ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ (Jote Joteyali) ಖ್ಯಾತಿಯ ನಟ ಅನಿರುದ್ಧ್ ಅವರು ನಿರ್ಮಾಪಕ ಆರೂರು ಜಗದೀಶ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಟಿಆರ್‌ಪಿ ಬಗ್ಗೆ ಅನಿರುದ್ಧ್ ಅವರಿಗೆ ತಿಳಿವಳಿಕೆ ಇಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ʻʻಎಷ್ಟೋ ಸಿನಿಮಾಗಳನ್ನು ನಾನು ಮಾಡಿದ್ದೇನೆ. ನನಗೆ ಫೇಮ್ ಇದೇನು ಹೊಸತಲ್ಲ. ಫೇಮ್ ಇರುವ ಫ್ಯಾಮಿಲಿಯವನು ನಾನು. ಮತ್ತೆ ಯಾಕೆ ಬೇಕು ನನಗೆ ಫೇಮ್ʼʼ ಎಂದು ಪ್ರಶ್ನಿಸಿದ್ದಾರೆ.
ʻʻಒಂದು ವರ್ಷದ ನಂತರ ನಾನು ಸಂಭಾವನೆ ಹೆಚ್ಚಿಸಲು ಕೇಳಿದ್ದು ನಿಜ. ಹಗಲು ರಾತ್ರಿ ನಾನು ಕೆಲಸ ಮಾಡಿದ್ದೇನೆ. ಆಗಸ್ಟ್‌ನಲ್ಲಿ ಸೀರಿಯಲ್ ಮುಗಿಸುತ್ತೇವೆ ಎಂದು ಹೇಳಿದ್ದರು. ಸೀರಿಯಲ್ ಇನ್ನೇನು ಮುಗಿಯುವ ಹಂತದಲ್ಲಿ ಇದೆ ಎಂಬ ಕಾರಣಕ್ಕೆ ನಾನು ಸಂಬಳ ಏರಿಸಲು ಹೇಳಿದ್ದೆ. ಮತ್ತೆ ಎಲ್ಲಾದರೂ ಸೀರಿಯಲ್‌ಗೆ ಕರೆದರೆ ನಾನು ಹೋಗಲು ಸಿದ್ಧ. ಆದರೆ ಇಷ್ಟೆಲ್ಲಾ ಆರೋಪ ಮಾಡಿದವರ ಮಧ್ಯೆ ನಟಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಅದು ನನ್ನ ನಿಷ್ಠೆಯ ಪ್ರಶ್ನೆ. ಅಭಿಮಾನಿಗಳಿಗೆ ಹಾಗೂ ನನ್ನ ಅನ್ನದಾತ ಚಾನೆಲ್‌ಗೆ ಸದಾ ನಾನು ಚಿರಋಣಿ. ನನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರವನ್ನು ದಯವಿಟ್ಟು ನಿಲ್ಲಿಸಿ ʼʼ ಎಂದು ಅನಿರುದ್ಧ್ ಹೇಳಿದರು.
ಇದನ್ನೂ ಓದಿ | Jote Joteyali | ಧಾರಾವಾಹಿ ಸಕ್ಸೆಸ್‌ಗೆ ನಾನೇ ಕಾರಣ ಎಂದುಕೊಂಡಿಲ್ಲ, ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದ ಅನಿರುದ್ಧ್
ಆರೂರು ಜಗದೀಶ್ ಹೇಳಿದ್ದೇನು?
ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೂರು ಜಗದೀಶ್ ʻʻನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಅವರಿಂದ ಶೂಟಿಂಗ್‌ಗೆ ತುಂಬಾ ಅಡಚಣೆ ಆಗಿದೆ. ಈ ಧಾರಾವಾಹಿಗೆ ಸಾಕಷ್ಟು ದುಡ್ಡು ಹಾಕಿದ್ದೇನೆ. ಆದರೂ ಅನಿರುದ್ಧಗೆ ನಿರ್ಮಾಪಕರ ಸವಾಲಿಗೆ ಸಾಥ್ ಕೊಡಬೇಕು ಎಂದು ಅನಿಸಿಲ್ಲ. ಸಂಬಳದ ವಿಚಾರಕ್ಕೆ ಸೆಟ್‌ನಲ್ಲಿ ಅನಿರುದ್ಧ್ ಕೂಗಾಡಿದ್ದರು. ಈ ಬಗ್ಗೆ ಅವರು ನಮ್ಮ ಜತೆ ಪ್ರತ್ಯೇಕವಾಗಿ ಮಾತನಾಡಬಹುದಿತ್ತುʼʼ ಎಂದಿದ್ದರು
ಧಾರಾವಾಹಿಯ ಪಾತ್ರದ ಬದಲಾವಣೆ ಸಾಧ್ಯತೆಗಳ ಬಗ್ಗೆ ಅವರು ಪ್ರತಿಕ್ರಿಯಿಸಿ ʻʻಬೇರೆ ಪಾತ್ರ ಬಂದರೆ ಮೊದಮೊದಲು ಪ್ರೇಕ್ಷಕರಿಗೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ನನಗಾಗಿರುವ ನೋವನ್ನು ನಾನು ಚಾನೆಲ್ ಗಮನಕ್ಕೆ ತಂದಿದ್ದೇನೆ. ಸೀರಿಯಲ್ ಮಧ್ಯ ಭಾಗದಲ್ಲಿ ಟಿಆರ್‌ಪಿ ಕಡಿಮೆ ಆಗಲು ಅವರೇ ಕಾರಣʼʼ ಎಂದು ಆರೋಪಿಸಿದ್ದರು.
ಇದನ್ನೂ ಓದಿ | Jote Joteyali | ಧಾರಾವಾಹಿ ಸಕ್ಸೆಸ್‌ಗೆ ನಾನೇ ಕಾರಣ ಎಂದುಕೊಂಡಿಲ್ಲ, ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದ ಅನಿರುದ್ಧ್