Site icon Vistara News

Mahanati Show: ಸ್ವಾಭಿಮಾನಿ ಅಜ್ಜಿಯ ಕಷ್ಟಕ್ಕೆ ನೆರವಾದ ಅನುಶ್ರೀ; ದಿನಸಿ ವ್ಯವಸ್ಥೆ ಮಾಡಿದ ತರುಣ್ ಸುಧೀರ್!

Mahanati Show Anushree helped the hagyalakshmi ajji Tarun Sudhir arranged the groceries

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಈ ಮೂಲಕ ಹಲವು ಪ್ರತಿಭೆಗಳನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ಈ ವಾಹಿನಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನು ನೀಡುವ ಕೆಲಸವನ್ನು ಈ ‘ಮಹಾನಟಿ’ ರಿಯಾಲಿಟಿ ಶೋ (Mahanati Show) ಮಾಡುತ್ತಿದೆ. ಈ ವಾರ ಜೀವನಕ್ಕೆ ಸ್ಪೂರ್ತಿ ತುಂಬುವ ಸಾಮಾನ್ಯ ಸಾಧಕರನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದೆ ವಾಹಿನಿ. ಕೋಲಾರ ಮೂಲದ ಭಾಗ್ಯಲಕ್ಷ್ಮಮ್ಮ ಅವರ ಜೀವನದ ಕಷ್ಟಗಳನ್ನು ಕೇಳಿ ನಿರೂಪಕಿ ಅನುಶ್ರೀ ಭಾವುಕರಾದರು. ಮಾತ್ರವಲ್ಲ ಭಾಗ್ಯಲಕ್ಷ್ಮಮ್ಮ ಅವರ ಮನೆ ಬಾಡಿಗೆಯನ್ನು ಅನುಶ್ರೀ ಕಟ್ಟುವುದಾಗಿ ವೇದಿಕೆಯಲ್ಲಿ ಹೇಳಿಕೊಂಡರು.

ಕೋಲಾರ ಮೂಲದ ಭಾಗ್ಯಲಕ್ಷ್ಮಮ್ಮ ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಒಬ್ಬ ಮಗ. ಮಗನ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಕುಟುಂಬ ಬರುತ್ತದೆ. ಆಗ ಮಗನಿಗೆ ಎರಡೂ ಕಿಡ್ನಿ ಫೆಲ್ಯೂರ್‌ ಆಗುತ್ತೆ. ವಿಚಾರಿಸಿದಾಗ ಕಿಡ್ನಿ ಇದೆ. ಆದರೆ 10-12 ಲಕ್ಷ ರೂ. ಖರ್ಚು ಆಗುತ್ತದೆ ಎಂದು ತಿಳಿದಾಗ, ಭಾಗ್ಯಲಕ್ಷ್ಮಮ್ಮ ಹಣದ ವ್ಯವಸ್ಥೆ ಮಾಡಲು ತುಂಬ ಕಷ್ಟ ಪಡುತ್ತಾರೆ. ತಮ್ಮ ಒಂದು ಕಿಡ್ನಿಯನ್ನು ಮಗನಿಗೆ ಕೊಟ್ಟು ಮಗನ ಜೀವ ಉಳಿಸುತ್ತಾರೆ. ಆಪರೇಷನ್ ಆಗಿ ಎರಡೇ ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಳ್ಳುತ್ತಾರೆ. ಮಗ ಇಲ್ಲ ಎನ್ನುವ ದುಖಃದಲ್ಲಿ ಕೊರಗುತ್ತಿದ್ದ ಪತಿ ತೀರಿಕೊಳ್ಳುತ್ತಾರೆ. ಭಾಗ್ಯಲಕ್ಷ್ಮಮ್ಮ ಅವರ ಈ ಜೀವನದ ಕಥೆ ಕೇಳಿ ಮಹಾನಟಿ ವೇದಿಕೆಯಲ್ಲಿ ಎಲ್ಲರೂ ಭಾವುಕರಾದರು.

ಇದನ್ನೂ ಓದಿ: Arun Yogiraj: ಕಿರುತೆರೆಗೆ ಕಾಲಿಟ್ಟ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌; ಯಾವ ಕಾರ್ಯಕ್ರಮ?

ಭಾಗ್ಯಲಕ್ಷ್ಮಮ್ಮ ಅವರಿಗೆ ತಾನು ಸ್ವಾಭಿಮಾನಿಯಾಗಿಯೇ ಬದುಕಬೇಕೆಂಬ ಹಠ. ಹೀಗಿರುವಾಗ ಅನುಶ್ರೀ ಅವರು ವೇದಿಕೆಯಲ್ಲಿ ಭಾಗ್ಯಲಕ್ಷ್ಮಮ್ಮ ಅವರಿಗೆ ʻʻನಾನು ನಿಮ್ಮ ಮೊಮ್ಮಗಳು ತರ ಅಲ್ವಾ? ನಾನು ಬದುಕಿರುವವರೆಗೂ ನಿಮ್ಮ ಮನೆ ಬಾಡಿಗೆ ಕಟ್ಟುತ್ತೇನೆ. ನಿಮಗೆ ಇಷ್ಟ ಇರುವ ಮನೆಯಲ್ಲಿ ಇರಿʼʼಎಂದು ಭಾವುಕರಾದರು ಅನುಶ್ರೀ. ಮಾತ್ರವಲ್ಲ ತರುಣ್‌ ಸುಧೀರ್‌ ಅವರು ಅಜ್ಜಿಯ ಸಂಪೂರ್ಣ ದಿನಸಿ ಸಾಮಾಗ್ರಿ ಖರ್ಚನ್ನು ಹೊತ್ತುಕೊಳ್ಳುವುದಾಗಿ ಹೇಳಿದರು.

ಭಾಗ್ಯಲಕ್ಷ್ಮಮ್ಮ ವೇದಿಕೆಯಲ್ಲಿ ಮಾತನಾಡಿ ʻʻನಾನು ಮತ್ತು ಮಗಳು ಒಟ್ಟಿಗೆ ಇದ್ದೇವೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಮಗಳು ಊದು ಬತ್ತಿಯನ್ನು ಮಾಡುತ್ತಾಳೆ. ಮನೆ ಬಾಡಿಗೆಗೆ 5 ಸಾವಿರ ಬೇಕು. ವಯಸ್ಸಾದವರಿಗೆ 1200 ರೂ. ಬರತ್ತೆ. ಹೀಗೆ ಬತ್ತಿ ಮಾರಿ ಆ ಹಣದಲ್ಲೇ ಬದುಕುತ್ತಿದ್ದೇವೆ. ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕಬೇಕು. ದೇವರು ಮೆಚ್ಚುವಂತಹ ಕೆಲಸ ಮಾಡಬೇಕುʼʼಎಂದರು.

ಇನ್ನು ರಮೇಶ್‌ ಅರವಿಂದ್‌ ಅವರು ಕೂಡ ʻವೀಕೆಂಡ್‌ ವಿತ್‌ ರಮೇಶ್‌ʼ ರೀತಿ ನಿರೂಪಣೆ ಮಾಡಿ, ಭಾಗ್ಯಲಕ್ಷ್ಮಮ್ಮ ಅವರು ಇಂದಿನ ಸಾಧಕರು ಎಂದು ಗೌರವ ನೀಡಿದರು.

ಇದನ್ನೂ ಓದಿ: Ramana Avatara: ಬಿಡುಗಡೆ ದಿನಾಂಕ ಘೋಷಣೆ ಮಾಡಿದ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾ

ಜೀ ಕನ್ನಡ ಪೋಸ್ಟ್‌

‘ಮಹಾನಟಿ’ ರಿಯಾಲಿಟಿ ಶೋಗೆ ಈ ಬಾರಿ ಮೂರು ಹೊಸ ತೀರ್ಪುಗಾರರು ವೇದಿಕೆಯನ್ನ ಅಲಂಕರಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ನಟ ರಮೇಶ್‌ ಅರವಿಂದ್‌, ಖ್ಯಾತ ನಾಯಕ ನಟಿ ಪ್ರೇಮಾ, ‘ಕಾಟೇರ’ದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Exit mobile version