Site icon Vistara News

Kannada Serials TRP : ಮೂರನೇ ಸ್ಥಾನಕ್ಕೆ ಬಂದ ʻಅಮೃತಧಾರೆʼ; ಹೊಸ ಧಾರಾವಾಹಿ ಟಾಪ್‌ 5ಕ್ಕೆ ಎಂಟ್ರಿ!

Kannada Serials TRP

ಬೆಂಗಳೂರು: ಈ ವಾರದ ಕನ್ನಡ ಕಿರುತೆರೆಯ ಟಿಆರ್‌ಪಿ (Kannada Serials TRP) ಹೊರಬಿದ್ದಿದೆ. ಕೆಲ ಧಾರಾವಾಹಿಗಳು (Kannada Serials TRP) ಕಳೆದ ವಾರಕ್ಕಿಂತ ಈ ವಾರ ಕಡಿಮೆ ಟಿಆರ್‌ಪಿ ಗಳಿಸಿವೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟನೆಯ ‘ಅಮೃತಧಾರೆ’ ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಮೂರನೇ ಸ್ಥಾನ ಪಡೆದುಕೊಂಡಿದೆ. ಆದರೆ ‘ಭಾಗ್ಯಲಕ್ಷ್ಮೀ’ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಇರುತ್ತಿತ್ತು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಆರನೇ ಸ್ಥಾನಕ್ಕೆ ಇಳಿದಿದೆ. ಈ ಎರಡೂ ಧಾರಾವಾಹಿಗಳ ಟಿಆರ್​ಪಿ ಕೊಂಚ ತಗ್ಗಿದೆ.

ಪುಟ್ಟಕ್ಕನ ಮಕ್ಕಳು

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈ ಬಾರಿಯೂ ಮೊದಲ ಸ್ಥಾನ ಪಡೆದುಕೊಂಡಿದೆ. ಪುಟ್ಟಕ್ಕನ ಮಕ್ಕಳ ಮದುವೆಯ ಎಪಿಸೋಡ್​ಗಳು ಪ್ರಸಾರ ಕಾಣುತ್ತಿವೆ. ಈ ಕಾರಣಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಧಾರಾವಾಹಿ ಡಬಲ್ ಡಿಜಿಟ್ ಟಿಆರ್​ಪಿ ಪಡೆದಿದೆ. ಈ ಮೂಲಕ ದಾಖಲೆ ಬರೆದಿದೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

‘ಗಟ್ಟಿಮೇಳ’

ಇತ್ತೀಚಿನ ತಿಂಗಳಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಒಂದೇ ರೀತಿಯ ಟಿಆರ್​ಪಿ ಕಾಯ್ದುಕೊಂಡು ಹೋಗುತ್ತಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿರುವ ‘ಗಟ್ಟಿಮೇಳ’ ಧಾರಾವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ. ಮಧ್ಯಮ ವರ್ಗದ ಮನೆಯ ಹೆಣ್ಣು ಮಕ್ಕಳನ್ನು ಹೇಗೆ ಪರಿಮಳಾ ಹಾಗೂ ಮಂಜುನಾಥ್ ದಂಪತಿ ಮದುವೆ ಮಾಡುತ್ತಾರೆ ಎಂಬುದು ಒನ್‌ಲೈನ್‌ ಸ್ಟೋರಿ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

‘ಅಮೃತಧಾರೆ’

ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟನೆಯ ‘ಅಮೃತಧಾರೆ’ ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಮೂರನೇ ಸ್ಥಾನ ಪಡೆದುಕೊಂಡಿದೆ. ಕಳೆದ ವಾರ ಏಳನೇ ಸ್ಥಾನದಲ್ಲಿತ್ತು. ನಾಯಕ ಗೌತಮ್ ದಿವಾನ್ ಪಾತ್ರದ ರಾಜೇಶ್‌ ಹಾಗೂ ಛಾಯಾ ಸಿಂಗ್ ಅವರು ಭೂಮಿಕಾ ಸದಾಶಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಮೃತಧಾರೆ ಧಾರಾವಾಹಿ ʻಬಡೆ ಅಚ್ಚೆ ಲಗತೆ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಈ ವಾರ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಧಾರಾವಾಹಿ ಯಾವುದು?

‘ಶ್ರೀರಸ್ತು ಶುಭಮಸ್ತು’

ಈ ಧಾರಾವಾಹಿಗೆ ಬೇಡಿಕೆ ಹೆಚ್ಚುತ್ತಿದೆ. ಸುಧಾರಾಣಿ ಮೊದಲಾದವರು ನಟಿಸಿರುವ ಈ ಧಾರಾವಾಹಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಹಿಂದಿನ ವಾರ ಮೂರನೇ ಸ್ಥಾನದಲ್ಲಿತ್ತು. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ನಮ್ಮ ಲಚ್ಚಿ

‘ನಮ್ಮ ಲಚ್ಚಿ’ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಸಿಕ್ಕಿದೆ. ಈ ಧಾರಾವಾಹಿ ಐದನೇ ಸ್ಥಾನದಲ್ಲಿದೆ. ಸುವರ್ಣದಲ್ಲಿ ಪ್ರಸಾರ ಕಾಣುತ್ತಿದೆ.

ಭಾಗ್ಯಲಕ್ಷ್ಮೀ-ಲಕ್ಷ್ಮೀ ಬಾರಮ್ಮ

‘ಭಾಗ್ಯಲಕ್ಷ್ಮೀ’ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಈಗ ಈ ಧಾರಾವಾಹಿ ಏಳನೇ ಸ್ಥಾನಕ್ಕೆ ಇಳಿದಿದೆ. ಈ ಎರಡೂ ಧಾರಾವಾಹಿಗಳ ಟಿಆರ್​ಪಿ ಕೊಂಚ ತಗ್ಗಿದೆ. ಸುದರ್ಶನ್ ರಂಗಪ್ರಸಾದ್, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

Exit mobile version