ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಈ ಮೂಲಕ ಹಲವು ಪ್ರತಿಭೆಗಳನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ಈ ವಾಹಿನಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನು ನೀಡುವ ಕೆಲಸವನ್ನು ಈ ‘ಮಹಾನಟಿ’ ರಿಯಾಲಿಟಿ ಶೋ (Mahanati Show) ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ನಟಿ ಗಗನಾ ಪ್ರಮುಖ ಹೈಲೈಟ್. ಯಾವುದೇ ವಿಷಯ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುವ ಅವರು ಈ ಬಾರಿ ಟ್ರೋಲ್ಗೆ ಗುರಿಯಾಗಿದ್ದಾರೆ. ಆರಂಭದಲ್ಲಿ ಗಗನಾ ಡೈಲಾಗ್ ನತ್ತು ನಟನೆಗೆ ತರುಣ್ ಸುಧೀರ್ ಮಚ್ಚುಗೆ ವ್ಯಕ್ತಪಡಿಸಿ, ಅಡ್ವಾನ್ಸ್ ಕೂಡ ಕೊಟ್ಟಿದ್ದರು. ಎರಡನೇ ಬಾರಿಗೆ ಲೋಟವನ್ನು ಬಹುಮಾನವಾಗಿ ನೀಡಿದ್ದರು. ಹೀಗೆ ವಾರಕ್ಕೊಮ್ಮೆ ವಿಭಿನ್ನವಾದ ನಟನೆಯಿಂದ ಜಡ್ಜಸ್ ಗಳ ಗಮನ ಸೆಳೆಯುತ್ತಿದ್ದರು. ಇದೀಗ ಸ್ಪರ್ಧಿ ಗಗನಾ, ನಿರೂಪಕಿ ಅನುಶ್ರೀ, ತೀರ್ಪುಗಾರರಾದ ರಮೇಶ್ ಅರವಿಂದ್, ನಟಿ ಪ್ರೇಮ ಮತ್ತಿತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಗಿದ್ದೇನು?
ಈ ಮಹಾನಟಿ ಶೋನಲ್ಲಿ ರಮೇಶ್ ಅರವಿಂದ್ ಅವರು ಒಂದೊಂದು ಟಾಪಿಕ್ ಕೊಡುತ್ತಾರೆ. ಅದರ ಬಗ್ಗೆ ಸ್ಪರ್ಧಿಗಳು ನಟಿಸಬೇಕು. ಮಹಾನಟಿಯರು ತಕ್ಷಣೆಕ್ಕೆ ಡೈಲಾಗ್ ರೆಡಿ ಮಾಡಿಕೊಂಡು ನಟಿಸುತ್ತಾರೆ. ಈ ಬಾರಿ ಗಗನಾಗೆ ಮೆಕ್ಯಾನಿಕಲ್ ಲೈಫ್ ಬಗ್ಗೆ ಕಾನ್ಸೆಪ್ಟ್ ಕೊಟ್ಟಿದ್ದರು. ನಿಮ್ಮ ತಂಗಿ ಮೆಕ್ಯಾನಿಕಲ್ ಅವರನ್ನು ಮದುವೆ ಆಗಿದ್ದರೆ ಏನು ಮಾಡುತ್ತೀಯಾ? ಎಂದು ಸ್ಕಿಟ್ ಮಾಡಬೇಕಿತ್ತು. ಡೈಲಾಗ್ ಹೇಳುವ ಭರದಲ್ಲಿ ಮೆಕ್ಯಾನಿಕ್ ಮದುವೆಯಾದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ ಎಂದಿದ್ದಾರೆ, ಈ ಬಗ್ಗೆ ರಮೇಶ್ ಕೂಡ ಬೇಸರ ವ್ಯಕ್ತಪಡಿಸಿದರು. ಜತೆಗೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ್ಯ ವ್ಯಕ್ತವಾಗಿದೆ. ಇನ್ನೊಂದೆಡೆ ಚಿಕ್ಕನಾಯಕನಹಳ್ಳಿಯ ದ್ವಿಚಕ್ರವಾಹನ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ ಎಂದು ದೂರುನೀಡಿದ್ದಾರೆ.
ಇದನ್ನೂ ಓದಿ: Mahanati Show: ಸ್ವಾಭಿಮಾನಿ ಅಜ್ಜಿಯ ಕಷ್ಟಕ್ಕೆ ನೆರವಾದ ಅನುಶ್ರೀ; ದಿನಸಿ ವ್ಯವಸ್ಥೆ ಮಾಡಿದ ತರುಣ್ ಸುಧೀರ್!
ಗಗನಾ ವಿಡಿಯೊಗೆ ಶಾಕಿಂಗ್ ಕಮೆಂಟ್ಗಳು ಬಂದಿವೆ. ಅದರಲ್ಲೂ ಭಗ್ನ ಪ್ರೇಮಿ ಎಂಬ ವಿಚಾರವೂ ಬಂದಿದೆ. ‘ನೀನ್ ಎಂತ ಟ್ಯಾಲೆಂಟ್ ಅಂತ ಗೊತ್ತು. ನನ್ನಂತವನಿಗೆ ಕಾಗೆ ಹಾರಿಸಿದ್ದೀಯ. ಇನ್ನು ಚಾನೆಲ್ ಯಾವ ಲೆಕ್ಕ’ ಅಂತ ಟ್ರೋಲ್ ಗುರು ಬೆಂಗಳೂರು ಎಂಬ ಪೇಜ್ ಕಮೆಂಟ್ ಮಾಡಿದೆ.
ʻಮಹಾನಟಿ’ ರಿಯಾಲಿಟಿ ಶೋಗೆ ಈ ಬಾರಿ ಮೂರು ಹೊಸ ತೀರ್ಪುಗಾರರು ವೇದಿಕೆಯನ್ನ ಅಲಂಕರಿಸಿದ್ದಾರೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ, ನಟ ರಮೇಶ್ ಅರವಿಂದ್, ಖ್ಯಾತ ನಾಯಕ ನಟಿ ಪ್ರೇಮಾ, ‘ಕಾಟೇರ’ದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್ ಸುಧೀರ್ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.