Site icon Vistara News

Kannada Serials TRP: ಟಾಪ್‌ 5ನಲ್ಲಿ ಇಲ್ಲ ʻಶ್ರೀರಸ್ತು ಶುಭಮಸ್ತುʼ: ರೇಸ್‌ಗಿಳಿದ ʻರಾಮಾಚಾರಿʼ!

Kannada Serial TRP News Kannada Serial Update

ಬೆಂಗಳೂರು: ಈ ವಾರ ಧಾರಾವಾಹಿಗಳ ಟಿಆರ್‌ಪಿ (Kannada Serials TRP) ಲಿಸ್ಟ್‌ ಹೊರಬಿದ್ದಿದೆ. ಈ ವಾರ ಟಾಪ್ ಐದು ಧಾರಾವಾಹಿಗಳ ಸಾಲಿನಲ್ಲಿ ಎಲ್ಲವೂ ಜೀ ಕನ್ನಡದ ಧಾರಾವಾಹಿಗಳೇ. ಟಾಪ್‌ 5ನಲ್ಲಿ ಕಲರ್ಸ್‌ ಕನ್ನಡದ ಒಂದು ಧಾರಾವಾಹಿಯೂ ಇಲ್ಲ. ಆದರೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿ ನಿಧಾನವಾಗಿ ಉಳಿದ ಧಾರಾವಾಹಿಗಳಿಗೆ ಪೈಪೋಟಿ ನೀಡಲು ಶುರು ಮಾಡಿದೆ.

ಲಕ್ಷ್ಮೀ ನಿವಾಸ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಮಾತನ್ನೇ ಎಳೆಯಾಗಿಟ್ಟುಕೊಂಡು ಕಥೆಯನ್ನು ಹೆಣೆದಿರುವ ಜೀ ಕನ್ನಡ ವಾಹಿನಿಯ ಹೊಸ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಕರುನಾಡಿನ ಮನೆಮನಗಳಿಗೆ ಪ್ರವೇಶ ಮಾಡಿದ್ದಾಗಿದೆ. ನಗರ ಭಾಗದ ಟಿಆರ್​ಪಿ ಪರಿಗಣಿಸಿದರೆ ಮೊದಲ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಹೊಸ ಧಾರಾವಾಹಿ ‘ಲಕ್ಷ್ಮಿ ನಿವಾಸ’ ಇದೆ. ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ ಇರಲಿದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಸದ್ಯ ಜಾಹ್ನವಿಯನ್ನು ವಿಶ್ವ ಮನಸಾರೆ ಪ್ರೀತಿ ಮಾಡುತ್ತಾ ಇದ್ದರೂ ವಿಶ್ವನಿಗೆ ವಿಲನ್ ಆಗಿ ಜಯಂತ್ ಬಂದಾಗಿದೆ. ಆದರೂ ಜಾಹ್ನವಿಗೆ ವಿಶ್ವನೇ ಜೋಡಿ ಎನ್ನುತ್ತಿದ್ದಾರೆ ವೀಕ್ಷಕರು. ಇದೀಗ ಈ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.ಈ ಧಾರಾವಾಹಿ ನಗರ ಹಾಗೂ ರಾಜ್ಯದ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದು ಮುನ್ನುಗ್ಗುತ್ತಿದೆ.ಈ ಧಾರಾವಾಹಿಗೆ ಒಟ್ಟಾರೆಯಾಗಿ ಭರ್ಜರಿ ಟಿಆರ್​ಪಿ ಸಿಗುತ್ತಿದೆ. ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ನಗರ ಹಾಗೂ ಗ್ರಾಮಗಳ ಭಾಗದ ಜನರಿಗೆ ಧಾರಾವಾಹಿ ಹೆಚ್ಚು ಇಷ್ಟ ಆಗಿದೆ.

ಇದನ್ನೂ ಓದಿ: Kannada Serials TRP: ‘ಲಕ್ಷ್ಮೀ ನಿವಾಸ’ಕ್ಕೆ ಮೊದಲ ಸ್ಥಾನ: ಟಾಪ್‌ 5ನಲ್ಲಿ ಇಲ್ಲ ʻಭಾಗ್ಯಲಕ್ಷ್ಮೀʼ!

ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾಗಿ ಎರಡು ವರ್ಷಗಳು ಸಂದಿದೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಿ ನಿವಾಸ’ ಧಾರಾವಾಹಿ ಆರಂಭಕ್ಕೂ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡು ಬಂದಿತ್ತು. ಈಗ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಅಮೃತಧಾರೆ

‘ಅಮೃತಧಾರೆ’ ಧಾರಾವಾಹಿ ಸಾಕಷ್ಟು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಟಿಆರ್​ಪಿ ಹಿಂದಿನ ವಾರ ಐದನೇ ಸ್ಥಾನದಲ್ಲಿ ಇತ್ತು. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಭೂಮಿಕಾ ತಂಗಿ ಅಪ್ಪಿ ಪಾರ್ಥ ಜತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಈ ವಿಚಾರ ಭೂಮಿಕಾಗೆ ತಿಳಿದಿದೆ.

ಇದನ್ನೂ ಓದಿ: Kannada Serials TRP: ಭರ್ಜರಿ ಟಿಆರ್‌ಪಿ ಕಂಡ ʻಬಿಗ್‌ ಬಾಸ್‌ʼ ಫಿನಾಲೆ; ʻಲಕ್ಷ್ಮೀ ನಿವಾಸʼ ಧಾರಾವಾಹಿಯದ್ದೇ ಹವಾ!

ಸೀತಾ ರಾಮ

ಈ ಧಾರಾವಾಹಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಬಿಗ್ ಬಾಸ್’ ಪ್ರಸಾರ ಕಾಣುತ್ತಿತ್ತು. ಈ ಕಾರಣಕ್ಕೆ ‘ಸಿತಾ ರಾಮ’ ಧಾರಾವಾಹಿಗೆ ಟಿಆರ್​ಪಿ ಕಡಿಮೆ ಆಗಿತ್ತು. ಈಗ ವೀಕ್ಷಕರು ಮರಳಿದ್ದಾರೆ. ಹಿಂದಿನ ವಾರ ಮೂರನೇ ಸ್ಥಾನದಲ್ಲಿ ಇತ್ತು.

‘ಸತ್ಯ’ ಧಾರಾವಾಹಿ ಐದನೇ ಸ್ಥಾನದಲ್ಲಿ ಇದೆ. ಆರನೇ ಸ್ಥಾನದಲ್ಲಿ ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಹಾಗೂ ಕಲರ್ಸ್ ಕನ್ನಡದ ‘ರಾಮಾಚಾರಿ’ ಧಾರಾವಾಹಿಗಳು ಇವೆ. ‘ರಾಮಾಚಾರಿ’ ಧಾರಾವಾಹಿಯಲ್ಲಿ ರಾಮಾಚಾರಿ / ಕೃಷ್ಣ (ಕಿಲ್ಲರ್ ಕಿಟ್ಟಿ) ಆಗಿ ನಟ ರಿತ್ವಿಕ್ ಕೃಪಾಕರ್, ವೈಶಾಖ ಆಗಿ ನಟಿ ಐಶ್ವರ್ಯಾ ಸಾಲಿಮಠ, ಮಾನ್ಯತಾ ಆಗಿ ನಟಿ ಝಾನ್ಸಿ ಸುಬ್ಬಯ್ಯ, ಚಾರುಲತಾ ಆಗಿ ಮೌನಾ ಗುಡ್ಡೇಮನೆ ಅಭಿನಯಿಸುತ್ತಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ರಾಮಾಚಾರಿ ಪ್ರಸಾರ ಕಾಣುತ್ತಿದೆ.

Exit mobile version