Site icon Vistara News

Kaatera Movie: ಅಕುಲ್ ಕಂಡಾಗ ಅನುಶ್ರೀಗೆ ಆಗೈತಂತೆ ಶ್ಯಾನೆ ಪಿರೂತಿ!

pasandagavane song reels by anushree and akul balaji

ಬೆಂಗಳೂರು: ಈಗಾಗಲೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Kaatera Movie) ಅಭಿನಯದ `ಕಾಟೇರ’ ಸಿನಿಮಾ ಭಾರಿ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್‌ಗೂ ಮುಂಚೆ ಹಿಟ್‌ ಆಗಿದ್ದು, `ಪಸಂದಾಗವ್ನೆ’ ಹಾಡು. ಈ ಹಾಡು ರಿಲೀಸ್‌ ಆಗಿದ್ದೇ ತಡ ಅದೆಷ್ಟೋ ದಚ್ಚು ಫ್ಯಾನ್ಸ್‌ ಈ ಹಾಡಿಗೆ ರೀಲ್ಸ್‌ ಮಾಡಿದ್ದೂ ಇದೆ. ಇದೀಗ ಆ್ಯಂಕರ್​ ಅನುಶ್ರೀ ಹಾಗೂ ನಿರೂಪಕ  ಅಕುಲ್‌ ಬಾಲಾಜಿ ಈ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ.

ಡ್ಯಾನ್ಸ್‌ ಮಾಡುವಲ್ಲಿ ಅನುಶ್ರೀ ಅವರು ಎತ್ತಿದ ಕೈ. ಯಾವುದೇ ಟ್ರೆಂಡ್‌ ಸಾಂಗ್‌ ಇರಲಿ ಸಲೀಸಾಗಿ ಹಾಡಿಗೆ ರೀಲ್ಸ್‌ ಮಾಡುತ್ತಾರೆ. ಅಕುಲ್ ಕೂಡ ಶಾಸ್ತ್ರೀಯ ನೃತ್ಯ ಕಲಾವಿದರು ಎನ್ನುವುದು ಕೆಲವೇ ಮಂದಿಗೆ ತಿಳಿದಿದೆ. 16ನೇ ವಯಸ್ಸಿನಲ್ಲಿ ʻಉಷಾ ದಾತಾರ್ʼ ಅವರಿಂದ ಭರತನಾಟ್ಯ ತರಬೇತಿ ಪಡೆದಿದ್ದಾರೆ. ಕತಕ್ ನೃತ್ಯ ಕೂಡ ಕಲಿತ್ತಿದ್ದಾರೆ. ಇದೀಗ ʻಪಸಂದಾಗವ್ನೆʼ ಹಾಡಿಗೆ ಅನು ಜತೆ ಅಕುಲ್‌ ಕೂಡ ಚೆನ್ನಾಗಿಯೇ ಸ್ಟೆಪ್‌ ಹಾಕಿದ್ದಾರೆ. ಈ ವಿಡಿಯೊವನ್ನು ಜೀ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದೆ. ಅಕುಲ್ ಕಂಡಾಗ ಅನುಶ್ರೀಗೆ ಆಗೈತಂತೆ ಶ್ಯಾನೆ ಪಿರೂತಿ! ಎನ್ನುವ ಶೀರ್ಷಿಕೆ ಕೊಟ್ಟು ಇದನ್ನು ಶೇರ್‌ ಮಾಡಿಕೊಂಡಿದೆ.

ʻನಿಮ್ಮ ಡ್ಯಾನ್ಸ್ ತುಂಬಾ ಪಸಂದಾಗಿದೆʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʻಅನು ಅವರೇ ನಿಮ್ಮ ಡ್ರೆಸ್ ತುಂಬಾ ಚೆನ್ನಾಗಿ ಇದೆʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻಅಕುಲ್‌ ನನ್ನ ನೆಚ್ಚಿನ ನಿರೂಪಕʼ ಎಂದು ಕಮೆಂಟ್‌ ಮಾಡಿದ್ದಾರೆ. ಅನುಶ್ರೀ ಅವರು ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ʻಸರಿಗಮಪʼ, ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ, ʻಕುಣಿಯೋಣು ಬಾರಾʼ, ʻಕಾಮಿಡಿ ಕಿಲಾಡಿಗಳುʼ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡಿದ್ದಾರೆ. ʻಬೆಂಕಿಪೊಟ್ಣ’ ಸಿನಿಮಾ ಇವರ ಮೊದಲ ಸಿನಿಮಾ. ಅನುಶ್ರೀ ಆ್ಯಂಕರ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿರುವ ಅನುಶ್ರೀ ಇದರಲ್ಲಿ ಸಿನಿಮಾ ತಾರೆಯರ ಸಂದರ್ಶನ ಮಾಡುತ್ತಾರೆ.

ಅಕುಲ್‌ ಬಾಲಾಜಿ ʻಗುಪ್ತ ಗಾಮಿನಿʼ, ʻಯಾವ ಜನ್ಮದ ಮೈತ್ರಿʼ, ʻಜಗಳಗಂಟಿಯರುʼ ಸೇರಿದಂತೆ ಕೆಲ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ʻಹಳ್ಳಿ ಹೈದ ಪ್ಯಾಟೆಗ್ ಬಂದʼ, ʻಪ್ಯಾಟೆ ಮಂದಿ ಕಾಡಿಗ ಬಂದ್ರುʼ ಸೇರಿದಂತೆ 30ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

ಇದನ್ನೂ ಓದಿ: Kaatera Movie: ಬಾಕ್ಸ್‌ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌!

ಅನುಶ್ರೀ, ಅಕುಲ್‌ ಡ್ಯಾನ್ಸ್‌!

ಬಹುತೇಕ ಶೋಗಳು ಹೌಸ್​ಫುಲ್

ಡಿಸೆಂಬರ್ 28ರ ಮಧ್ಯರಾತ್ರಿಯಿಂದಲೇ ಶೋಗಳು ಪ್ರದರ್ಶನ ಕಂಡಿವೆ. ಡಿಸೆಂಬರ್ 29ರ ಬಹುತೇಕ ಶೋಗಳು ಹೌಸ್​ಫುಲ್ ಆಗಿವೆ.  ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದಾರೆ.

Exit mobile version