ಬೆಂಗಳೂರು: ʻಸೀತಾ ರಾಮ’ ಧಾರಾವಾಹಿ (Kannada Serials TRP) ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ದಿನೇದಿನೆ ಹೆಚ್ಚು ಪೈಪೋಟಿ ನೀಡಲು ಶುರು ಮಾಡಿದೆ. ಯಾವಾಗಲೂ ‘ಗಟ್ಟಿಮೇಳ’ ಎರಡನೇ ಸ್ಥಾನವನ್ನು ಕಾದಿರಿಸಿಕೊಂಡಿತ್ತು. ಆದರೀಗ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಅಮೃತಧಾರೆ ಧಾರಾವಾಹಿ ಟಿಆರ್‌ಪಿ ಏರಿಕೆ ಕಂಡಿದೆ.
ಪುಟ್ಟಕ್ಕನ ಮಕ್ಕಳು
ಉಮಾಶ್ರೀ ನಟನೆಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನವನ್ನು ಉಳಿಸಿಕೊಂಡು ಬರುತ್ತಲೇ ಇದೆ. ಈಗಲೂ ಒಳ್ಳೆಯ ಟಿಆರ್ಪಿಯೊಂದಿಗೆ ಈ ಧಾರಾವಾಹಿ ಮುನ್ನುಗ್ಗುತ್ತಿದೆ. ಸದ್ಯ ಪುಟ್ಟಕ್ಕನ ಮೆಸ್‌ಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಬಂಗಾರಮ್ಮನ ಮಗ ಸ್ವತಃ ತಾಯಿಯ ವಿರುದ್ಧವೆ ದೂರು ಕೊಟ್ಟಿದ್ದು, ಬಂಗಾರಮ್ಮ ಅರೆಸ್ಟ್ ಆಗಿದ್ದಾರೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಎರಡಂಕಿ ಟಿಆರ್‌ಪಿ ಪಡೆಯುತ್ತಿರುವ ಕನ್ನಡದ ಏಕೈಕ ಧಾರಾವಾಹಿ ಇದು. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಸೀತಾ ರಾಮ
‘ಸೀತಾ ರಾಮ’ ಧಾರಾವಾಹಿ ಕಳೆದ ವಾರವೂ ಎರಡನೇ ಸ್ಥಾನದಲ್ಲಿ ಇತ್ತು. ಈ ವಾರವೂ ಎರಡನೇ ಸ್ಥಾನ ಪಡೆದುಕೊಂಡಿದೆ. ರಾಮ ಹಾಗೂ ಸೀತಾ (ವೈಷ್ಣವಿ-ಗಗನ್) ಮಧ್ಯೆ ಈಗ ತಾನೇ ಆಪ್ತತೆ ಮೂಡುತ್ತಿದೆ. ಅಷ್ಟೇ ಅಲ್ಲದೇ ಸೀತಾ ಮನೆಯ ವಿಚಾರವಾಗಿ ರಾಮ ಬೆಂಬಲಕ್ಕೆ ನಿಂತಿದ್ದಾನೆ. ರೀತು ಸಿಂಗ್ ಹೆಸರಿನ ಬಾಲಕಿ ವೈಷ್ಣವಿ ಗೌಡ ಮಗಳಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ. ಈಕೆಯ ನಟನೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಸೀತಾ ರಾಮ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ: Kannada Serials TRP: ಈ ಬಾರಿಯೂ ‘ಸೀತಾ ರಾಮ’ ಟಾಪ್; ಸುಧಾರಿಸಿದ ‘ಅಮೃತಧಾರೆ’ ಧಾರಾವಾಹಿ!
ಇದನ್ನೂ ಓದಿ: Kannada Serials TRP: ಟಾಪ್ 5ರಲ್ಲಿಲ್ಲ ʻಶ್ರೀರಸ್ತು ಶುಭಮಸ್ತುʼ; ಸೀತಾ ರಾಮ ಧಾರಾವಾಹಿಗೆ ಹೆಚ್ಚಾಯ್ತು ಬೇಡಿಕೆ!
ಅಮೃತಧಾರೆ
‘ಅಮೃತಧಾರೆ’ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಈಗಾಗಲೇ ಮುಗಿದಿದ್ದು, ಪ್ರೆಕ್ಷಕರಿಗೆ ಕುತೂಹಲ ಮೂಡಿಸಿದೆ. ಕಳೆದ ವಾರ ಐದನೇ ಸ್ಥಾನದಲ್ಲಿತ್ತು. ಈ ಬಾರಿ ‘ಗಟ್ಟಿಮೇಳ’ ಧಾರಾವಾಹಿ ಹಿಂದಿಕ್ಕಿ ಮೂರನೇ ಸ್ಥಾನ ಪಡೆದುಕೊಂಡಿದೆ. ಟಿಆರ್‌ಪಿ ಏರಿಕೆ ಕಂಡಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಗಟ್ಟಿಮೇಳ
‘ಸೀತಾ ರಾಮ’ ಬರುವುದಕ್ಕೂ ಮೊದಲು ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ‘ಸೀತಾ ರಾಮ’ ಹಾಗೂ ‘ಗಟ್ಟಿಮೇಳ’ ಧಾರಾವಾಹಿಗಳ ನಗರ ಹಾಗೂ ಗ್ರಾಮೀಣ ಭಾಗದ ಟಿಆರ್‌ಪಿ ಒಂದೇ ಇದ್ದರೂ ನಗರದ ಟಿಆರ್‌ಪಿ ಆಧಾರಾದಲ್ಲಿ ‘ಗಟ್ಟಿಮೇಳ’ಕ್ಕೆ ಮೂರನೇ ಸ್ಥಾನ ನೀಡಬಹುದಿತ್ತು. ಆದರೆ ಈ ವಾರ ಅಮೃತಧಾರೆ ಧಾರಾವಾಹಿ ಬೀಟ್ ಮಾಡಿದೆ. ಟಿಆರ್‌ಪಿಯಲ್ಲಿ ಭಾರಿ ಕುಸಿತ ಕಂಡಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಸತ್ಯ
‘ಸತ್ಯ’ ಧಾರಾವಾಹಿ ಮೊದಲಿನಿಂದಲೂ ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿರುವ ಧಾರಾವಾಹಿ. ಈ ಧಾರಾವಾಹಿ ಐದನೇ ಸ್ಥಾನದಲ್ಲಿದೆ. ‘ಸತ್ಯ’ ಧಾರಾವಾಹಿ ಕೂಡ ಭರ್ಜರಿ ಟಿಆರ್‌ಪಿ ಪಡೆದು ಮುಂದೆ ಸಾಗುತ್ತಿದೆ. ಅತ್ತೆ ಕೂಡ ಸತ್ಯಳನ್ನು ಪ್ರೀತಿಸಲು ಶುರು ಮಾಡಿದಂತಿದೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.