Site icon Vistara News

Ishwar Thakur | ಡೈಪರ್‌ ಖರೀದಿಸಲೂ ಹಣವಿಲ್ಲ, ಹಳೆಯ ಪೇಪರ್‌ ಬಳಸುತ್ತಿದ್ದೇನೆ: ಕಿರುತೆರೆ ನಟ ಈಶ್ವರ್ ಠಾಕೂರ್ ಅಳಲು

Ishwar Thakur

ಬೆಂಗಳೂರು: ಕಿರುತೆರೆ ನಟ ಈಶ್ವರ್ ಠಾಕೂರ್ (Ishwar Thakur |) ಸದ್ಯ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಪ್ರಮುಖ ಪೋರ್ಟಲ್‌ಗೆ ನೀಡಿದ ಸಂದರ್ಶವೊಂದರಲ್ಲಿ ʻʻನಟ ತಾವು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದೇನೆʼʼ ಎಂದು ಬಹರಿಂಗಪಡಿಸಿದ್ದಾರೆ. ʻʻಕೋವಿಡ್‌ ಬಂದ ನಂತರ ಇಡೀ ಜಗತ್ತು ಸಾಂಕ್ರಾಮಿಕ ರೋಗದಿಂದ ಹದೆಗಟ್ಟಿತ್ತು. ಕೋವಿಡ್‌ ಪರಿಣಾಮ ಆರ್ಥಿಕವಾಗಿಯೂ ಬಹಳ ನಷ್ಟ ಅನುಭವಿಸಿದ್ದೇವುʼʼ ಎಂದು ಹೇಳಿಕೊಂಡಿದ್ದಾರೆ.

ಮೂತ್ರಪಿಂಡದ ಕಾಯಿಲೆಯಿಂಬ ಬಳಲುತ್ತಿರುವ ನಟ ಈಶ್ವರ್ ಠಾಕೂರ್
ಮೂತ್ರಪಿಂಡದ ಕಾಯಿಲೆಯಿಂದಾಗಿ ಈಶ್ವರ್ ಠಾಕೂರ್ ಅವರ ಕಾಲುಗಳು ಊತಗೊಂಡಿದ್ದು ಮತ್ತು ಅವರ ಮೂತ್ರದ ಹರಿವಿನ ಮೇಲೆ ಅವರಿಗೆ ನಿಯಂತ್ರಣವಿಲ್ಲ. ಹೀಗಾಗಿ ಕೆಲಸದಿಂದ ಬಹಳ ಸಮಯಗಳ ಕಾಲ ದೂರವಿದ್ದರು. ಕೆಲ ತಿಂಗಳ ಹಿಂದೆ ಅವರಿಗೆ ಕಿಡ್ನಿ ಸಂಬಂಧಿತ ಸಮಸ್ಯೆ ಇರುವುದು ಪತ್ತೆಯಾಗಿತ್ತು. ʻʻಯಾವುದೇ ಕೆಲಸವಿಲ್ಲದ ಕಾರಣ, ಡೈಪರ್‌ಗಳನ್ನು ಖರೀದಿಸಲೂ ಹಣವಿಲ್ಲ. ಇದರಿಂದಾಗಿ ಹಳೆಯ ಪತ್ರಿಕೆಗಳನ್ನು ಬಳಸುತ್ತೇನೆʼʼಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ನಟ “ನನ್ನ ಬಳಿ ಹಣವಿಲ್ಲದ ಕಾರಣ ವೈದ್ಯರಿಂದ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಮೊದಲು ನನ್ನ ಸ್ಥಿತಿಗೆ ನಾನು ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದೆ. ಬಳಿಕ ಅದನ್ನು ನಿಲ್ಲಿಸಿದೆ. ಇದೀಗ ನನ್ನ ಬಳಿ ಸ್ವಲ್ಪವೂ ಹಣ ಉಳಿದಿಲ್ಲʼʼ ಎಂದಿದ್ದಾರೆ.

ಇದನ್ನೂ ಓದಿ | Asha Parekh | ಬಾಲಿವುಡ್‌ ಟಾರ್ಗೆಟ್‌ ಆಗುತ್ತಿದೆ ಎಂದ ನಟಿ ಆಶಾ ಪರೇಖ್: ʻಪಠಾಣ್‌ʼ ವಿವಾದದ ಕುರಿತು ಹೇಳಿದ್ದೇನು?

ಅನಾರೋಗ್ಯ ಎದುರಿಸುತ್ತಿರುವ ಈಶ್ವರ್ ಅವರ ತಾಯಿ ಮತ್ತು ಸಹೋದರ
ಈಶ್ವರ್ ಠಾಕೂರ್ ಅವರ ತಾಯಿ ಮತ್ತು ಸಹೋದರ ಕೂಡ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ʻʻನನ್ನ ತಾಯಿ ಹಾಸಿಗೆ ಹಿಡಿದಿದ್ದಾರೆ, ಅರೆ ಪ್ರಜ್ಞಾವಸ್ಥೆಯಲ್ಲಿದ್ದಾರೆʼʼ ಎಂದು ಹೇಳಿದ್ದಾರೆ. “ಅವರು ಬಟ್ಟೆಯಲ್ಲೇ ಮೂತ್ರ ವಿಸರ್ಜಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಡೈಪರ್‌ಗಳನ್ನು ಬಳಸುತ್ತಿದ್ದರು. ಆದರೆ ಈಗ ನಾನು ಅವರಿಗೆ ಡೈಪರ್‌ಗಳನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ.” ಎಂದಿದ್ದಾರೆ. ಇದಲ್ಲದೆ ಈಶ್ವರ್ ಅವರ ಸಹೋದರ ಸಹ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹಣದ ಕೊರತೆಯಿಂದಾಗಿ ಅವರನ್ನು ನಾಸಿಕ್ ಬಳಿಯ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ.

ಕೈಬಿಟ್ಟ ಹಲವು ನಿರ್ಮಾಪಕರು, ಅವಕಾಶದಿಂದ ವಂಚಿತರಾದ ಈಶ್ವರ್ ಠಾಕೂರ್
ಹಲವು ನಿರ್ಮಾಪಕರು ಕೆಲಸ ಕೊಡುತ್ತಿಲ್ಲ ಎಂದು ಈಶ್ವರ್ ಠಾಕೂರ್ ಹೇಳಿದ್ದಾರೆ. ʻʻಹಲವಾರು ಆಡಿಷನ್‌ಗಳನ್ನು ಈಗಾಗಲೇ ನೀಡಿದ್ದೇನೆ. ನನ್ನ ಸ್ಥಿತಿಯ ಬಗ್ಗೆ ನಿರ್ಮಾಪಕರು ತಿಳಿದಾಗ ಕೈಬಿಟ್ಟರು. ಸೆಟ್‌ಗಳಲ್ಲಿ ನನಗೆ ಏನಾದರೂ ಸಂಭವಿಸಿದರೆ ಅವರೇ ಹೊಣೆಯಾಗುತ್ತಾರೆ ಎಂದು ಅವರು ಭಾವಿಸುತ್ತಾರೆʼʼ ಎಂದು ಹೇಳಿದರು.

ʻʻಇಂಡಸ್ಟ್ರಿಯಲ್ಲಿ ನನ್ನ ಹಲವಾರು ಸ್ನೇಹಿತರು ಮತ್ತು ಸಹೋದ್ಯೋಗಿಗಳು ಆರ್ಥಿಕವಾಗಿ ಸಹಾಯ ಮಾಡಿದರು. ಆದರೆ ಕೊರೊನಾದಿಂದಾಗಿ ಅವರು ಸಹಾಯ ಮಾಡುವುದು ನಿಲ್ಲಿಸಿದರುʼʼ ಎಂದಿದ್ದಾರೆ. ʻʻ ನಾನು ತುಂಬ ಗಂಭೀರ ಪರಿಸ್ಥಿತಿಯಲ್ಲಿದ್ದೇನೆ. ಈ ಜೀವನಕ್ಕಿಂತ ಸಾವು ಉತ್ತಮ ಎಂದೆನಿಸಿದೆ. ಆದರೆ ನಾನು ನನ್ನ ತಾಯಿ ಮತ್ತು ಸಹೋದರನನ್ನು ಮಾತ್ರ ಈ ಸ್ಥಿತಿಯಲ್ಲಿ ಬಿಡಲು ಸಾಧ್ಯವಿಲ್ಲ. ಆದ್ದರಿಂದ ನಾನು ಹೋರಾಟವನ್ನು ಮುಂದುವರಿಸುತ್ತೇನೆʼʼ ಎಂದಿದ್ದಾರೆ.

ನಟ ʻಭಾಬಿಜಿ ಘರ್ ಪರ್ ಹೈʼ, ʻಎಫ್‌ಐಆರ್ʼ, ʻಜಿಜಾಜಿ ಚಾಟ್ ಪರ್ ಹೇʼ, ʻಮೇ ಐ ಕಮ್ ಇನ್ ಮೇಡಂʼ ಹೀಗೆ ಹಲವಾರು ಟಿವಿ ಶೋಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kannada New Movie | ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಮಿಂಚಲಿದ್ದಾರೆ ʻವಿಕ್ರಾಂತ್‌ ರೋಣʼ ಪಿಟಿ ಮೇಷ್ಟ್ರು ವಜ್ರಧೀರ್ ಜೈನ್

Exit mobile version