Site icon Vistara News

Kannada Serials TRP: ಟಾಪ್‌ 4ನಲ್ಲಿ `ರಾಮಾಚಾರಿ’ ಧಾರಾವಾಹಿ; ರೇಸ್‌ನಲ್ಲಿ ಇಲ್ಲ ʻಸತ್ಯʼ, ʻಶ್ರೀರಸ್ತು ಶುಭಮಸ್ತುʼ!

Kannada Serials

ಬೆಂಗಳೂರು: ಈ ವಾರ ಧಾರಾವಾಹಿಗಳ ಟಿಆರ್‌ಪಿ (Kannada Serials TRP) ಲಿಸ್ಟ್‌ ಹೊರಬಿದ್ದಿದೆ. ಈ ವಾರ ಕಲರ್ಸ್‌ ಕನ್ನಡ ಧಾರಾವಾಹಿ ಕೂಡ ಟಾಪ್‌ 5ನಲ್ಲಿ ಇದೆ. ಇತ್ತೀಚೆಗೆ ಪ್ರಸಾರ ಆರಂಭಿಸಿದ ಹೊಸ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu Serial) ಎರಡನೇ ಸ್ಥಾನದಲ್ಲಿದೆ.

ಲಕ್ಷ್ಮೀ ನಿವಾಸ

13ನೇ ವಾರದ ಟಿಆರ್​ಪಿ ಪ್ರಕಾರ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇರಲಿದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂದು ಕಷ್ಟಪಡುವ ತಂದೆಯ ಕಥೆ-ವ್ಯಥೆಯ ಜೊತೆ ಸಾಕಷ್ಟು ಭಾವನಾತ್ಮಕ ವಿಚಾರಗಳನ್ನು ಈ ಧಾರಾವಾಹಿಯಲ್ಲಿ (Kannada Serials TRP) ತೋರಿಸಲಾಗಿದೆ. ಸದ್ಯ ಜಯಂತ್‌ನ ಅಸಲಿ ಮುಖ ಜಾಹ್ನವಿ ತಿಳಿಯಬೇಕಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಟಾಪ್‌ 5ರಲ್ಲಿ ʻರಾಮಾಚಾರಿʼ: ʻಲಕ್ಷ್ಮೀ ನಿವಾಸʼ ಹಿಂದಿಕ್ಕಿದ ‘ಪುಟ್ಟಕ್ಕನ ಮಕ್ಕಳು’!

‘ಪುಟ್ಟಕ್ಕನ ಮಕ್ಕಳು’

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ಕೆಲ ವಾರಗಳಿಂದ ಈ ಧಾರಾವಾಹಿ ಮೊಲದನೇ ಸ್ಥಾನದಲ್ಲಿ ಇತ್ತು. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸದ್ಯ ಸಹನಾ ಪೊಲೀಸ್ ಸ್ಟೇಷನ್‌ಗೆ ತೆರಳಿ ಅತ್ತೆ ಕೌಸಲ್ಯಾ ವಿರುದ್ಧ ದೂರು ಕೊಡುತ್ತಾಳೆ. ಆಕೆಯ ಬಳಿ ಮೇಷ್ಟ್ರು ಅದೆಷ್ಟೇ ಗೋಗರೆದರೂ ಸಹನಾ, ಕೌಸಲ್ಯಾ ವಿರುದ್ಧ ಸಿಡಿದೆದ್ದಿದ್ದಾಳೆ.  ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಸೀತಾ ರಾಮ

ಮೂರನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈಗಾಗಲೇ ಸೀತಾ ಹಾಗೂ ರಾಮನ ಮಧ್ಯೆ ಪ್ರೀತಿ ಆಗಿದೆ. ಸೀರಿಯಲ್‌ ಶುರುವಾದಾಗಿನಿಂದ ಸೀತಾ ಮತ್ತು ಆಕೆಯ ಮಗಳ ಬಗ್ಗೆ ಮಾತ್ರ ತೋರಿಸಲಾಗಿತ್ತು. ಸೀತಾಳ ಪಾಸ್ಟ್‌ ಸ್ಟೋರಿ ಬಹರಂಗವಾಗಲಿದೆ. ಈಗ ಸೀತಾಳ ಹಳೇ ಜೀವನದ ಬಗ್ಗೆಯೂ ಒಂದೊಂದೆ ವಿಚಾರಗಳು ಹೊರಬಳಲಿವೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

‘ರಾಮಾಚಾರಿ’

ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮೌನ, ರುತ್ವಿಕ್ ಕೃಪಾಕರ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿಟ್ಟಿಯ ಪಾತ್ರ ಕೂಡ ಜನ ಮೆಚ್ಚಿದ್ದಾರೆ. ಇದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಟಫ್‌ ಫೈಟ್‌: ಟಾಪ್‌ 5ನಲ್ಲಿ ಯಾವೆಲ್ಲ ಧಾರಾವಾಹಿಗಳು?

ಅಮೃತಧಾರೆ

ಅಮೃತಧಾರೆ’ ಧಾರಾವಾಹಿ ಸಾಕಷ್ಟು (amrithadhare serial kannada) ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ.

Exit mobile version