ಬೆಂಗಳೂರು: ಕನ್ನಡ ಕಿರುತೆರೆ ನಿರ್ದೇಶಕ ಸಯ್ಯದ್ ಅಶ್ರಫ್ (Sayyad Ashraf Director) ಅಕ್ಟೋಬರ್ 31ರಂದು ಬೆಲಗ್ಗೆ 3 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟರಾಗಿ ನಿರ್ದೆಶಕರಾಗಿ ಸಯ್ಯದ್ ಗುರುತಿಸಿಕೊಂಡಿದ್ದರು. ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಸಾವಿರಾರು ಕಂತುಗಳಲ್ಲಿ ಪ್ರಸಾರವಾಗಿರುವ ಧಾರಾವಾಹಿಗಳಿಗೆ ಇವರು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಮೀಡಿಯಾ ಹೌಸ್ ಸ್ಟುಡಿಯೊ ನಿರ್ಮಾಣದಲ್ಲಿ ಹತ್ತು ವರ್ಷಗಳ ಕಾಲ ಧಾರಾವಾಹಿಗಾಗಿ ದುಡಿದಿದ್ದಾರೆ. ಅಶ್ರಫ್ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ | RSS ಪ್ರಚಾರಕ, ಅಂಬೇಡ್ಕರ್ ಕುರಿತ ಕೃತಿಯ ಅನುವಾದಕ ಚಂದ್ರಶೇಖರ ಭಂಡಾರಿ ನಿಧನ