Site icon Vistara News

Jodi No 1: ಜೋಡಿ ನಂ. 1ನಲ್ಲಿ ಗೆದಿದ್ದು ಯಾರು? ಅದ್ಧೂರಿಯಾಗಿ ನಡೀತು ಗ್ರ್ಯಾಂಡ್‌ ಫಿನಾಲೆ!

Jodi No 1 Who won first Prize

ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಹಲವಾರು ರಿಯಾಲಿಟಿ ಶೋಗಳು ಪ್ರೇಕ್ಷಕರ ಮನ ಸೆಳೆದಿವೆ. ಇದರಲ್ಲಿ ಜೋಡಿ ನಂ. 1 ರಿಯಾಲಿಟಿ ಶೋ ಕೂಡ ಒಂದು. ಜೋಡಿ ನಂ. 1 (Jodi No 1) ಸೀಸನ್‌ 2ರಲ್ಲಿ ಕಿರುತೆರೆ ನಟಿ ಲಾವಣ್ಯ ಹಾಗೂ ಕಿರುತೆರೆ ನಟ ಶಶಿ ಅವರು ಈ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ಲಾವಣ್ಯ ಶಶಿ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ. ʻʻನೀವು ಏನು ಪ್ರೀತಿ ವಿಶ್ವಾಸ ಇಟ್ಟು ವೋಟ್ ಮಾಡಿದ್ದೀರೋ ಅದನ್ನ ನಾವು ಕಾಪಾಡ್ಕೊಂಡು ಕೊನೆಯ ತನಕ ಹೀಗೆ ಮುಂದುವರಿಯುತ್ತೇವೆʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Jodi No 1: ಇದೇ ಶನಿವಾರದಿಂದ ಮನರಂಜನೆಯ ಹಂಗಾಮ; ಪ್ರೋಮೊ ಕಂಡು ಪ್ರೇಕ್ಷಕರು ಫುಲ್‌ ಖುಷ್‌!

“ಜೋಡಿ ನಂ 1 ಸೀಸನ್ 2” ರ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ಗಣೇಶ್ ಕಾರಂತ್-ಶ್ರೀವಿದ್ಯಾ ಜೋಡಿ ಪಡೆದುಕೊಂಡಿದೆ.

ಶೋ ನ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಮತ್ತೋರ್ವ ಕಿರುತೆರೆ ಜೋಡಿ ಪಡೆದುಕೊಂಡಿದೆ. ಕಿರುತೆರೆ ನಟಿ ಸುನೇತ್ರಾ ಪಂಡಿತ್ ಹಾಗೂ ಕಿರುತೆರೆ ನಟ ರಮೇಶ್ ಪಂಡಿತ್ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ಕಾರ್ಯಕ್ರಮಕ್ಕೆ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್ ಅವರು ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರೆ, ನೆನಪಿರಲಿ ಖ್ಯಾತಿಯ ಸ್ಯಾಂಡಲ್‌ವುಡ್‌ನ ಲವ್ಲಿ ಸ್ಟಾರ್ ಪ್ರೇಮ್ ಮತ್ತು ನಟಿ ಮಾಳವಿಕಾ ಅವಿನಾಶ್ ಅವರು ಪ್ರಮುಖ ತೀರ್ಪುಗಾರರಾಗಿ ಸಾರಥ್ಯ ವಹಿಸಿದ್ದಾರೆ. 

Exit mobile version