ಬೆಂಗಳೂರು: ಪ್ರತಿ ಬಾರಿ ಜೀ ಕನ್ನಡ ವಾಹಿನಿ ಧಾರಾವಾಹಿಯ (Kannada Serials TRP) ʻಲಕ್ಷ್ಮೀ ನಿವಾಸʼ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ ʻಪುಟ್ಟಕನ ಮಕ್ಕಳುʼ ಧಾರಾವಾಹಿಯಲ್ಲಿ ಪುಟ್ಟಕ್ಕ ಮಗಳು ಸಹನಾ ಎಪಿಸೋಡ್ ಪ್ರಸಾರವಾಗುತ್ತಿರುವುದರಿಂದ ಭರ್ಜರಿ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಕಳೆದ ಕೆಲ ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು.
‘ಪುಟ್ಟಕ್ಕನ ಮಕ್ಕಳು’
ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ʼಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕ ಕುಟುಂಬ ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸಹನಾ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿದ್ದಾಳೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್‌ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಸಾಯಿ ನಿರ್ಮಲ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಆರಂಭದಲ್ಲಿ ಒಳ್ಳೆಯ ಟಿಆರ್‌ಪಿಯನ್ನು ಪಡೆದುಕೊಂಡಿತ್ತು. ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಿಂದಾಗಿ ಈಗ ಟಿಆರ್‌ಪಿ ಅಂಕದಲ್ಲಿ ಕುಸಿತ ಕಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಮೊದಲು ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆ ಧಾರಾವಾಹಿಯನ್ನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಿಂದಿಕ್ಕಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಕೆಲವು ವಾರ ಈ ಧಾರಾವಾಹಿ ಮೊದಲ ಸ್ಥಾನ ಕೂಡ ಪಡೆದಿತ್ತು. ಈಗ ಅದೇ ಬೇಡಿಕೆಯನ್ನು ಧಾರಾವಾಹಿ ಉಳಿಸಿಕೊಂಡಿದೆಯಾದರೂ, ‘ಪುಟ್ಟಕನ ಮಕ್ಕಳು’ ಧಾರಾವಾಹಿಯನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ.
ಶ್ರಾವಣಿ ಸುಬ್ರಮಣ್ಯ
ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಇದು ಈಗ ಮೂರನೇ ಸ್ಥಾನದಲ್ಲಿದೆ. ಸೀತಾ ರಾಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಬೇಡಿಕೆಯ ಧಾರಾವಾಹಿಗಳ ಟಿಆರ್‌ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್ ಮತ್ತು ಬಾಲರಾಜ್ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Kannada Serials TRP: ಟಾಪ್ 5ನಲ್ಲಿಲ್ಲ ಕಲರ್ಸ್ ಕನ್ನಡ ಧಾರಾವಾಹಿಗಳು: ಟ್ರ್ಯಾಕ್‌ಗೆ ಮರಳಿದ ʻಶ್ರಾವಣಿ ಸುಬ್ರಮಣ್ಯʼ!
ಅಮೃತಧಾರೆ, ಸೀತಾರಾಮ
ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಹಾಗೂ ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿಗಳು ಇವೆ. ಈ ಎರಡೂ ಧಾರಾವಾಹಿಗಳು ಸರಿ ಸುಮಾರು ಒಂದೇ ರೀತಿಯ ಬೇಡಿಕೆ ಹೊಂದಿದೆ. ʼಅಮೃತಧಾರೆ’ ಧಾರಾವಾಹಿ ಸಾಕಷ್ಟು (amrithadhare serial kannada) ಟ್ವಿಸ್ಟ್ಗಳನ್ನು ಪಡೆದು ಸಾಗುತ್ತಿದೆ. ಭೂಮಿಕಾ ಮತ್ತು ಗೌತಮ್ ಫಸ್ಟ್‌ನೈಟ್ ಎಪಿಸೋಡ್ ಒಳ್ಳೆಯ ವೀಕ್ಷಣೆ ಕಂಡಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್‌ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ. ಈಗಾಗಲೇ ಸೀತಾ ರಾಮರ ಎಂಗೇಜ್‌ಮೆಂಟ್ ಆಗಿದೆ. ಈ ಧಾರಾವಾಹಿ ಟಿಆರ್‌ಪಿಯಲ್ಲಿ ಹಿನ್ನಡೆ ಸಾಧಿಸಿದೆ. ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಈ ಧಾರಾವಾಹಿಯನ್ನು ಹಿಂದಿಕ್ಕಿದೆ.
ನಿನಗಾಗಿ
ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಆರಂಭ ಆದ ‘ನಿನಗಾಗಿ’ ಧಾರಾವಾಹಿ ಆರನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ನಟಿಸುತ್ತಿದ್ದಾರೆ. ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಕಿಶನ್ ಬೆಳಗಲಿ, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.
‘ಶ್ರೀಗೌರಿ’
ಶ್ರೀಗೌರಿ ಕೂಡ ಬೇಡಿಕೆ ಉಳಿಸಿಕೊಂಡಿದೆ. ‘ಭಾಗ್ಯಲಕ್ಷ್ಮೀ’ ಹಾಗೂ ‘ಲಕ್ಷ್ಮಿ ಬಾರಮ್ಮ’ಗೆ ಮೊದಲಿನಷ್ಟು ಬೇಡಿಕೆ ಇಲ್ಲ. ಮುಖ್ಯ ಭೂಮಿಕೆಯಲ್ಲಿ ‘ಕಮಲಿ’ ಧಾರಾವಾಹಿಯ ಅಮೂಲ್ಯ ಗೌಡ ಅಭಿನಯ ಮಾಡಿದ್ದಾರೆ. ಅಮೂಲ್ಯ ಮೊದಲು ʻಅನುರಾಗ ಸಂಗಮʼ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ʻಸ್ವಾತಿ ಮುತ್ತುʼ, ʻಪುನರ್ ವಿವಾಹʼ, ʻಅರಮನೆʼ, ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ. ಅಮೂಲ್ಯ ಗೌಡಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಧಾರಾವಾಹಿ ಕಮಲಿ. ‘ಬಿಗ್ ಬಾಸ್ ಒಟಿಟಿ’ ಮೂಲಕ ಜನಪ್ರಿಯತೆ ಪಡೆದ ಅಮೂಲ್ಯ ಗೌಡ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ.