Site icon Vistara News

Harish Raj : ತೆರೆ ಮೇಲೆ ನಿಜಕ್ಕೂ ತಾಳಿ ಕಟ್ತಾರಾ? ಎಷ್ಟು ಗಂಟು ಹಾಕ್ತಾರೆ?

In shooting Set really they tie knots in serial marriages

ಬೆಂಗಳೂರು: ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಾಯಕನು ನಾಯಕಿಗೆ ರಿಯಲ್‌ ಆಗಿ ತಾಳಿ ಕಟ್ಟುತ್ತಾನಾ ಎಂಬ ಸಂಶಯ ಬಹುತೇಕರದ್ದು. ಮದುವೆ ವಿಚಾರವಾಗಿಯೇ ಇಟ್ಟುಕೊಂಡು ಅದೆಷ್ಟೋ ಸಿನಿಮಾಗಳು ಬಂದು ಹೋಗಿವೆ. ಶಿವಣ್ಣ ನಟನೆಯ ‘ಕುರುಬನ ರಾಣಿ’ ಸಿನಿಮಾ ನೋಡಿದರೆ ಮುಗ್ಧನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ನಗ್ಮಾ ಜನಪ್ರಿಯ ನಟಿಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನಿಗೆ ಮದು ಮಗನ ವೇಷ ಹಾಕಿ ಮಂಟಪದಲ್ಲಿ ತಂದು ಕೂರಿಸಿ ನಾಯಕಿಗೆ ತಾಳಿ ಕಟ್ಟಲು ಹೇಳುತ್ತಾರೆ. ಆದರೆ ಆತನಿಗೆ ಅದು ರೀಲ್‌ ಎನ್ನುವುದು ಗೊತ್ತಿರುವುದಿಲ್ಲ. ಸೀನ್ ಮುಗಿದಾಕ್ಷಣ ನಾಯಕಿ ತಾಳಿ ಕಳಚಿಡುತ್ತಾಳೆ. ರೀಲಿನಲ್ಲಿ ಇದು ಆಕೆಗೆ ಎಷ್ಟನೇ ಮದುವೆಯೋ. ಆದರೆ ಈ ವ್ಯತ್ಯಾಸ ಗೊತ್ತಿಲ್ಲದೇ ಹಳ್ಳಿ ಹೈದ ಆಕೆಯನ್ನು ಸ್ವಂತ ಹೆಂಡತಿಯಂತೇ ಭಾವಿಸುತ್ತಾನೆ!

ಅದೇ ರೀತಿ ಅದೆಷ್ಟೋ ಪ್ರೇಕ್ಷಕರಿಗೆ ತೆರೆ ಮೇಲೆ ತಾಳಿ ನಿಜವಾಗಿಯೂ ಕಟ್ಟುತ್ತಾರಾ ಎಂಬ ಅನುಮಾನ ಇದೆ. ಇದೀಗ ಈ ಎಲ್ಲ ಪ್ರಶ್ನೆಗೆ ನಟ ಹರೀಶ್‌ ರಾಜ್‌ (Harish Raj) ವೀಕ್ಷಕರಿಗೆ ಉತ್ತರ ನೀಡಿದ್ದಾರೆ. ಹರೀಶ್‌ ರಾಜ್‌ ಇನ್‌ಸ್ಟಾದಲ್ಲಿ ವೀಕ್ಷಕರಿಗೆ ‘ಶೂಟಿಂಗ್‌ನಲ್ಲಿ ತಾಳಿ ಕಟ್ಟುವಾಗ ಎಷ್ಟು ಗಂಟು ಹಾಕ್ತೀವಿ?’ ಎಂದು ಫೋಟೊ ಜತೆಗೆ ಪ್ರಶ್ನೆ ಕೇಳಿದ್ದಾರೆ.

ಇತ್ತೀಚೆಗೆ ‘ಜೊತೆ ಜೊತೆಯಲಿ’ ಚಿತ್ರತಂಡ ಧಾರಾವಾಹಿಯನ್ನು ಕೊನೆಗೊಳಿಸಿತು. ಆರ್ಯವರ್ಧನ್ ಹಾಗೂ ಅನು ಸಿರಿಮನೆ ಮತ್ತೆ ಮದುವೆ ಆಗುವ ಸನ್ನಿವೇಶವದು. ಆರ್ಯವರ್ಧನ್ ಪಾತ್ರ ಮಾಡಿದ ಹರೀಶ್ ರಾಜ್‌ ಒಂದು ಪ್ರಶ್ನೆಯನ್ನು ವೀಕ್ಷಕರಿಗೆ ಕೇಳಿದ್ದಾರೆ. ‘ಶೂಟಿಂಗ್‌ನಲ್ಲಿ ತಾಳಿ ಕಟ್ಟೋವಾಗ ಎಷ್ಟು ಗಂಟು ಹಾಕ್ತೀವಿ?’ ಎಂದು. ಅದಕ್ಕೆ ಕುತೂಹಲಕರವಾಗಿ ನೆಟ್ಟಿಗರು ಕಮೆಂಟ್‌ ಮೂಲಕ ಹಲವು ಉತ್ತರಗಳನ್ನು ನೀಡಿದ್ದಾರೆ. ʻʻ’ನೀವು ತಾಳಿನೇ ಕಟ್ಟಿರಲ್ಲ. ಕಟ್ಟಿರುವ ತರಹ ತೋರಿಸ್ತೀರಾ ಅಷ್ಟೇʼʼ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ‘ನೀವು ತಾಳಿ ಕಟ್ಟೋದು ಕ್ಯಾಮೆರಾಗೆ. ಒಂದೇ ಗಂಟು ಹಾಕ್ತೀರಾ… ಎರಡು ಗಂಟು, ಮೂರು ಗಂಟು ಹಾಕೋ ತರಹ ಕೈ ಮೂವ್‌ಮೆಂಟ್ ಮಾಡುತ್ತೀರಾʼʼ ಎಂದು ಉತ್ತರ ನೀಡಿದ್ದಾರೆ!

ಇದನ್ನೂ ಓದಿ: Road Accident: ಮಕ್ಕಳೂ ಸೇರಿ 7 ಪಾದಚಾರಿಗಳ ಮೇಲೆ ಹರಿದ ಟಂಟಂ; ಕುಡಿದ ಅಮಲಿನಲ್ಲಿ ಘೋರ ಅವಘಡ!

ಇಂತಹ ಹಲವು ಅನುಮಾನಗಳಿಗೆ ಹರೀಶ್‌ ಅವರು ಉತ್ತರ ನೀಡಿ ʻʻಓ ಸ್ನೇಹಿತರೇ, ಇಂತಹ ಅದ್ಭುತವಾದ ಕಮೆಂಟ್‌ಗಳಿಗಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಉತ್ತರಗಳನ್ನೆಲ್ಲ ಓದಿ ಖುಷಿಯಾಯಿತು. ವಾಸ್ತವವಾಗಿ ನಾವು ಒಂದೇ ಶಾಟ್‌ನ ಬೇರೆ ಬೇರೆ ಆ್ಯಂಗಲ್‌ನಲ್ಲಿ ಶೂಟ್ ಮಾಡುತ್ತೇವೆ ಮತ್ತು ನಾವು ಕನಿಷ್ಠ ಐದಾರು ಬಾರಿ ಗಂಟು ಹಾಕಿರುತ್ತೇವೆʼʼ ಎಂದು ಉತ್ತರ ನೀಡಿ ಪ್ರೇಕ್ಷಕರ ಡೌಟ್‌ ಕ್ಲೀಯರ್‌ ಮಾಡಿದ್ದಾರೆ.

ಆರೂರು ಜಗದೀಶ್‌ ನಿರ್ದೇಶನದ ʼಜೊತೆಜೊತೆಯಲಿʼ ಧಾರಾವಾಹಿಯಲ್ಲಿ ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಹೊರಹಾಕಿದ ನಂತರ ಅವರ ಸ್ಥಾನಕ್ಕೆ ಹರೀಶ್‌ ರಾಜ್‌ ಅವರನ್ನು ಕರೆತರಲಾಗಿತ್ತು. ಅದಕ್ಕಾಗಿಯೇ ಕೆಲವು ಹೊಸ ಉಪಕಥೆಯನ್ನೂ ಪರಿಚಯಿಸಲಾಗಿತ್ತು.

Exit mobile version