ನʼ, ʻಉಡ,ʼ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ವಾತಿ ಅವರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮಾಡಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ | Vaishnavi Gowda | ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡ್ರಾ? ಶಂಕರ್​ ಬಿದರಿಯೂ ಇದ್ದಾರೆ ಫೋಟೋದಲ್ಲಿ!

Exit mobile version