Site icon Vistara News

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Kannada Serials

ಬೆಂಗಳೂರು: ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಧಾರಾವಾಹಿಯು ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಒಂದಂಕಿಗೆ ಇಳಿದಿದೆ. ಈ ಬಾರಿ ಭಾಗ್ಯಲಕ್ಷ್ಮೀ ಒಳ್ಳೆಯ ಟಿಆರ್‌ಪಿ ಕಂಡಿದೆ. ಈ ವಾರದ ಟಿಆರ್‌ಪಿ ಡಿಟೇಲ್ಸ್‌ ಇಲ್ಲಿದೆ.

ಪುಟ್ಟಕ್ಕನ ಮಕ್ಕಳು

ಉಮಾಶ್ರೀ ಮೊದಲಾದವರು ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಇಷ್ಟು ದಿನ ಎರಡಂಕಿಯ ಟಿಆರ್​ಪಿ ಪಡೆದುಕೊಳ್ಳುತ್ತಿತ್ತು. ಆದರೆ, ಈಗ ಧಾರಾವಾಹಿಯ ಟಿಆರ್​ಪಿಯಲ್ಲಿ ಕೊಂಚ ಇಳಿಕೆ ಕಂಡಿದೆ. ಇದರ ಟಿಆರ್​ಪಿ ಎರಡಂಕಿಯಿಂದ ಒಂದಂಕಿಗೆ ಇಳಿದೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿತ್ತು. ಈ ವಾರ ಮತ್ತೆ ಎರಡನೇ ಸ್ಥಾನದಲ್ಲಿದೆ. ರಾಮ ಹಾಗೂ ಸೀತಾ (ವೈಷ್ಣವಿ-ಗಗನ್) ಮಧ್ಯೆ ಈಗ ತಾನೇ ಆಪ್ತತೆ ಮೂಡುತ್ತಿದೆ. ರೀತು ಸಿಂಗ್ ಹೆಸರಿನ ಬಾಲಕಿ ವೈಷ್ಣವಿ ಗೌಡ ಮಗಳಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ. ಈ ಧಾರಾವಾಹಿ 50ನೇ ಎಪಿಸೋಡ್‌ಗಳನ್ನು ಪೂರೈಸಿದೆ. ಸೀತಾ ರಾಮ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ಗಟ್ಟಿಮೇಳ

ಕಳೆದ ವಾರ ಎರಡನೇ ಸ್ಥಾನದಲ್ಲಿತ್ತು. ಈ ವಾರ ಮೂರನೇ ಸ್ಥಾನಕ್ಕೆ ಬಂದಿದೆ. ಈ ಧಾರಾವಾಹಿ ಶೀಘ್ರವೇ ಪೂರ್ಣಗೊಳ್ಳಲಿದೆ ಎನ್ನಲಾಗಿತ್ತು. ಆದರೆ, ಅದು ಸುಳ್ಳು ಸುದ್ದಿ ಎಂದು ಮೂಲಗಳು ಸ್ಪಷ್ಟಪಡಿಸಿವೆ. ‘ಸೀತಾ ರಾಮ’ ಬರುವುದಕ್ಕೂ ಮೊದಲು ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಸತ್ಯ ಧಾರಾವಾಹಿ

ಸತ್ಯ ಧಾರಾವಾಹಿ ಈ ನಡುವೆ ಒಳ್ಳೆಯ ಟಿಆರ್‌ಪಿ ಪಡೆದು ಮುನ್ನುಗ್ಗುತ್ತಿದೆ. ಸತ್ಯ ಮತ್ತು ಅತ್ತೆಯ ನಡುವೆ ಬಾಂಧವ್ಯ ಹೆಚ್ಚಾಗಿದೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಭಾಗ್ಯಲಕ್ಷ್ಮಿ-ಅಮೃತಧಾರೆ

ಕಲರ್ಸ್‌ಕನ್ನಡದ ʻಭಾಗ್ಯಲಕ್ಷ್ಮಿ’ ಧಾರಾವಾಹಿ ಆರನೇ ಸ್ಥಾನದಲ್ಲಿ ಹಿಂದಿನ ವಾರ ಇತ್ತು. ಟಿಆರ್‌ಪಿಯಲ್ಲಿ ಕೊಂಚ ಸುಧಾರಿಸಿದೆ. ಅಮ್ಮನಿಗಾಗಿ ತಾಂಡವ್ ಶ್ರೇಷ್ಠಾಗೆ ಗುಡ್ ಬೈ ಹೇಳಿದ್ದಾಗಿದೆ. ಕಥೆ ಹೊಸ ತಿರುವಿನತ್ತ ಸಾಗುತ್ತಿದೆ. ಈ ಧಾರಾವಾಹಿ ‘ಅಮೃತಧಾರೆ’ಗೆ ಸ್ಪರ್ಧೆ ನೀಡಲು ರೆಡಿ ಆಗಿದೆ.

Exit mobile version