Geetha Bharathi Bhat: 30 ಕೆಜಿ ತೂಕ ಇಳಿಸಿಕೊಂಡ ʻಬ್ರಹ್ಮಗಂಟುʼ ಗುಂಡಮ್ಮ Yashaswi Devadiga 2 ವರ್ಷಗಳು ago ಬ್ರಹ್ಮಗಂಟು ಧಾರಾವಾಹಿ ಮೂಲಕ ಮನೆಮಾತಾಗಿದ್ದ, ರಂಗಭೂಮಿ ಕಲಾವಿದೆ ಗೀತಾ ಭಾರತಿ ಭಟ್ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ.ದಿನಕ್ಕೆ 4ರಿಂದ 5 ಲೀಟರ್ ನೀರು ಕುಡಿಯುವುದು, 7 ರಿಂದ8 ಗಂಟೆ ನಿದ್ರೆ, ಶುದ್ಧವಾದ ಆಹಾರ, ಹೀಗೆ ತಮ್ಮ ಫಿಟ್ನೆಸ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಗೀತಾ ಭಾರತಿ ಭಟ್ ಉಡುಪಿ ಮೂಲದವರು. ತಾವು ಚಿಕ್ಕಂದಿನಲ್ಲಿ ಶಾಲೆಯ ಸ್ಪೋರ್ಟ್ಸ್ ಕಾಂಪಿಟೇಶನ್ ಒಂದರಲ್ಲಿ ಬಿದ್ದು, ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ನಂತರವೇ ಇಷ್ಟು ದಪ್ಪ ಆಗಿದ್ದು ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಗೀತಾ ಭಟ್ 30 ಕೆಜಿ. ತೂಕ ಕಡಿಮೆ ಮಾಡಿಕೊಳ್ಳಲು ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿದ್ದಾರೆ. ಯಾವುದೇ ಶಾರ್ಟ್ ಕಟ್ ಇಲ್ಲದೆ ಆಹಾರ ಮತ್ತು ವ್ಯಾಯಾಮದಿಂದ ತೂಕ ಇಳಿಸಿಕೊಂಡಿದ್ದಾರೆ. ʻʻಒಂದು ಎರಡು ವಾರ ವರ್ಕೌಟ್ ಮಾಡಿ ಬಿಡಬಾರದು. ಧೃಡ ಸಂಕಲ್ಪ ಮಾಡಿಕೊಳ್ಳಬೇಕು. ನನ್ನ ಗುರಿ ತಲುಪುತ್ತೇನೆ ಎಂಬ ಮೈಂಡ್ಸೆಟ್ ಇರಬೇಕುʼʼ. ಎಂದು ಗೀತಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.