ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ (Kannada Television News) ಆಗಾಗ ಹೊಸ ಬದಲಾವಣೆಯನ್ನು ಪ್ರೇಕ್ಷಕರು ಗಮನಿಸುತ್ತಲೇ ಇರುತ್ತಾರೆ. ಹೊಸ ಧಾರಾವಾಹಿಗಳು ಬರುವುದು ಸರ್ವೇ ಸಾಮಾನ್ಯ. ಇದೀಗ ಜನಮನ ಗೆದ್ದ ಪ್ರಮುಖ ಎರಡು ಧಾರಾವಾಹಿಗಳು ಅಂತ್ಯ ಹಾಡುತ್ತಿವೆ. ಈಗ ಜೀ ಕನ್ನಡದಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಸಾರ ಕಾಣುತ್ತಲೇ ಬರುತ್ತಿದ್ದ ʻಹಿಟ್ಲರ್ ಕಲ್ಯಾಣʼ ಮತ್ತು ʻಪಾರುʼ ಧಾರಾವಾಹಿಗಳ ಆಟ ಕೊನೆಯಾಗಲಿದೆ. ಈ ವಿಚಾರವನ್ನು ಜೀ ಕನ್ನಡ ವಾಹಿನಿಯೇ ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ರೋಚಕ ತಿರುವಿನಲ್ಲಿರುವ ನಿಮ್ಮ ನೆಚ್ಚಿನ ʻಪಾರುʼ ಮತ್ತು ʻಹಿಟ್ಲರ್ ಕಲ್ಯಾಣʼ ಧಾರಾವಾಹಿಗಳ ಅಂತಿಮ ಸಂಚಿಕೆಗಳನ್ನು ಮಿಸ್ ಮಾಡದೇ ನೋಡಿ ಎಂದಿದೆ. ಈ ಮೂಲಕ ಇನ್ನೇನು ಇದೇ ವಾರ ಈ ಧಾರಾವಾಹಿಗಳ ಆಟ ಕೊನೆಯಾಗಲಿದೆ.
ಜೀ ಕನ್ನಡದಲ್ಲಿ ʻಪಾರುʼ ಸೀರಿಯಲ್ ಸಂಜೆ 6 ಗಂಟೆಗೆ ಪ್ರಸಾರ ಕಾಣುತ್ತಿದೆ. ಅದೇ ರೀತಿ ಸಂಜೆ 6.30ಕ್ಕೆ ʻಹಿಟ್ಲರ್ ಕಲ್ಯಾಣʼ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಎರಡೂ ಸೀರಿಯಲ್‌ಗಳು ಮುಕ್ತಾಯವಾಗುತ್ತಿದ್ದಂತೆ, ಆ ಸಮಯಕ್ಕೆ ಬೇರೆ ಧಾರಾವಾಹಿಗಳು ಬರಲಿದೆ. ʻಸತ್ಯʼ ಸೀರಿಯಲ್ 6ಗಂಟೆಗೆ ಶುರುವಾಗಲಿದೆ. ಅದೇ ರೀತಿ, 8:30ಕ್ಕೆ ಬರುತ್ತಿದ್ದ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್ 6:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಹೊಸ ಧಾರಾವಾಹಿ ʻಶ್ರಾವಣಿ ಸುಬ್ರಮಣ್ಯʼ ಮಾ. 18ರಿಂದ ಪ್ರಸಾರವಾಗಲಿದ್ದು, ಇನ್ನಷ್ಟೇ ಸಮಯ ನಿಗದಿಯಾಗಬೇಕಿದೆ.
ಇದನ್ನೂ ಓದಿ: Lakshmi Siddaiah: ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ಆ್ಯಕ್ಸಿಡೆಂಟ್ ಮಾಡಿ ಯುವತಿ ಮೇಲೆ ಹಲ್ಲೆ!
ಪಾರು ಧಾರಾವಾಹಿ
ಈ ಧಾರಾವಾಹಿಯಲ್ಲಿ ವಿನಯ್ ಪ್ರಸಾದ್ ಪಾತ್ರ ಅಖಿಲಾಂಡೇಶ್ವರಿ ಪ್ರಮುಖ ಹೈಲೈಟ್. ಅರಸನ ಕೋಟೆಯನ್ನು ಬೆಳೆಸುತ್ತ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುವ ಹೆಣ್ಣು ಮಗಳು ಅಖಿಲಾಂಡೇಶ್ವರಿ.ವಿನಯಾಪ್ರಸಾದ್ ಅವರು ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಿರುತೆರೆಗೆ ಕಾಲಿಟ್ಟು ನಟನೆಯ ಮೂಲಕ ಧಾರಾವಾಹಿಯ ಘನತೆ ಹೆಚ್ಚಿಸಿದ್ದರು. ಆದಿ ಪಾತ್ರದ ಶರತ್, ಪಾರು ಪಾತ್ರದ ಮೋಕ್ಷಿತಾ ಪೈ ವೀಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದರು. ಎಸ್. ನಾರಾಯಣ್ ಅವರು ವೀರಯ್ಯದೇವ, ನಾಗೇಂದ್ರ ಶಾ ಅವರು ಹನುಮಂತು ಮತ್ತು ನಾಗೇಶ್ ಯಾದವ್ ಅವರು ರಘು ರಾಮ್ ಕೂಡ ನಟಿಸಿದ್ದಾರೆ.
ಹಿಟ್ಲರ್ ಕಲ್ಯಾಣ
ದಿಲೀಪ್ ರಾಜ್, ಮಲೈಕಾ ಟಿ ವಸುಪಾಲ್, ನೇಹಾ ಪಾಟೀಲ್, ರಿತು, ಪದ್ಮಿನಿ, ರವಿ ಭಟ್, ವಾಣಿಶ್ರೀ, ವಿದ್ಯಾ ಮೂರ್ತಿ, ರಜನಿ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದರು. ನಟ, ನಿರ್ದೇಶಕ ದಿಲೀಪ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಕಿರುತೆರೆಯಲ್ಲಿ ಮೋಡಿ ಮಾಡಿತ್ತು. ಈ ಧಾರಾವಾಹಿಯಲ್ಲಿ ಅಂತರಾ ಆಲಿಯಾಸ್ ಪ್ರಾರ್ಥನಾ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ರಜಿನಿಯವರು ಮನೋಜ್ಞ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದರು. ಎಜೆ ಮತ್ತು ಲೀಲಾ ಜೋಡಿಯನ್ನು ಫ್ಯಾನ್ಸ್ ತುಂಬಾ ಮೆಚ್ಚಿಕೊಂಡಿದ್ದಾರೆ.