Site icon Vistara News

Hitler Kalyana: ಗುಡ್‌ ನ್ಯೂಸ್‌ ಕೊಟ್ಟ `ಹಿಟ್ಲರ್ ಕಲ್ಯಾಣ’ ಖ್ಯಾತಿಯ ನಂದಿನಿ ಮೂರ್ತಿ!

Hitler Kalyana fame Nandini murthy

`ಹಿಟ್ಲರ್ ಕಲ್ಯಾಣ’ (Hitler Kalyana) ಧಾರಾವಾಹಿಯ ದುರ್ಗಾ ಪಾತ್ರಧಾರಿ ನಂದಿನಿ ಮೂರ್ತಿ ಅವರು ಕೆಲವು ದಿನಗಳಿಂದ ಧಾರಾವಾಹಿಯಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿದ್ದರು. ಪ್ರೇಕ್ಷಕರು ಕಮೆಂಟ್‌ ಮೂಲಕ ದುರ್ಗಾ ಎಲ್ಲಿ ಎಂದು ತಲೆ ಕೆಡಿಸಿಕೊಂಡಿದ್ದರು. ಆದರೆ ಈಗ ದುರ್ಗಾ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ನಂದಿನಿ ಮೂರ್ತಿ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ‘ಜೀ ಕುಟುಂಬ ಅವಾರ್ಡ್ಸ್’ನಲ್ಲಿ ನಂದಿನಿ ಮೂರ್ತಿ ಅವರಿಗೆ ಸೀಮಂತ ಮಾಡಲಾಗಿದೆ.

ಜೀ ವಾಹಿನಿ ಈ ಪ್ರೋಮೊ ಹಂಚಿಕೊಂಡಿದ್ದು ಅದರಲ್ಲಿ ನಂದಿನಿ ಅವರು ʻʻಹೆಣ್ಣಾಗಿ ನನ್ನ ಜೀವನದ ಅತ್ಯಮೂಲ್ಯ ಕ್ಷಣʼʼ ಎಂದು ಖುಷಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Hitler Kalyana Serial: ಹಿಟ್ಲರ್‌ ಕಲ್ಯಾಣ ಧಾರಾವಾಹಿ ಖ್ಯಾತಿಯ ಲೀಲಾ ಹಿನ್ನೆಲೆ ಏನು?

ನಂದಿನಿ ಮೂರ್ತಿ ಪತಿ ಕಾರ್ತಿಕ್ ಅವರು ‘ದಾಸ ಪುರಂದರ’ ಧಾರಾವಾಹಿಯ ನಿರ್ಮಾಣ ಮಾಡಿದ್ದರು. ಈ ಹಿಂದೆ ನಂದಿನಿ ಮೂರ್ತಿ ಅವರು ‘ದೇವಿ’ , ಆಮೇಲೆ’ಚಿ ಸೌ ಸಾವಿತ್ರಿ’ ಮಿಲನ, ಧಾರಾವಾಹಿಯಲ್ಲಿ ನಟಿಸಿದ್ದರು.

ಈ ಖುಷಿ ಗೊತ್ತಾಗುತ್ತಿದ್ದಂತೆ ನಂದಿನಿ ಫ್ಯಾನ್ಸ್‌ ಶುಭ ಹಾರೈಸಿದ್ದಾರೆ. ಮಾತ್ರವಲ್ಲ ಆದಷ್ಟು ಬೇಗ ಸೀರಿಯಲ್‌ಗೆ ಮರಳಿ ಎಂದು ಕಮೆಂಟ್‌ ಮಾಡಿದ್ದಾರೆ.

Exit mobile version