ಬೆಂಗಳೂರು: ಏಪ್ರಿಲ್ 22 ರಿಂದ ನಾಪತ್ತೆಯಾಗಿದ್ದ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ (Taarak Mehta Ka Ooltah Chashmah) ಧಾರವಾಹಿ ನಟ ಗುರುಚರಣ್ ಸಿಂಗ್ (Gurucharan Singh) ಮೇ.17ರಂದು ಮನೆಗೆ ಮರಳಿದ್ದಾರೆ. ಪೊಲೀಸರ ಪ್ರಕಾರ, ಸಿಂಗ್ ವಿಚಾರಣೆಯ ಸಮಯದಲ್ಲಿ ತನ್ನ ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವರದಿಯ ಪ್ರಕಾರ, ಗುರುಚರಣ್ ವಿಚಾರಣೆಯ ವೇಳೆ ಪೊಲೀಸ್ ಅಧಿಕಾರಿಗಳಿಗೆ“ ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದೇನೆ” ಎಂದು ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ನಟ ಅಮೃತಸರ ಮತ್ತು ಲುಧಿಯಾನ ಸೇರಿದಂತೆ ಅನೇಕ ನಗರಗಳಿಗೆ ಭೇಟಿ ನೀಡಿದ್ದರು. ಆದರೆ ನಂತರ ಅವರು ಮನೆಗೆ ಮರಳಬೇಕೆಂದು ಅರಿತುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 22 ರಂದು ನಟ ದೆಹಲಿಯಿಂದ ಮುಂಬೈಗೆ ವಿಮಾನ ಹಿಡಿಯಬೇಕಿತ್ತು. ಆದರೆ ಅವರು ವಿಮಾನ ಹತ್ತಲಿಲ್ಲ ಮತ್ತು ಕಾಣೆಯಾಗಿದ್ದರು.
ಏಪ್ರಿಲ್ 22ರಂದು ರಾತ್ರಿ 8.30 ಕ್ಕೆ ಮಗ ಮುಂಬೈಗೆ ತೆರಳಿದ್ದ ಎಂದು ತಂದೆ ದೂರು ನೀಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ʻʻಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದರು. ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದರು. ಆದರೆ ಅವರು ಮುಂಬೈಗೆ ತಲುಪಿಲ್ಲ. ಬದಲಾಗಿ ಬೆಳಗ್ಗೆ 9.14ರ ಸುಮಾರಿಗೆ ಪಾಲಂʼನಲ್ಲಿ ನಟ ಕಂಡು ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!
ಗುರುಚರಣ್ ಆಗಾಗ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದರು ಮತ್ತು ಹಣಕಾಸಿನ ಚಟುವಟಿಕೆಗಳಿಗಾಗಿ ಅನೇಕ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡಿದ್ದರು. ಈತ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಿಸಿದ್ದ ಎಂದು ಪೊಲೀಸರು ಪತ್ತೆ ಮಾಡಿದ್ದರು.
ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.