‘ಮಜಾ ಭಾರತ’- ‘ಗಿಚ್ಚಿ ಗಿಲಿಗಿಲಿ’ (Gicchi Giligili) ರಿಯಾಲಿಟಿ ಶೋಗಳ ಮೂಲಕ ಮನೆಮಾತಾಗಿದ್ದ ಪ್ರಿಯಾಂಕಾ ಕಾಮತ್ (Priyanka Kamath) ಮದುವೆ ಸಂಭ್ರಮದಲ್ಲಿದ್ದಾರೆ.
ಇದೀಗ ವೆಡ್ಡಿಂಗ್ ಫೋಟೊಶೂಟ್‌ಗಳನ್ನು ಪ್ರಿಯಾಂಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಅವರ ಸಂಗೀತ ಕಾರ್ಯಕ್ರಮ ಮಂಗಳೂರಿನಲ್ಲಿ ಗ್ರ್ಯಾಂಡ್ ಆಗಿ ನಡೆದಿದೆ. ಮದುವೆ ಬಗ್ಗೆ ನಟಿ ಪ್ರಿಯಾಂಕಾ ಎಲ್ಲಿಯೂ ಮಾಹಿತಿ ರಿವೀಲ್ ಮಾಡಿಲ್ಲ.
ಅಮಿತ್ ನಾಯಕ್ ಜತೆ ಪ್ರಿಯಾಂಕಾ ಕಾಮತ್ ಅವರ ಮದುವೆ ನಡೆಯಲಿದೆ. ಜನವರಿಯಲ್ಲಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ಕಳೆದ ಒಂದು ವರ್ಷದಿಂದ ಈ ಜೋಡಿ ಸಾಕಷ್ಟು ಕಡೆ ಪ್ರವಾಸ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿತ್ತು.
ಅನಾರೋಗ್ಯದ ಸಮಸ್ಯೆಯಿಂದಾಗಿ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು ಪ್ರಿಯಾಂಕಾ . ಆಗ ಅಮಿತ್ ಅವರು ಅವರ ನೆರವಿಗೆ ನಿಂತಿದ್ದರು.