Site icon Vistara News

Jote Joteyali | ಆರ್ಯವರ್ಧನ್‌ ಜಾಗಕ್ಕೆ ಹರೀಶ್‌ ರಾಜ್?; ಹೌದು, ಈಗಲೇ ಹೇಳೋಕೆ ಆಗಲ್ಲ ಅಂದ್ರು ನಟ!

Jote Joteyali

ಬೆಂಗಳೂರು: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂದು ತೋರಿಸಿಕೊಟ್ಟ ಧಾರಾವಾಹಿ ಎಂದರೆ ಜೊತೆ ಜೊತೆಯಲಿ (Jote Joteyali). ಆರ್ಯವರ್ಧನ್‌ ಪಾತ್ರದ ಮೂಲಕ ಮಿಂಚಿದ್ದ ಅನಿರುದ್ಧ ಅವರು ಕಿರುತೆರೆಯಿಂದ ಬ್ಯಾನ್‌ ಆಗಿದ್ದಾರೆ. ಇದರ ಬೆನ್ನಲ್ಲೆ ಆರ್ಯವರ್ಧನ್‌ ಪಾತ್ರಕ್ಕೆ ಯಾರು ಬರಬಹುದೆಂಬ ಚರ್ಚೆ, ಕುತೂಹಲ ಇರುವ ಬೆನ್ನಲ್ಲೇ ನಿರ್ದೇಶಕ ಅನೂಪ್ ಭಂಡಾರಿ, ನಟ ಹರೀಶ್ ರಾಜ್ ಹೆಸರು ಕೇಳಿಬಂದಿತ್ತು. ಈಗ ಇದರ ಬಗ್ಗೆ ಹರೀಶ್‌ ರಾಜ್‌ ಸ್ಪಷ್ಟನೆ ಕೊಟ್ಟಿದ್ದಾರೆ.

ನಿರ್ಮಾಪಕ ಆರೂರು ಜಗದೀಶ್‌ ಅವರು ಮೊದಲೇ ನಾಯಕನನ್ನು ಆಯ್ಕೆ ಮಾಡಿ ನಂತರ ಅನಿರುದ್ಧ ಅವರಿಗೆ ಸೀರಿಯಲ್‌ನಿಂದ ಗೇಟ್‌ಪಾಸ್‌ ಕೊಟ್ಟಿದ್ದಾರಾ ಎಂಬ ಪ್ರಶ್ನೆಗಳು ಮೂಡಿತ್ತು. ಈ ಗೊಂದಲಕ್ಕೆ ತೆರೆ ಬಿದ್ದಿದ್ದು, ನಟ ಹರೀಶ್‌ ರಾಜ್‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕರೆ ಬಂದಿರೋದು ನಿಜ

ʻʻಸೀರಿಯಲ್‌ನಿಂದ ಕರೆ ಬಂದಿದ್ದು ಹೌದು. ಯಾವ ಪಾತ್ರಕ್ಕೆ ಎಂಬುದು ನನಗೆ ಇನ್ನೂ ತಿಳಿದಿಲ್ಲ. ಇನ್ನು ಆರ್ಯವರ್ಧನ್‌ ಪಾತ್ರ ಕೊಟ್ಟರೆ ಖುಷಿಯ ವಿಚಾರ. ಈ ಧಾರಾವಾಹಿ ತಂಡ ಸೇರುವ ಬಗ್ಗೆ ಮಾತುಕತೆ ಆಗಬೇಕಿದೆ. ಹಾಗಾಗಿ ಈಗಲೇ ಏನೂ ಹೇಳಲು ಸಾಧ್ಯವಿಲ್ಲ” ಎಂದು ಹರೀಶ್‌ ರಾಜ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ | Jote Joteyali | TRP ಅಲ್ಲ, ಕಥೆ ಬಹಳ ಮುಖ್ಯ: ಅಭಿಮಾನಿಗಳ ಬೆಂಬಲ ನಿರೀಕ್ಷಿಸಿದ ಆರೂರು ಜಗದೀಶ್‌!

೭೦ ಸಿನಿಮಾಗಳಲ್ಲಿ ನಟನೆ
ಹರೀಶ್‌ ರಾಜ್‌ ಈಗಾಗಲೇ ನಟನಾ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೌಂದರ್ಯ ನಟನೆಯ ದೋಣಿ ಸಾಗಲಿ ಚಿತ್ರದ ಮೂಲಕ ಹರೀಶ್ ರಾಜ್ ಸಿನಿಪಯಣ ಆರಂಭವಾಯಿತು. ಹರೀಶ್ ಇದುವರೆಗೂ 70 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹರೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿದ ಭಕ್ತಿ ಪ್ರಧಾನ ಶ್ರೀ ಸತ್ಯನಾರಾಯಣ ಸಿನಿಮಾದಲ್ಲಿ 16 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಅವರ ಹೆಸರು ಸೇರ್ಪಡೆಗೊಂಡಿತ್ತು.

ನಟ ಅನಿರುದ್ಧ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಆಯ್ಕೆ ಮಾಡಿಕೊಳ್ಳದಿರಲು ತೀರ್ಮಾನಿಸಿರುವ ಬಗ್ಗೆ ವೀಕ್ಷಕ ವಲಯದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆರ್ಯವರ್ಧನ್‌ ಪಾತ್ರದಲ್ಲಿ ʻʻಅನಿರುದ್ಧ ಅವರು ಇಲ್ಲದೆ ಹೋದರೆ ಧಾರಾವಾಹಿಯನ್ನೇ ನೋಡುವುದಿಲ್ಲʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ‌ ಕೆಲವು ಪ್ರ್ರೇಕ್ಷಕರು ಕಮೆಂಟ್‌ ಮಾಡಿದ್ದರು. ಇದೀಗ ಪಾತ್ರದ ಬದಲಾವಣೆಯನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ | Jote joteyali | ಫೇಮ್‌ ಇರುವ ಫ್ಯಾಮಿಲಿಗೆ ಸೇರಿದವನು ನಾನು, ಅಪಪ್ರಚಾರ ಬಿಡಿ ಎಂದ ಅನಿರುದ್ಧ್‌

Exit mobile version