Site icon Vistara News

Kannada Serials TRP: ಟಾಪ್‌ 5ರಲ್ಲಿ ʻರಾಮಾಚಾರಿʼ: ʻಲಕ್ಷ್ಮೀ ನಿವಾಸʼ ಹಿಂದಿಕ್ಕಿದ ‘ಪುಟ್ಟಕ್ಕನ ಮಕ್ಕಳು’!

Kannada Serials TrP this week

ಬೆಂಗಳೂರು: ಈ ವಾರ ಧಾರಾವಾಹಿಗಳ ಟಿಆರ್‌ಪಿ (Kannada Serials TRP) ಲಿಸ್ಟ್‌ ಹೊರಬಿದ್ದಿದೆ. ಈ ವಾರ ಕಲರ್ಸ್‌ ಕನ್ನಡ ಧಾರಾವಾಹಿ ಕೂಡ ಟಾಪ್‌ 5ನಲ್ಲಿ ಇದೆ. ಇತ್ತೀಚೆಗೆ ಪ್ರಸಾರ ಆರಂಭಿಸಿದ ಹೊಸ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu Serial) ಕರ್ನಾಟಕ ಟಿಆರ್​ಪಿಯಲ್ಲಿ ‘ಲಕ್ಷ್ಮಿ ನಿವಾಸ’ ಧಾರಾವಾಹಿಯನ್ನು ಹಿಂದಿಕ್ಕಿದೆ. ‘ಶ್ರೀಗೌರಿ’, ರಾಮಾಚಾರಿ’ಗೂ ಒಳ್ಳೆಯ ಟಿಆರ್‌ಪಿ ಸಿಕ್ಕಿದೆ.

‘ಪುಟ್ಟಕ್ಕನ ಮಕ್ಕಳು’

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ಕೆಲ ವಾರಗಳಿಂದ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಲಕ್ಷ್ಮೀ ನಿವಾಸ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇರಲಿದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂದು ಕಷ್ಟಪಡುವ ತಂದೆಯ ಕಥೆ-ವ್ಯಥೆಯ ಜೊತೆ ಸಾಕಷ್ಟು ಭಾವನಾತ್ಮಕ ವಿಚಾರಗಳನ್ನು ಈ ಧಾರಾವಾಹಿಯಲ್ಲಿ (Kannada Serials TRP) ತೋರಿಸಲಾಗಿದೆ.ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಟಾಪ್‌ 5ನಲ್ಲಿ ಇಲ್ಲ ʻಶ್ರೀರಸ್ತು ಶುಭಮಸ್ತುʼ: ರೇಸ್‌ಗಿಳಿದ ʻರಾಮಾಚಾರಿʼ!

ಇದನ್ನೂ ಓದಿ: Kannada Serials TRP: ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಟಫ್‌ ಫೈಟ್‌: ಟಾಪ್‌ 5ನಲ್ಲಿ ಯಾವೆಲ್ಲ ಧಾರಾವಾಹಿಗಳು?

ರಾಮಾಚಾರಿ

ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಸ್ಥಾನ ಸಿಕ್ಕಿದೆ. ಈ ಧಾರಾವಾಹಿ ಈ ಬಾರಿ ಮೂರನೇ (Kannada Serials TRP) ಸ್ಥಾನ ಪಡೆದಿದೆ. ಮೌನ, ರುತ್ವಿಕ್ ಕೃಪಾಕರ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿಟ್ಟಿಯ ಪಾತ್ರ ಕೂಡ ಜನ ಮೆಚ್ಚಿದ್ದಾರೆ.

ಶ್ರೀರಸ್ತು ಶುಭಮಸ್ತು

ಹಿಂದಿನ ವಾರ ಆರನೇ ಸ್ಥಾನದಲ್ಲಿ ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಈ ವಾರ ಟಿಆರ್​ಪಿ ರೇಸ್​ನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ‘ಪುಟ್ಟಕನ ಮಕ್ಕಳು’ ಜತೆ ಫೈಟ್ ನೀಡುತ್ತಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಅಮೃತಧಾರೆ

ಅಮೃತಧಾರೆ’ ಧಾರಾವಾಹಿ ಸಾಕಷ್ಟು (amrithadhare serial kannada) ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ.

ಆರನೇ ಸ್ಥಾನದಲ್ಲಿ ‘ಸೀತಾ ರಾಮ’ ಇದ್ದರೆ, ‘ಸತ್ಯ’, ಶ್ರೀಗೌರಿ’ ಧಾರಾವಾಹಿಗಳು ಇವೆ. ಇವೆ. ʻಸೀತಾರಾಮʼಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದರೆ, ಶ್ರೀ ಗೌರಿ ಕಲರ್ಸ್‌ನಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: Kannada Serials TRP: ಟಾಪ್‌ 5ನಲ್ಲಿ ಇಲ್ಲ ʻಶ್ರೀರಸ್ತು ಶುಭಮಸ್ತುʼ: ರೇಸ್‌ಗಿಳಿದ ʻರಾಮಾಚಾರಿʼ!

ಇದನ್ನೂ ಓದಿ: Kannada Serials TRP: ಟಾಪ್‌ 5ನಲ್ಲಿ ಇಲ್ಲ ʻಶ್ರೀರಸ್ತು ಶುಭಮಸ್ತುʼ: ರೇಸ್‌ಗಿಳಿದ ʻರಾಮಾಚಾರಿʼ!

ಶ್ರೀ ಗೌರಿ

ಕರಾವಳಿಯಲ್ಲಿ ನಡೆಯುವ ಕಥಾಹಂದರ ಹೊಂದಿದೆ ‘ಶ್ರೀಗೌರಿ’. ರಘುರಾಮ್ ಹೆಗಡೆಯ ಮಗಳು ಶ್ರೀಗೌರಿ. ರೂಪವಂತೆ, ಗುಣವಂತೆ ಆಗಿದ್ದರೂ ಶ್ರೀಗೌರಿಗೆ ಅದೇನೋ ಸಮಸ್ಯೆ ಇದೆ. ಆ ಸಮಸ್ಯೆಯಿಂದಲೇ ಶ್ರೀಗೌರಿಗೆ ಮದುವೆಯಾಗುತ್ತಿಲ್ಲ. ರಾತ್ರಿಯಾದರೆ ಸಾಕು, ಗೌರಿಯ ಕಾಲಿಗೆ ಕೋಳ ತೊಡಿಸಲಾಗುತ್ತದೆ.‘ಶ್ರೀಗೌರಿ’ ಧಾರಾವಾಹಿಯಲ್ಲಿ ಶ್ರೀಗೌರಿ ಆಗಿ ನಟಿ ಅಮೂಲ್ಯ ಗೌಡ, ಅಪ್ಪು ಆಗಿ ನಟ ಕಾರ್ತಿಕ್ ಅತ್ತಾವರ್, ರಘುರಾಮ್ ಹೆಗಡೆ ಆಗಿ ನಟ ಸುನೀಲ್ ಪುರಾಣಿಕ್, ನಂದಿನಿ ಗೌಡ ಗಾಯತ್ರಿ ಪ್ರಭಾಕರ್, ಸಂಜಯ್ ಸೂರಿ ನಟಿಸುತ್ತಿದ್ದಾರೆ.

Exit mobile version