Site icon Vistara News

Gicchi Giligili: ಗಿಚ್ಚಿ-ಗಿಲಿಗಿಲಿ 2 ಗ್ರ್ಯಾಂಡ್ ಫಿನಾಲೆಯಲ್ಲಿ ಚಂದ್ರಪ್ರಭಾ ಮತ್ತೆ ಮದುವೆ!

ಬೆಂಗಳೂರು: ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋ (Gicchi Giligili) ಮೂಲಕ ಮನೆ ಮಾತಾದ ನಟ ಚಂದ್ರಪ್ರಭಾ (Chandraprabha) ಅವರು ಸದ್ದಿಲ್ಲದೇ ಹಸೆಮಣೆ ಏರಿದ್ದರು. ಮದುವೆಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ನೆಟ್ಟಿಗರು ಕಮೆಂಟ್‌ ಮೂಲಕ ಅಸಮಾಧಾನ ಹೊರಹಾಕಿದ್ದರು. ಈಗ ‘ಗಿಚ್ಚಿ ಗಿಲಿಗಿಲಿ’ 2 ವೇದಿಕೆಯಲ್ಲಿ ನಟ ಮತ್ತೆ ಮದುವೆಯಾಗಿದ್ದಾರೆ. ಈ ಪ್ರೊಮೊವನ್ನು ಕಲರ್ಸ್‌ ಕನ್ನಡ ಶೇರ್‌ ಮಾಡಿಕೊಂಡಿದೆ.

ಗಿಚ್ಚಿ ಗಿಲಿಗಿಲಿ ಸೀಸನ್ 2ರ ಗ್ರ್ಯಾಂಡ್ ಫಿನಾಲೆ ದಿನ ವೇದಿಕೆ ಮೇಲೆ ಮತ್ತೊಮ್ಮೆ ನವ ಜೋಡಿಗಳನ್ನು ಕರೆಸಿ ಮತ್ತೊಮ್ಮೆ ಮದುವೆ ಮಾಡಿಸಿ ನೂರಾರು ಕೋಟಿ ಜನರ ಆಶೀರ್ವಾದ ಪಡೆಯುವ ಅವಕಾಶ ಮಾಡಿಕೊಟ್ಟಿದೆ ಕಲರ್ಸ್‌ ಕನ್ನಡ. ʻʻನಾನು ಇಷ್ಟ ಪಟ್ಟಿರುವ ಹುಡುಗಿ ಎಂದು ಹೇಳಿಕೊಳ್ಳುವುದಕ್ಕಿಂತ ನನ್ನನ್ನು ಹೆಚ್ಚಿಗೆ ಇಷ್ಟ ಪಡುತ್ತಿರುವ ವ್ಯಕ್ತಿ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಅವಳಿಗೆ ಕಣ್ಣೀರು ಹಾಕಿಸದಂತೆ ನೋಡಿಕೊಳ್ಳಬೇಕು ಎನ್ನುವುದೇ ನನ್ನ ನನ್ನ ಆಸೆ’ ಎಂದು ಚಂದ್ರಪ್ರಭಾ ಹೇಳಿದ್ದಾರೆ.

ʻʻನಮ್ಮ ತಂದೆ ಇರಬೇಕಿತ್ತು ನನ್ನ ಮದುವೆ ನೋಡಬೇಕಿತ್ತು. ನನ್ನ ಮದುವೆ ನೋಡಿ ಸಾಯಬೇಕು ಎಂದು ಅವರ ಮನಸ್ಸಿನಲ್ಲಿ ಇತ್ತು’ ಎಂದು ಚಂದ್ರಪ್ರಭಾ ಕಣ್ಣೀರಿಟ್ಟಿದ್ದಾರೆ. ಚಂದ್ರಪ್ರಭಾ ಮದುವೆಯಾಗಿರುವ ಹುಡುಗಿ ಹೆಸರು ಭಾರತಿ ಪ್ರಿಯಾ ಎಂದು.

ಇದನ್ನೂ ಓದಿ: Summer Fashion: ವೀಕೆಂಡ್‌ನಲ್ಲಿ ಔಟಿಂಗ್‌ ಪ್ರಿಯರ ಉಲ್ಲಾಸ ಹೆಚ್ಚಿಸುತ್ತಿರುವ ವೈವಿಧ್ಯಮಯ ವೈಟ್‌ ಫ್ರಾಕ್ಸ್‌

ಸರಳವಾಗಿ ಆಪ್ತರ ಸಮ್ಮುಖದಲ್ಲಿ ಚಂದ್ರಪ್ರಭಾ ಮದುವೆ ನೆರವೇರಿತ್ತು. ಆದರೆ ತಮ್ಮ ಮದುವೆ ಬಗ್ಗೆ ಎಲ್ಲೂ ಕೂಡ ನಟ ಪೋಸ್ಟ್ ಹಾಕಿರಲಿಲ್ಲ. ಮದುವೆ ಆಗಿರುವ ಬಗ್ಗೆ ಎಲ್ಲೂ ಸುಳಿವು ನೀಡಿರಲಿಲ್ಲ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚಂದ್ರಪ್ರಭಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಜೋಡಿಗೆ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Exit mobile version