Site icon Vistara News

Gurmeet Choudhary: ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿಗೆ ಸಿಪಿಆರ್ ನೀಡಿ ಬದುಕಿಸಿದ ನಟ ಗುರ್ಮೀತ್ ಚೌಧರಿ!

Gurmeet Choudhary

ಬೆಂಗಳೂರು: ಕಿರುತೆರೆ ನಟ ಗುರ್ಮೀತ್ ಚೌಧರಿ (Gurmeet Choudhary) ಮುಂಬೈನ ಬೀದಿಯಲ್ಲಿ ಕುಸಿದ ಬಿದ್ದ ವ್ಯಕ್ತಿಗೆ ಸಿಪಿಆರ್ ನೀಡಿದ್ದಾರೆ. ವ್ಯಕ್ತಿಯ ರಕ್ಷಣೆಗೆ ನಟ ಗುರ್ಮೀತ್ ಚೌಧರಿ ಮುಂದಾಗಿರುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಗುರ್ಮೀತ್ ಸಿಪಿಆರ್ ನೀಡಿದ ರೀತಿ ಸಿಪಿಆರ್ ಕಾರ್ಯವಿಧಾನವನ್ನು ಕಲಿಯಲು ಎಲ್ಲರೂ ಗಮನಹರಿಸಬೇಕು ಎಂತಲೂ ಕಮೆಂಟ್‌ ಮಾಡಿದ್ದಾರೆ. ಗುರ್ಮೀತ್ ಚೌಧರಿಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿಡಿಯೊದಲ್ಲಿ, ಗುರ್ಮೀತ್ ಚೌಧರಿ ಮುಂಬೈನ ಜನನಿಬಿಡ ರಸ್ತೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿಗೆ ಸಿಪಿಆರ್ ನೀಡುತ್ತಿರುವುದನ್ನು ಕಾಣಬಹುದು. ಎದೆಯನ್ನು ಪಂಪ್ ಮಾಡಿ, ಅವರ ಪಾದಗಳನ್ನು ಉಜ್ಜಲು ಬೇರೊಬ್ಬರು ನಟ ಕರೆಯುತ್ತಿರುವುದು ಕಂಡು ಬಂದಿದೆ. ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದ ನಂತರ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಗುರ್ಮೀತ್‌ ಅವರ ಗೆಸ್ಚರ್‌ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ನಟನನ್ನು ಹೊಗಳಿದರೆ ಇನ್ನೂ ಕೆಲವರು ʻʻಅವರ ಬಾಯಿಗೆ ಗಾಳಿಯನ್ನು ಊದಬೇಕಿತ್ತುʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಸಹಾಯ ಹಸ್ತವನ್ನು ನೀಡುವ ಬದಲು ಕುಸಿದ ವ್ಯಕ್ತಿಯ ವಿಡಿಯೊ ಬೇರೆ ಮಾಡಿದ್ದೀರಾʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಗುರ್ಮೀತ್ ಚೌಧರಿ ನಿಜವಾದ ಕಲಾವಿದ. ದೇವರು ಅವರನ್ನು ಕಾಪಾಡಲಿ’ʼಎಂದು ಕಮೆಂಟ್‌ ಮಾಡಿದ್ದಾರೆ.

ಗುರ್ಮೀತ್ 2008ರಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರಿರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಗೀತ್ ಹುಯಿ ಸಬ್ಸೆ ಪರಾಯಿ’ , ‘ಪುನರ್ ವಿವಾಹ’ ಧಾರಾವಾಹಿಗಳಲ್ಲಿ ಗುರ್ಮೀತ್ ನಟಿಸಿದ್ದರು. ‘ಝಲಕ್ ದಿಖಲಾ ಜಾ 5’, ‘ನಚ್ ಬಲಿಯೇ 6’, ‘ಖತ್ರೋಂಕೆ ಕಿಲಾಡಿ 5’ ರಿಯಾಲಿಟಿ ಶೋನಲ್ಲಿಯೂ ಗುರ್ಮೀತ್ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Madrasa Maulana: ಮದರಸಾದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೌಲ್ವಿ; ಅಕ್ಷರ ಕಲಿಸುವ ಹೆಸರಲ್ಲಿ ಅನಾಚಾರ!

ವೈಯಕ್ತಿಕ ವಿಚಾರಗಳಿಗೆ ನಟ ಹೆಚ್ಚಾಗಿ ಸುದ್ದಿಯಲ್ಲಿದ್ದರು. ‘ರಾಮಾಯಣ’ ಸಿನಿಮಾದಲ್ಲಿ ನಟಿಸಿದ್ದ ದೆಬಿನಾ ಬ್ಯಾನರ್ಜಿ ಜೊತೆಗೆ ಗುರ್ಮೀತ್ ಅವರು 2006ರಲ್ಲಿ ಗುಟ್ಟಾಗಿ ಮದುವೆಯಾಗಿದ್ದರು. 10 ವರ್ಷಗಳ ಬಳಿಕ ಈ ಜೋಡಿ ಬಂಗಾಳಿ ಸಂಪ್ರದಾಯದ ಪ್ರಕಾರ ಮರು ಮದುವೆ ಆಗಿತ್ತು.

Exit mobile version