ಬೆಂಗಳೂರು: ಕನ್ನಡದಲ್ಲಿ ‘ಜೋಗುಳ’ (Jyothi Rai), ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಜನಪ್ರಿಯ ನಟಿ ಸದ್ಯ ವೈಕ್ತಿಕ ವಿಚಾರಗಳಿಗೆ ಸುದ್ದಿಯಾಗಿದ್ದಾರೆ. 20ನೇ ವರ್ಷಕ್ಕೆ ಮದುವೆಯಾದ ಇವರಿಗೆ ಓರ್ವ ಪುತ್ರನೂ ಇದ್ದಾನೆ. ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಈ ವಿಚಾರ ಸಖತ್ ಸುದ್ದಿಯಾಗಿತ್ತು. ಇದೀಗ ನಟಿ ‘ಶುಕ್ರ’, ‘ಮಾತರಾನಿ ಮೌನಮಿದಿ’, ‘ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸುರೇಶ್ ಜತೆಗಿರುವ ಫೋಟೊಗಳನ್ನು ನಟಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಜ್ಯೋತಿ ರೈ ಕೇವಲ ಕನ್ನಡ ಮಾತ್ರವಲ್ಲ ‘ಸೀತಾರಾಮ ಕಲ್ಯಾಣ’ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕನ್ಯಾದಾನಂ’ ಧಾರಾವಾಹಿ ಮೂಲಕ ಆಕೆ ತೆಲುಗು ಕಿರುತೆರೆಗೆ ಪರಿಚಿತರಾಗಿದ್ದರು. ‘ಗುಪ್ಪೆಡಂತ ಮನಸು’ ಧಾರಾವಾಹಿ ಪಾತ್ರ ಒಳ್ಳೆ ಹೆಸರು ತಂದುಕೊಂಡಿತ್ತು.
ಇದನ್ನೂ ಓದಿ: Murder Case : ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ; ರಕ್ತ ಸಂಬಂಧಿಗಳ ಕ್ರೌರ್ಯಕ್ಕೆ ಪ್ರಾಣ ಬಿಟ್ಟ
20 ನೇ ವಯಸ್ಸಿಗೆ ಮದುವೆಯಾದ ಜ್ಯೋತಿ ರೈ
ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು.20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .ಜ್ಯೋತಿ ರೈ 20ನೇ ವಯಸ್ಸಿನಲ್ಲೇ ಮದುವೆ ಆಗಿದ್ದರು. ನೆಟ್ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.
ಆಟಿಸಂ ಕಾಯಿಲೆಯಿಂದ ಬಳಲಿದ್ದ ಮಗ
ಜ್ಯೋತಿ ರೈ ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಮಗನಿಗೆ ಒಂದು ವರ್ಷ ತುಂಬಿದ ಬಳಿಕ ಆತ ಯಾರೊಂದಿಗೆ ಐ ಕಾಂಟ್ಯಾಕ್ಟ್ ಮಾಡಿ ಮಾತನಾಡಿಸುತ್ತಿರಲಿಲ್ಲ. ಇಎನ್ಟಿ ಡಾಕ್ಟರ್ ಬಳಿ ಹೋದಾಗಲೂ ಯಾವುದೇ ಸಹಾಯವಾಗಲಿಲ್ಲ. ಬಳಿಕ ಥೆರಫಿ, ಶ್ಯಾಡೋ ಟೀಚರ್ ಮುಖಾಂತರ ಜ್ಯೋತಿ ರೈ ಪುತ್ರ ಬೆಳವಣಿಗೆಗೆ ಸಹಾಕಾರಿ ಆಗಿದೆ ಎಂದು ನಟಿ ಹಿಂದೊಮ್ಮೆ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Rekha Actress: ಸೆಕ್ರೆಟರಿ ಜತೆಗೆ ರೇಖಾ ಲಿವ್ ಇನ್ ರಿಲೇಶನ್ಶಿಪ್; ಪತಿ ಆತ್ಮಹತ್ಯೆಯ ಆಘಾತಕಾರಿ ನ್ಯೂಸ್ ಹೊರಬಿತ್ತು!
ಅನುಮಾನಕ್ಕೆ ಕಾರಣವಾಯ್ತು ಜ್ಯೋತಿಪುರ್ವಜ್ ಹ್ಯಾಷ್ಟ್ಯಾಗ್ !
ಇದೇ ವಿಚಾರ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಜ್ಯೋತಿ ರೈ ಹಾಗೂ ಸುರೇಶ್ ಕುಮಾರ್ ಆತ್ಮೀಯವಾಗಿರುವ ಫೋಟೊಗಳಿಗೆ ನೆಟ್ಟಿಗರು ಕಮೆಂಟ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಜ್ಯೋತಿ ರೈ ಈಗ ‘ಪ್ರೆಟಿ ಗರ್ಲ್’ ಎನ್ನುವ ವೆಬ್ ಸೀರಿಸ್ನಲ್ಲಿ ನಟಿಸಿದ್ದಾರೆ. ಅದರ ಪೋಸ್ಟರ್ ಇತ್ತೀಚಿಗೆ ರಿಲೀಸ್ ಆಗಿತ್ತು. ಶೀಘ್ರದಲ್ಲೇ ಆ ವೆಬ್ ಸಿರೀಸ್ ರಿಲೀಸ್ ಆಗಲಿದೆ.ಇನ್ನು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗಳಲ್ಲಿ ಜ್ಯೋತಿಪುರ್ವಜ್ ಹ್ಯಾಷ್ಟ್ಯಾಗ್ (#Jyothipurvaj)ಹಾಕುತ್ತ ಬರುತ್ತಿದ್ದಾರೆ ಜ್ಯೋತಿ ರೈ. ಇವೆಲ್ಲ ಗಮನಿಸಿದ ನೆಟ್ಟಿಗರು ಇಬ್ಬರ ಮಧ್ಯೆ ಸಂಬಂಧ ಇರೋದು ಗ್ಯಾರೆಂಟಿ ಎನ್ನುತ್ತಿದ್ದಾರೆ.