Site icon Vistara News

Lakshmi Baramma 2: ಗುಡ್‌ ನ್ಯೂಸ್‌ ಕೊಟ್ಟ ʻಲಕ್ಷ್ಮಿ ಬಾರಮ್ಮʼ ಧಾರಾವಾಹಿ ಖ್ಯಾತಿಯ ತನ್ವಿ ರಾವ್‌!

Tanvi Rao

ಬೆಂಗಳೂರು: ಲಕ್ಷ್ಮಿ ಬಾರಮ್ಮ ಧಾರಾವಾಹಿಗೆ (Lakshmi Baramma 2) ಅದರದ್ದೇ ಆದ ಅಭಿಮಾನಿ ವರ್ಗವಿದೆ. ಆದರೆ ಇತ್ತೀಚೆಗೆ ಈ ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿವೊಬ್ಬರು ಔಟ್‌ ಆಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಕೀರ್ತಿ ಪಾತ್ರಧಾರಿ ತನ್ವಿ ರಾವ್‌ ಸಿರೀಯಲ್‌ನಿಂದ ಹೊರ ನಡೆಯಲಿದ್ದಾರೆ ಎಂದು ವರದಿಯಾಗಿತ್ತು. ಇದರಿಂದ ಅಭಿಮಾನಿಗಳು ರೊಚ್ಚಿಗೆದ್ದು ಸೀರಿಯಲ್‌ ನೋಡುವುದೇ ಇಲ್ಲ ಎಂದು ಕಮೆಂಟ್‌ ಮಾಡಿದ್ದರು. ಇದೀಗ ಸ್ವತಃ ತನ್ವಿ ರಾವ್‌ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ʻʻನಾನು ಧಾರಾವಾಹಿಯಿಂದ ಹೊರ ಬರುತ್ತಿಲ್ಲ. ಇದು ಸತ್ಯವಲ್ಲ. ನನ್ನ ಬಗ್ಗೆ ಹೊಸ ಮಾಹಿತಿ ಇದ್ದರೆ ನನ್ನ ಸಾಮಾಜಿಕ ಜಾಲತಾಣ ಅಕೌಂಟ್‌ನಲ್ಲಿ ತಿಳಿಸುತ್ತೇನೆʼʼ ಎಂದು ನಟಿ ತಿಳಿಸಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಧಾರಾವಾಹಿಯ ಒಂದೊಂದು ಪಾತ್ರಗಳೂ ಧಾರಾವಾಹಿ ಪ್ರಿಯರಿಗೆ ಬಹಳ ಇಷ್ಟವಾಗಿವೆ. ಮನೆಗೆ ಬರುವ ಸೊಸೆ ಮಗನನ್ನು ನನ್ನಿಂದ ಎಲ್ಲಿ ದೂರ ಮಾಡುತ್ತಾಳೋ ಎಂಬ ಭಯದಿಂದ ಕಾವೇರಿ, ಬಡವರ ಮನೆ ಹುಡುಗಿ ಭಾಗ್ಯಳನ್ನು ತನ್ನ ಮಗನಿಗೆ ಮದುವೆ ಮಾಡಿಸುತ್ತಾಳೆ. ನಾಯಕ ವೈಷ್ಣವ್‌ಗೆ ಲಕ್ಷ್ಮಿಯನ್ನು ಮದುವೆ ಆಗಲು ಇಷ್ಟವಿರುವುದಿಲ್ಲ. ವೈಷ್ಣವ್‌ ಹಾಗೂ ಕೀರ್ತಿ ಇಬ್ಬರೂ ಪ್ರೀತಿಸುತ್ತಿರುತ್ತಾರೆ. ಆದರೆ ಕಾವೇರಿಯ ನಾಟಕದಿಂದ ಕೀರ್ತಿಯೇ ಮದುವೆ ಇಷ್ಟವಿಲ್ಲ ಎಂದು ಹೇಳುವುದರಿಂದ ಲಕ್ಷ್ಮಿಯನ್ನು ಮದುವೆ ಆಗುತ್ತಾನೆ. ಆದರೆ ಈಗ ಎಲ್ಲವೂ ಬದಲಾಗಿದೆ. ಇಷ್ಟವಿಲ್ಲದೆ ಲಕ್ಷ್ಮಿಯನ್ನು ಮದುವೆ ಆದ ವೈಷ್ಣವ್‌ಗೆ ಅದೇ ಲಕ್ಷ್ಮಿಯ ಮೇಲೆ ಪ್ರೀತಿ ಚಿಗುರುತ್ತಿದೆ.

ಇದನ್ನೂ ಓದಿ: Gicchi Giligili: ಮದುವೆಗೆಂದು ಡೂಪ್ಲಿಕೆಟ್‌ ಆಧಾರ್‌ ಕಾರ್ಡ್‌ ಮಾಡ್ಸಿದ್ರಂತೆ ʻಗಿಚ್ಚಿ ಗಿಲಿಗಿಲಿʼ ವಿನ್ನರ್‌ ಚಂದ್ರಪ್ರಭ!

ನಟಿಯ ಸ್ಪಷ್ಟನೆ

ಕೀರ್ತಿ ಪಾತ್ರದಲ್ಲಿ ನಟಿಸುತ್ತಿರುವ ತನ್ವಿ ರಾವ್‌, ನೆಗೆಟಿವ್‌ ಪಾತ್ರದಲ್ಲಿ ನಟಿಸುತ್ತಿದ್ದರೂ ಆಕೆಯ ಸ್ಟೈಲ್‌, ಆಕ್ಟಿಂಗ್‌ ಎಲ್ಲರಿಗೂ ಇಷ್ಟವಾಗಿತ್ತು. ಆದರೆ ಈ ನಟಿ ಧಾರಾವಾಹಿಯಿಂದ ಹೊರ ಹೋಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದೀಗ ಈ ಬಗ್ಗೆ ನಟಿ ಇನ್‌ಸ್ಟಾ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ʻʻನಾನು ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನು ಬಿಡಲಿದ್ದೇನೆ ಎಂಬ ವದಂತಿ ಕೇಳ್ಪಟ್ಟೆ. ಇದು ಸತ್ಯವಲ್ಲ. ನನ್ನ ಬಗ್ಗೆ ಹೊಸ ಮಾಹಿತಿ ಇದ್ದರೆ ನನ್ನ ಸಾಮಾಜಿಕ ಜಾಲತಾಣ ಅಕೌಂಟ್‌ನಲ್ಲಿ ತಿಳಿಸುತ್ತೇನೆ ಎಂದು ನಟಿ ತಿಳಿಸಿದ್ದಾರೆ. ಈ ಮೂಲಕ ತಾನು ಕೀರ್ತಿ ಪಾತ್ರವನ್ನು, ಸೀರಿಯಲ್ ಅನ್ನು ಬಿಡುತ್ತಿಲ್ಲ ಈ ವದಂತಿ ಸುಳ್ಳು ಎಂದು ತನ್ವಿ ರಾಮ್ ಸ್ಪಷ್ಟನೆ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದಗಳು. ಮುಂದೆಯೂ ಕೂಡ ನಮ್ಮ ಸೀರಿಯಲ್‌ಗೆ ಹೀಗೆ ಬೆಂಬಲಿ ಇರಲಿʼʼ ಎಂದು ಕೇಳಿಕೊಂಡಿದ್ದಾರೆ.

ಗುಲಾಬ್‌ ಗ್ಯಾಂಗ್‌, ರಂಗ್‌ ಬಿ ರಂಗ್‌ ಬಾಲಿವುಡ್‌ ಸಿನಿಮಾಗಳಲ್ಲಿ ತನ್ವಿ ನಟಿಸಿದ್ದರು. ಆಕೃತಿ, ರಾಧೇ ಶ್ಯಾಮ್‌ ಹಿಂದಿ ಧಾರಾವಾಹಿ, ಜುಮೆಲ ತಮಿಳು ಸೀರಿಯಲ್‌ನಲ್ಲಿ ನಟಿಸಿದ್ದರು. ತನ್ವಿ ರಾವ್‌ ಭರತನಾಟ್ಯ ಕಲಾವಿದೆಯಾಗಿದ್ದು, ಕಥಕ್‌ ಕೂಡ ಅಭ್ಯಾಸ ಮಾಡಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಪಾತ್ರದಲ್ಲಿ ಶಮಂತ್ ಬ್ರೊ ಗೌಡ, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್, ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ, ಸುಪ್ರೀತಾ ಪಾತ್ರದಲ್ಲಿ ರಜನಿ ಪ್ರವೀಣ್ ಮುಂತಾದವರು ನಟಿಸುತ್ತಿದ್ದಾರೆ. ಈ ಧಾರಾವಾಹಿಗೆ ಆರಂಭದಲ್ಲಿ ಒಳ್ಳೆಯ ಟಿಆರ್‌ಪಿ ಸಿಕ್ಕಿ ಟಾಪ್ 5 ಸ್ಥಾನ ಪಡೆದಿತ್ತು. ಇತ್ತೀಚಿನ ದಿನಗಳಲ್ಲಿ ಈ ಸೀರಿಯಲ್ ಟಾಪ್ 5 ಸ್ಥಾನದಿಂದ ಹೊರನಡೆದಿದೆ.

Exit mobile version