Site icon Vistara News

Kannada Serials TRP: ಡೇಂಜರ್ ಝೋನ್‌ನಲ್ಲಿ ʻಗಟ್ಟಿಮೇಳʼ; ಟಾಪ್‌ 6ರಲ್ಲಿ ಪ್ರಮುಖ ಧಾರಾವಾಹಿ ಇಲ್ವೇ ಇಲ್ಲ!

Kannada Serials TRP

ಈ ವಾರದ ಕನ್ನಡ ಕಿರುತೆರೆಯ ಟಿಆರ್‌ಪಿ (Kannada Serials TRP) ಹೊರಬಿದ್ದಿದೆ. ‘ಸೀತಾ ರಾಮ’ ಧಾರಾವಾಹಿ ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಪೈಪೋಟಿ ನೀಡಲು ರೆಡಿಯಾಗಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಮೊದಲ ಸ್ಥಾನದಲ್ಲಿದೆ. ಸಾವಿರ ಎಪಿಸೋಡ್​ಗಳನ್ನು ದಾಟಿರುವ ‘ಗಟ್ಟಿಮೇಳ’ (Gattimele Serial) ಎರಡನೇ ಸ್ಥಾನ ಕಾಪಾಡಿಕೊಂಡಿದೆ.

ಪುಟ್ಟಕ್ಕನ ಮಕ್ಕಳು

ಉಮಾಶ್ರೀ ನಟನೆಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನವನ್ನು ಉಳಿಸಿಕೊಂಡು ಬರುತ್ತಲೇ ಇದೆ. ಈಗಲೂ ಒಳ್ಳೆಯ ಟಿಆರ್​ಪಿಯೊಂದಿಗೆ ಈ ಧಾರಾವಾಹಿ ಮುನ್ನುಗ್ಗುತ್ತಿದೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

‘ಗಟ್ಟಿಮೇಳ’

ಇತ್ತೀಚಿನ ತಿಂಗಳಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಒಂದೇ ರೀತಿಯ ಟಿಆರ್​ಪಿ ಕಾಯ್ದುಕೊಂಡು ಹೋಗುತ್ತಿತ್ತು. ಆದರೆ ಈ ಬಾರಿ ಧಾರಾವಾಹಿ ಟಿಆರ್‌ಪಿ ಏರಿಕೆ ಕಂಡಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿ ಮಧ್ಯಮ ವರ್ಗದ ಮನೆಯ ಹೆಣ್ಣು ಮಕ್ಕಳನ್ನು ಹೇಗೆ ಪರಿಮಳಾ ಹಾಗೂ ಮಂಜುನಾಥ್ ದಂಪತಿ ಮದುವೆ ಮಾಡುತ್ತಾರೆ ಎಂಬುದು ಒನ್‌ಲೈನ್‌ ಸ್ಟೋರಿ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: 4ನೇ ಸ್ಥಾನದಲ್ಲಿ ಸೀತಾ ರಾಮ; 10ನೇ ಸ್ಥಾನದಲ್ಲಿ ‘ನೀನಾದೆ ನಾʼ, ಉಳಿದ ಧಾರಾವಾಹಿಗಳ ಕಥೆ ಏನು?

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿತ್ತು. ಇದೀಗ ಮೂರನೇ ಸ್ಥಾನದಲ್ಲಿದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಹಾಗೂ ರೀತು ಸಿಂಗ್ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಧಾರಾವಾಹಿ ಟಿಆರ್​ಪಿ ಹೆಚ್ಚುವ ನಿರೀಕ್ಷೆ ಇದೆ. ರೀತು ಸಿಂಗ್ ಹೆಸರಿನ ಬಾಲಕಿ ವೈಷ್ಣವಿ ಗೌಡ ಮಗಳಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ. ‘ಗಟ್ಟಿಮೇಳ’ ಹಾಗೂ ‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿಯಲ್ಲಿ ಕೂದಲೆಳೆಯ ಅಂತರ ಇದೆ.

ಅಮೃತಧಾರೆ

ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ. ‘ಅಮೃತಧಾರೆ’ ಆರಂಭ ಆದಾಗಿನಿಂದಲೂ ಒಂದೇ ರೀತಿಯ ಟಿಆರ್​ಪಿ ಕಾಪಾಡಿಕೊಂಡು ಸಾಗುತ್ತಿದೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಶೀಘ್ರದಲ್ಲೇ ಇವರ ಮದುವೆ ನೆರವೇರಲಿದ್ದು, ಆ ಸಂದರ್ಭದಲ್ಲಿ ಟಿಆರ್​ಪಿ ಹೆಚ್ಚಬಹುದು. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಪ್ರಬುದ್ಧ ನಟನೆಯ ಗಮನ ಸೆಳೆಯುತ್ತಿದೆ. ಅಮೃತಧಾರೆ ಧಾರಾವಾಹಿ ʻಬಡೆ ಅಚ್ಚೆ ಲಗತೆ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

‘ಸತ್ಯ’ ಧಾರಾವಾಹಿ ಐದನೇ ಸ್ಥಾನ

ಇದೀಗ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಆಗುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಸತ್ಯ’ ಧಾರಾವಾಹಿಯಲ್ಲಿ ಲಕ್ಷ್ಮಣ ಎರಡನೇ ಮದುವೆಯಾಗಿರೋದು, ಅವನಿಗೆ ಮದುವೆ ಆಗಿರೋದು ಸತ್ಯಗೆ ಗೊತ್ತಾಗಿದೆ. ಈ ವಿಷಯ ಇಡೀ ಕುಟುಂಬಕ್ಕೆ ಗೊತ್ತಾದರೆ ಏನಾಗಬಹುದು? ಊರ್ಮಿಳಾ ಗಂಡನ ಈ ಮೋಸವನ್ನು ಹೇಗೆ ಸಹಿಸುತ್ತಾಳೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Kannada Serials TRP: ಟಿಆರ್‌ಪಿ ಅಖಾಡಕ್ಕೆ ಹೊಸ ಧಾರಾವಾಹಿ ಎಂಟ್ರಿ; ಅಕ್ಕ-ತಂಗಿ ಕಥೆಗೆ 5ನೇ ಸ್ಥಾನವೂ ಇಲ್ಲ!

ಶ್ರೀರಸ್ತು ಶುಭಮಸ್ತು

ಪತಿಯನ್ನು ಕಳೆದುಕೊಂಡ ಮಹಿಳೆ ಹಾಗೂ ಪತ್ನಿಯನ್ನು ಕಳೆದುಕೊಂಡ ಪುರುಷ. ಇವರಿಬ್ಬರಿಗೂ ಮಕ್ಕಳಿದ್ದಾರೆ. ಅವರು ದೊಡ್ಡವರಾಗಿದ್ದಾರೆ. ಹೀಗಿರುವಾಗ ಈ ಪುರುಷ ಹಾಗೂ ಮಹಿಳೆ ಮಧ್ಯೆ ಪ್ರೀತಿ ಮೂಡಿದರೆ ಏನಾಗುತ್ತದೆ? ಈ ಕಥೆಯನ್ನು ‘ಶ್ರೀರಸ್ತು ಶುಭಮಸ್ತು’ ಹೊಂದಿದೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಏಳನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’

ಒಂಬತ್ತನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ ಇತ್ತು. ಇದೀಗ ಏಳನೇ ಸ್ಥಾನಕ್ಕೆ ಬಂದಿದೆ. ಈ ಧಾರಾವಾಹಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

Exit mobile version