Site icon Vistara News

Jote Joteyali | ಆರ್ಯವರ್ಧನ್‌ ಪಾತ್ರಕ್ಕೆ ಹರೀಶ್‌ರಾಜ್‌ ತರಲು ಹರಸಾಹಸ: ಜೊತೆ ಜೊತೆಯಲಿ ಟೀಮ್‌ ಮಾಸ್ಟರ್‌ ಪ್ಲ್ಯಾನ್‌!

Jote Joteyali

ಬೆಂಗಳೂರು: ಜೊತೆ ಜೊತೆಯಲಿ (Jote Joteyali) ಜೀ ಕನ್ನಡದ ಜನಪ್ರಿಯ ಧಾರಾವಾಹಿ. ಇತ್ತೀಚೆಗಷ್ಟೇ ಈ ಧಾರಾವಾಹಿ ವಿವಾದಕ್ಕೆ ಸಿಲುಕಿತ್ತು. ಧಾರಾವಾಹಿಯ ನಿರ್ದೇಶಕ, ನಿರ್ಮಾಪಕ ಆರೂರು ಜಗದೀಶ್‌ ಹಾಗೂ ಆರ್ಯವರ್ಧನ್‌ ಪಾತ್ರಧಾರಿ ಅನಿರುದ್ಧ ನಡುವೆ ಭಿನ್ನಾಭಿಪ್ರಾಯ ನಿರ್ಮಾಣವಾಗಿತ್ತು. ಈ ಹಿಂದೆ ಆರ್ಯವರ್ಧನ್‌ ಪಾತ್ರವನ್ನು ಸಾಯಿಸುವುದಿಲ್ಲ, ಬೇರೊಬ್ಬ ಕಲಾವಿದರನ್ನು ಈ ಪಾತ್ರಕ್ಕೆ ತರುವುದಿಲ್ಲ ಎಂದು ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕರು ಹೇಳಿಕೊಂಡಿದ್ದರು. ಆದರೆ ಈಗ ಬೇರೆಯೇ ಬೆಳವಣಿಗೆ ನಡೆದಿದೆ.

ಕಥೆಯಲ್ಲಿ ಬದಲಾವಣೆ ಮಾಡಿಕೊಂಡು ಆರ್ಯವರ್ಧನ್‌ ಪಾತ್ರವನ್ನು ಸಾಯಿಸದೇ ಜಾಣ ನಡೆಯನ್ನು ಪ್ರದರ್ಶಿಸಲಾಗಿದೆ. ಪ್ಲಾಸ್ಟಿಕ್‌ ಸರ್ಜರಿ ಅಂತಹ ಟ್ವಿಸ್ಟ್‌ಗಳನ್ನು ಬಳಸಿಕೊಂಡು ಹರೀಶ್‌ ರಾಜ್‌ರನ್ನು ಕೂರಿಸಲಾಗಿದೆ.

Jote Joteyali

ವಿಶ್ವಾಶ್‌ ದೇಸಾಯಿ ಆತ್ಮಹತ್ಯೆ
ಆರ್ಯವರ್ಧನ್‌ ತಾಯಿ ಪ್ರಿಯದರ್ಶಿನಿಗೆ ಮತ್ತೊಬ್ಬ ಪುತ್ರ ವಿಶ್ವಾಸ್‌ ದೇಸಾಯಿ ಇರುವುದನ್ನು ಸಿರಿಯಲ್‌ ಪರಿಚಯಿಸಿತ್ತು. ಆದರೆ ವಿಶ್ವಾಸ್‌ ದೇಸಾಯಿ ತನ್ನ ಬ್ಯುಸಿನೆಸ್‌ನಲ್ಲಿ ನಷ್ಟ ಅನುಭವಿಸಿ ನೂರಾರು ಕೋಟಿ ರೂ. ಸಾಲವನ್ನು ಮಾಡಿದ್ದ. ನಂತರ ಆತ್ಮಹತ್ಯೆಗೆ ಶರಣಾದ.

ಇದನ್ನೂ ಓದಿ | Jote Joteyali | ಆರ್ಯವರ್ಧನ್‌ ಜಾಗಕ್ಕೆ ಹರೀಶ್‌ ರಾಜ್?; ಹೌದು, ಈಗಲೇ ಹೇಳೋಕೆ ಆಗಲ್ಲ ಅಂದ್ರು ನಟ!

ಅಪಘಾತದದ ಸುಳಿಯಲ್ಲಿ ಆರ್ಯವರ್ಧನ್‌!
ವಿಶ್ವಾಸ್‌ ದೇಸಾಯಿಗೆ ಆರ್ಯವರ್ಧನ್‌ ಸಹಾಯ ಮಾಡಬೇಕೆಂಬ ಇಚ್ಛೆ ಪ್ರಿಯದರ್ಶಿನಿಯದಾಗಿತ್ತು. ಇದೇ ಕಾರಣಕ್ಕೆ ಆರ್ಯವರ್ಧನನ್ನು ಭೇಟಿಯಾಗಲು ಪ್ರಿಯದರ್ಶಿನಿ ನಿರ್ಧರಿಸಿದರು. ಅಮ್ಮನನ್ನು ಭೇಟಿಯಾಗಲು ಆರ್ಯವರ್ಧನ್‌ ಹೊರಟಾಗ ದಾರಿ ಮಧ್ಯೆ ಆಕ್ಸಿಡೆಂಟ್‌ ಆಗಿ ಗಂಭೀರವಾಗಿ ಗಾಯಗೊಂಡರು. ವಿಶ್ವಾಸ್‌ ದೇಸಾಯಿಯ ಶವ ಹಾಗೂ ಆರ್ಯವರ್ಧನ್‌ ಒಂದೇ ಆಸ್ಪತ್ರೆಯಲ್ಲಿ ಇರುವಂತಾಯಿತು. ಆರ್ಯವರ್ಧನ್‌ನ ನಜ್ಜುಗುಜ್ಜಾದ ಮುಖಕ್ಕೆ ವೈದ್ಯರು ಪ್ಲಾಸ್ಟಿಕ್‌ ಸರ್ಜರಿಯ ಸಲಹೆ ನೀಡಿದರು. ಇದಕ್ಕೆ ಪ್ರಿಯದರ್ಶಿನಿ ಒಪ್ಪಿಗೆ ಸೂಚಿಸುತ್ತಾರೆ. ಈ ವಿಚಾರವನ್ನು ಗುಟ್ಟಾಗಿ ಇಡಲು ವೈದ್ಯರಲ್ಲಿ ಪ್ರಿಯದರ್ಶಿನಿ ಮನವಿ ಮಾಡುತ್ತಾರೆ.

ಗರ್ಭಿಣಿ ಅನು ಸಿರಿಮನೆ ಆತಂಕ
ಇತ್ತ ಪ್ಲಾಸ್ಟಿಕ್‌ ಸರ್ಜರಿ ಆಗಿರುವ ವಿಷಯ ಗುಟ್ಟಾಗಿದ್ದ ಕಾರಣ, ಆರ್ಯವರ್ಧನ್‌ ಸಾವನಪ್ಪಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಗರ್ಭಿಣಿ ಅನು ಸಿರಿಮನೆಗೆ ಹೇಗೆ ಹೇಳುವುದು ಎಂದು ಕುಟುಂಬಸ್ಥರು ಆತಂಕಕ್ಕೆ ಒಳಗಾದರು. ಮುಂದೆ ಈ ವಿಷಯ ರಟ್ಟಾದರೆ ಅನು ಸಿರಿಮನೆ ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆ ವೀಕ್ಷಕರಿಗೆ ಕಾಡುತ್ತಿದೆ.

ಇದನ್ನೂ ಓದಿ | Jote Joteyali | TRP ಅಲ್ಲ, ಕಥೆ ಬಹಳ ಮುಖ್ಯ: ಅಭಿಮಾನಿಗಳ ಬೆಂಬಲ ನಿರೀಕ್ಷಿಸಿದ ಆರೂರು ಜಗದೀಶ್‌!

Exit mobile version