Site icon Vistara News

Kannada Serials TRP: ಭರ್ಜರಿ ಟಿಆರ್‌ಪಿ ಪಡೆದು ಎರಡನೇ ಸ್ಥಾನ ಪಡೆದ ‘ಸೀತಾ ರಾಮ’; ಟ್ರ್ಯಾಕ್‌ಗೆ ಮರಳಿದ ʻಅಮೃತಧಾರೆʼ!

Kannada Serials TRP P Seetha Raama Serial TRP Raise

ಬೆಂಗಳೂರು: 27ನೇ ವಾರದ ವಾರದ ಟಿಆರ್​ಪಿ ಬಂದಿದೆ. ಟಿಆರ್​ಪಿಯಲ್ಲಿ (Kannada Serials TRP) (TRP) ಏರಿಳಿತ ಆಗುತ್ತಲೇ ಇರುತ್ತದೆ. ಅದೇ ರೀತಿ ಟಿಆರ್​ಪಿ ವಿವರ ಸಿಕ್ಕಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದಿದೆ. ಇನ್ನೂ ವಿಶೇಷ ಅಂದರೆ ಈ ವಾರ ಜೀ ಕನ್ನಡ ವಾಹಿನಿಯ ಸೀತಾ ರಾಮ ಧಾರಾವಾಹಿ ಎರನೇ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿ ಮದುವೆ ಕಾರಣಕ್ಕೆ ಹೆಚ್ಚಿನ ಟಿಆರ್​ಪಿ ಪಡೆದುಕೊಂಡಿದೆ. ಈ ಮೊದಲಿಗಿಂತಲೂ ‘ಸೀತಾ ರಾಮ’ ಧಾರಾವಾಹಿಗೆ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ ಎನ್ನುವುದು ವಿಶೇಷ. 

‘ಪುಟ್ಟಕ್ಕನ ಮಕ್ಕಳು’

ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಧಾರಾವಾಹಿ 675 ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ʼಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕ ಕುಟುಂಬ ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸಹನಾ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿದ್ದಾಳೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಟ್ರ್ಯಾಕ್‌ಗೆ ಮರಳಿದ `ಶ್ರೀಗೌರಿ’; ಟಿಆರ್​ಪಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್‌ 1!

ಲಕ್ಷ್ಮೀ ನಿವಾಸ ಧಾರಾವಾಹಿ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಆರಂಭದಲ್ಲಿ ಒಳ್ಳೆಯ ಟಿಆರ್‌ಪಿಯನ್ನು ಪಡೆದುಕೊಂಡಿತ್ತು. ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಿಂದಾಗಿ ಈಗ ಟಿಆರ್‌ಪಿ ಅಂಕದಲ್ಲಿ ಕುಸಿತ ಕಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಮೊದಲು ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆ ಧಾರಾವಾಹಿಯನ್ನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಿಂದಿಕ್ಕಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಕೆಲವು ವಾರ ಈ ಧಾರಾವಾಹಿ ಮೊದಲ ಸ್ಥಾನ ಕೂಡ ಪಡೆದಿತ್ತು. ‘ಲಕ್ಷ್ಮಿ ನಿವಾಸ’ದಲ್ಲಿ ಕಥಾ ನಾಯಕಿ ಭಾವನಾಗೆ ಸಿದ್ದು ತಾಳಿ ಕಟ್ಟಿ ಹೋಗಿದ್ದಾನೆ. ಈ ಮೂಲಕ ಕಥೆ ಪ್ರಮುಖ ಟ್ವಿಸ್ಟ್ ಪಡೆದು ಸಾಗುತ್ತಿದೆ. ಇದರಿಂದ ಜನರು ಧಾರಾವಾಹಿಯನ್ನು ಹೆಚ್ಚು ವೀಕ್ಷಿಸುತ್ತಿದ್ದಾರೆ.

ಸೀತಾ ರಾಮ

ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ನಟಿಸಿದ್ದಾರೆ. ಈ ಧಾರಾವಾಹಿ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ.  ಈ ಮೊದಲಿಗಿಂತಲೂ ‘ಸೀತಾ ರಾಮ’ ಧಾರಾವಾಹಿಗೆ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ ಅನ್ನೋದು ವಿಶೇಷ. ಸೀತಾ ಹಾಗೂ ರಾಮನ ಮದುವೆ ಸಂಭ್ರಮವೇ ಇದಕ್ಕೆ ಕಾರಣ.

ಶ್ರಾವಣಿ ಸುಬ್ರಮಣ್ಯ

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಇದು ಈಗ ಮೂರನೇ ಸ್ಥಾನದಲ್ಲಿದೆ. ಸೀತಾ ರಾಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಬೇಡಿಕೆಯ ಧಾರಾವಾಹಿಗಳ ಟಿಆರ್​ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Kannada Serials TRP: ಟಾಪ್‌ 5ನಲ್ಲಿ ʻಲಕ್ಷ್ಮೀ ಬಾರಮ್ಮʼ; ಹೊಸ ಧಾರಾವಾಹಿಗಿಲ್ಲ ಬೇಡಿಕೆ!

ಅಮೃತಧಾರೆ

ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ. ಗೌತಮ್ ಹಾಗೂ ಭೂಮಿಕಾ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯುತ್ತಿದೆ.

 ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಹಾಗೂ ‘ಲಕ್ಷ್ಮಿ ಬಾರಮ್ಮ’ 

ಐದನೇ ಸ್ಥಾನದಲ್ಲಿ ಈ ಎರಡೂ ಧಾರಾವಾಹಿಗಳು ಇವೆ. ‘ಶ್ರೀರಸ್ತು ಶುಭಮಸ್ತು ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಮಾಧವ ತುಳುಸಿ, ಮೈಸೂರಿಗೆ ಹೊರಟ್ಟಿದ್ದಾರೆ. ಇನ್ನು ಮಾಧವನ ಮಗ ದೊಡ್ಡವನು ಅಪ್ಪನನ್ನು ಒಪ್ಪಿಕೊಂಡಿದ್ದಾಗಿದೆ. ಲಕ್ಷ್ಮಿ ಬಾರಮ್ಮ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Exit mobile version