ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಸೀರಿಯಲ್ ನಾಯಕ ನಟ ಇದೀಗ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಆನ್‌ಸ್ಕ್ರೀನ್‌ನಲ್ಲಿ ಕಾಣಿಸುವ ಗೀತಾ ಮತ್ತು ವಿಜಯ್ ಪಾತ್ರಗಳು ವೀಕ್ಷಕರಿಗೂ ಇಷ್ಟವಾಗಿವೆ. ಈ ಜೋಡಿ ಡೇಟ್ ಮಾಡುತ್ತಿದೆ ಎಂದು ವದಂತಿಗಳು ಹಬ್ಬಿತ್ತು. ಆದರೀಗ ಸದ್ದಿಲ್ಲದೆ, ಧನುಷ್ ಗೌಡ (Dhanush Gowda) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಭವ್ಯಾ ಗೌಡ, ಕಮೆಂಟ್ ಬಾಕ್ಸ್ ಆಫ್ ಮಾಡಿ ನಿಶ್ಚಿತಾರ್ಥದ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʻಕಂಗ್ರಾಜುಲೇಶನ್ಸ್ ಧನು, ತುಂಬಾನೇ ಖುಷಿಯಾಯಿತುʼ ಎಂದು ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಸಂಜನಾ ಎಂಬುವವರ ಜತೆಗೆ ಧನುಷ್ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮುಂಚೆ ಭವ್ಯಾ ಅವರ ಜತೆ ಧನುಷ್ ಅವರು ಸಾಕಷ್ಟು ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ: Kannada Serials TRP: ʻಗೀತಾʼ ಧಾರಾವಾಹಿಯ ಓಟ ಶುರು; ಎರಡನೇ ಸ್ಥಾನದಲ್ಲಿ ʻಸೀತಾ ರಾಮʼ!
ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟನೆ ನೀಡಿದ್ದರು ಧನುಷ್- ಭವ್ಯಾ ಜೋಡಿ.
ಸಂಜನಾ ಜತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲಾ ಅಂತೆ ಕಂತೆ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ ನಟ ಧನುಷ್.