Site icon Vistara News

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಧಾರಾವಾಹಿ ಯಾವುದು?

Kannada Serials TRP

ಬೆಂಗಳೂರು: ಈ ವಾರದ ಕನ್ನಡ ಕಿರುತೆರೆಯ ಟಿಆರ್‌ಪಿ ಹೊರಬಿದ್ದಿದೆ. ಕೆಲ ಧಾರಾವಾಹಿಗಳು (Kannada Serials TRP) ಕಳೆದ ವಾರಕ್ಕಿಂತ ಈ ವಾರ ಕಡಿಮೆ ಟಿಆರ್‌ಪಿ ಗಳಿಸಿವೆ. ಜೀ ಕನ್ನಡ (Zee Kannada) ಹಾಗೂ ಕಲರ್ಸ್​ ಕನ್ನಡ ಧಾರಾವಾಹಿಗಳು ಟಾಪ್ 3ರಲ್ಲಿ ಸ್ಥಾನ ಪಡೆದುಕೊಂಡಿವೆ.

ಮೊದಲ ಸ್ಥಾನ ‘ಗಟ್ಟಿಮೇಳ’

ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿರುವ ‘ಗಟ್ಟಿಮೇಳ’ ಧಾರಾವಾಹಿ ಕಳೆದವಾರ ಎರಡನೇ ಸ್ಥಾನದಲ್ಲಿತ್ತು. ಈವಾರ ಮೊದಲ ಸ್ಥಾನಕ್ಕೇರಿದೆ.ಮಧ್ಯಮ ವರ್ಗದ ಮನೆಯ ಹೆಣ್ಣು ಮಕ್ಕಳನ್ನು ಹೇಗೆ ಪರಿಮಳಾ ಹಾಗೂ ಮಂಜುನಾಥ್ ದಂಪತಿ ಮದುವೆ ಮಾಡುತ್ತಾರೆ ಎಂಬುದು ಒನ್‌ಲೈನ್‌ ಸ್ಟೋರಿ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ 1000 ಎಪಿಸೋಡ್ ಪೂರೈಸಿದೆ.

ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು.

ಈ ಧಾರಾವಾಹಿ ಕಳೆದ ವಾರ ಮೊದಲ ಸ್ಥಾನದಲ್ಲಿತ್ತು. ಈ ಧಾರಾವಾಹಿ ಎರಡನೇ ಸ್ಥಾನಕ್ಕೆ ಇಳಿದಿದೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Kannada Serials: ಅಂತ್ಯ ಕಾಣಲಿವೆ ಕನ್ನಡದ ಎರಡು ಪ್ರಮುಖ ಧಾರಾವಾಹಿಗಳು? ಕಾರಣವೇನು?

ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಷ್ಮೀ’

ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಇದು ಅಕ್ಕ ತಂಗಿ ಕಥೆ. ಈ ಎರಡೂ ಧಾರಾವಾಹಿಗಳು ಒಂದೇ ಟಿಆರ್​ಪಿ ಪಡೆದು ಮೂರನೇ ಸ್ಥಾನದಲ್ಲಿವೆ. ಭಾಗ್ಯಲಕ್ಷ್ಮೀ ಧಾರಾವಾಹಿ ಕಳೆದ ವಾರ ಐದನೇ ಸ್ಥಾನದಲ್ಲಿತ್ತು. ಸುದರ್ಶನ್ ರಂಗಪ್ರಸಾದ್, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಜೀ ವಾಹಿನಿಯಲ್ಲಿ ಕೆಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ ಹಾಗೂ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಧಾರಾವಾಹಿಗಳು ವಿದಾಯ ಹೇಳುತ್ತಿವೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಕೂಡ ಮುಕ್ತಾಯಗೊಳ್ಳುತ್ತಿದೆ. ಇನ್ನೊಂದೆಡೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ ‘ಗಿಣಿರಾಮ’ ಧಾರಾವಾಹಿ (Kannada Serials) ತನ್ನ ಪ್ರಸಾರ ನಿಲ್ಲಿಸಲಿದೆ .

Exit mobile version