ಬೆಂಗಳೂರು: ಜೊತೆ ಜೊತೆಯಲಿ (Jote Joteyali ) ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ ನಟ ಅನಿರುದ್ಧ ಅವರನ್ನು ಕೈಬಿಡಲಾಗಿದೆ. ಆದರೆ, ಮುಂದೆ ಯಾರು ಎನ್ನುವ ವಿಚಾರ ಬಹುಚರ್ಚಿತ ವಿಷಯವಾಗಿದೆ. ಇಷ್ಟರ ಮಧ್ಯೆ ನಿರ್ಮಾಪಕ ಆರೂರು ಜಗದೀಶ್ ಧಾರಾವಾಹಿ ಕಥೆ, ಟಿಆರ್‌ಪಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದ್ದು, ಆಡಿಯೊ ವೈರಲ್ ಆಗಿದೆ.
ನಿರ್ಮಾಪಕ ಆರೂರು ಜಗದೀಶ್ ಮಾತನಾಡಿ ʻʻಜೊತೆಜೊತೆಯಲಿ ಧಾರಾವಾಹಿಯನ್ನು ಕಥೆಯಾಗಿ ನೋಡಬೇಕು. ಈಗಾಗಲೇ ಫ್ಲಾಶ್‌ಬ್ಯಾಕ್ ಶೂಟ್ ಆಗಿದೆ. ರಾಜನಂದಿನಿ ಪಾತ್ರ ಎಂಟ್ರಿ ಕೂಡ ಆಗಿದೆ. ಇದೀಗ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅನಿರುಧ್ಧ್ ಸರ್ ಯಾವತ್ತಿದ್ದರೂ ಹೀರೋನೆ. ಅವರು ವಿಲನ್ ಅಲ್ಲ. ಫ್ಲಾಶ್ ಬ್ಯಾಕ್ ಇಂದ ಬಂದ ಮೇಲೆ ಹೀರೋಯಿಸಮ್ ಅನ್ನು ರಿವೀಲ್ ಮಾಡುತ್ತೇವೆ. ಕಥೆಯಲ್ಲಿ ಟ್ವಿಸ್ಟ್‌ಗಳು ಇವೆ. ದಿಢೀರ್ ಎಂದು ಬದಲಾವಣೆ ಮಾಡಲು ಸಾಧ್ಯವಿಲ್ಲ. ಕಥೆಯಲ್ಲಿ ವಿಭಿನ್ನತೆ ಇರಬೇಕು. ಇಲ್ಲವಾದರೆ ಯಾರೂ ನೋಡುವುದಿಲ್ಲ. ಈ ಸಂದೇಶವನ್ನು ಎಲ್ಲರಿಗೂ ತಿಳಿಸಿ. ಟಿಆರ್‌ಪಿ ಯಾವುದೂ ಮುಖ್ಯವಲ್ಲ. ನಮ್ಮ ಸಿರಿಯಲ್‌ಗೆ ನಮ್ಮದೇ ಆದ ಅಭಿಮಾನಿ ವರ್ಗಗಳು ಇವೆ. ಜನ ನಮ್ಮ ಕಲಾವಿದರನ್ನು ಗುರುತಿಸುತ್ತಾರೆ ಎಂದರೆ ನಮ್ಮ ಧಾರಾವಾಹಿ ಪಾಪ್ಯುಲಾರಿಟಿ ಇದೆ. ಟಿಆರ್‌ಪಿ ಇದೆ ಎಂಬ ಅಂಶವನ್ನು ಬಿಟ್ಟು ಬಿಡಿ. ಅಭಿಮಾನಿಗಳ ಸಪೋರ್ಟ್ ನಮಗೆ ಮುಖ್ಯʼʼ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Jote joteyali | ಫೇಮ್ ಇರುವ ಫ್ಯಾಮಿಲಿಗೆ ಸೇರಿದವನು ನಾನು, ಅಪಪ್ರಚಾರ ಬಿಡಿ ಎಂದ ಅನಿರುದ್ಧ್
ನಟ ಅನಿರುದ್ಧ್ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಬಹಿಷ್ಕರಿಸಲು ತೀರ್ಮಾನಿಸಿದೆ. ಆಯ್ಕೆ ಮಾಡಿಕೊಳ್ಳದಿರಲು ತೀರ್ಮಾನಿಸಿರುವ ಬಗ್ಗೆ ವೀಕ್ಷಕ ವಲಯದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ʻಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಅವರು ಇಲ್ಲದೆ ಹೋದರೆ ಧಾರಾವಾಹಿಯನ್ನೇ ನೋಡುವುದಿಲ್ಲʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪ್ರ್ರೇಕ್ಷಕರು ಕಮೆಂಟ್ ಮಾಡಿದ್ದರು. ಧಾರಾವಾಹಿಯಲ್ಲಿ ಪಾತ್ರ ಬದಲಾವಣೆ ಒಂದು ವೇಳೆ ಆದರೆ ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ | Jote Joteyali | ಧಾರಾವಾಹಿ ಸಕ್ಸೆಸ್‌ಗೆ ನಾನೇ ಕಾರಣ ಎಂದುಕೊಂಡಿಲ್ಲ, ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದ ಅನಿರುದ್ಧ್