ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ‘ಮಹಾನಟಿ’ ರಿಯಾಲಿಟಿ ಶೋ (Mahanati Show) ಪ್ರಸಾರ ಕಾಣುತ್ತಿದೆ. ಈ ಶೋನಲ್ಲಿ ಗಗನಾ ಪ್ರಮುಖ ಹೈಲೈಟ್. ಯಾವುದೇ ವಿಷಯ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸುವ ಅವರು ಈ ಬಾರಿಯೂ ವೇದಿಕೆಯಲ್ಲಿ ನಟನೆ ಮೂಲಕ ತಮ್ಮ ಕಾಮಿಡಿ ಮೂಲಕ ರಂಜಿಸಿದ್ದಾರೆ. ಈ ಮಹಾನಟಿ ಶೋನಲ್ಲಿ ರಮೇಶ್ ಅರವಿಂದ್ ಅವರು ಒಂದೊಂದು ಟಾಪಿಕ್ ಕೊಡುತ್ತಾರೆ. ಅದರ ಬಗ್ಗೆ ಸ್ಪರ್ಧಿಗಳು ನಟಿಸಬೇಕು. ಮಹಾನಟಿಯರು ತಕ್ಷಣೆಕ್ಕೆ ಡೈಲಾಗ್ ರೆಡಿ ಮಾಡಿಕೊಂಡು ನಟಿಸುತ್ತಾರೆ. ಈ ಬಾರಿ ಕಾನ್ಸೆಪ್ಟ್ ಜೊತೆಗೆ ಸೆಲೆಬ್ರೆಟಿಗಳನ್ನು ಕರೆಸಲಾಗಿದೆ. ಯಾವ್ಯಾವ ಕಾನ್ಸೆಪ್ಟ್ಗೆ ಯಾರು ಸರಿ ಹೊಂದುತ್ತಾರೆ ಆ ಸೆಲೆಬ್ರೆಟಿಗಳನ್ನು ಕರೆಸಲಾಗಿದೆ. ನಟ ರಿಷಿ ಅವರು ಈ ವಾರ ಬಂದಿದ್ದರು. ಈ ವೇಳೆ ಸ್ಪರ್ಧಿ ಗಗನಾ ಅವರು ನಟನ ನಂಬರ್ ಕೇಳುವ ಮೂಲಕ ವೇದಿಕೆಯಲ್ಲಿ ನೆರೆದವರನ್ನು ನಕ್ಕು ನಗಿಸಿದರು.
‘ಮುದ್ದು ಮಣಿಗಳು’ ಧಾರಾವಾಹಿ ಮೂಲಕ ಸೋನಿ ಸಖತ್ ಫೇಮಸ್ ಆದವರು. ಮುದ್ದುಲಕ್ಷ್ಮೀಯ ಮಗಳಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಮುಗಿದ ಮೇಲೆ ಇದೀಗ ಮಹಾನಟಿ ವೇದಿಕೆ ಮುಖಾಂತರ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಬಂದಿದ್ದಾರೆ. ಸೋನಿಗೆ ತಮ್ಮ ಬಾಯ್ಫ್ರೆಂಡ್ರನ್ನು ಇಂಪ್ರೆಸ್ ಮಾಡು ಟಾಪಿಕ್ ರಮೇಶ್ ನೀಟಿದ್ದರು. ಆದರೆ ಸೋನಿಗೆ ಸಂಜೆಯಾದರೆ ಕಣ್ಣು ಕೂಡ ಕಾಣುವುದಿಲ್ಲ. ಸೋನಿ ಬಾಯ್ ಫ್ರೆಂಡ್ ರೂಪದಲ್ಲಿ ರಿಯಾಲಿಟಿ ಶೋನಲ್ಲಿ ಪ್ರತ್ಯಕ್ಷವಾಗಿದ್ದು ರಿಷಿ. ಆದರೆ ರಿಷಿ ಅವರಿಗೆ ಹುಡುಗಿಯ ಬಗ್ಗೆ ರಿಷಿ ಕೊಂಚವೂ ಅನುಮಾನ ಪಡದೇ, ಬೇಸರ ಮಾಡಿಕೊಳ್ಳದೇ ಹುಡುಗಿಗೆ ಇಂಪ್ರೆಸ್ ಮಾಡಿದ್ದಾರೆ.
ಇದಾದ ಬಳಿಕ ಅನುಶ್ರೀ ಎಲ್ಲಾ ಮಹಾನಟಿಯರನ್ನು ವೇದಿಕೆ ಮೇಲೆ ಕರೆದಿದ್ದಾರೆ. ಎಲ್ಲಾ ನಟಿಮಣಿಯರು ರಿಷಿ ಜತೆಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಗಗನಾ ಕಾಮಿಡಿ ಎಲ್ಲರಿಗೂ ಇಷ್ಟವಾಗಿದೆ. ಗಗನಾ ಅವರು ರಿಷಿ ಅವರನ್ನು ಶೋ ಮೊದಲು ನೋಡಿದ್ದರಂತೆ. ಫೋಟೊ ಮಾತ್ರ ತೆಗೆದುಕೊಂಡಿದ್ದರಂತೆ. ಈಗ ಅವರ ಜತೆ ವೇದಿಕೆ ಹಂಚಿಕೊಳ್ಳುವುದರ ಬಗ್ಗೆ ಸಖತ್ ಖುಷ್ ಆಗಿದ್ದಾರೆ. ಇದಾದ ಬಳಿಕ ಅನುಶ್ರೀ ಅವರು ಗಗನಾ ಅವರಿಗೆ ತಮಾಷೆಯಾಗಿ ರಿಷಿ ಮತ್ತು ಗಗನಾ ವಿಮಾನದಲ್ಲಿ ಟ್ರಾವೆಲ್ ಮಾಡುವ ಟಾಪಿಕ್ ಕೊಟ್ಟಿದ್ದಾರೆ. ಟ್ರಾವೆಲ್ ಮಾಡುವಾಗ ಇಬ್ಬರ ಮಾತುಕತೆ ಹೇಗಿರುತ್ತೆ ಎಂಬುದನ್ನು ರಿಹರ್ಸಲ್ ಮಾಡಿಸಿದ್ದಾರೆ. ಈ ವೇಳೆ ಅನುಶ್ರೀ, ಜ್ಯೂಸ್, ಕಾಫಿ ಬೇಕಾ? ಎಂದು ಕೇಳಿದರೆ ರಿಷಿ ʻನೀರು ಸಾಕುʼ ಎಂದಿದ್ದಾರೆ. ಗಗನಾಗೆ ಕೇಳಿದಾಗ, ʻರಿಷಿ ಅವರ ನಂಬರ್ ಕೇಳಿ ಕೊಡಿʼ ಎಂದು ಕಾಮಿಡಿ ಮಾಡಿದ್ದಾರೆ. ಗಗನಾ ಕಾಮಿಡಿಗೆ ನೆರೆದಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ.
ʻಮಹಾನಟಿ’ ರಿಯಾಲಿಟಿ ಶೋಗೆ ಈ ಬಾರಿ ಮೂರು ಹೊಸ ತೀರ್ಪುಗಾರರು ವೇದಿಕೆಯನ್ನ ಅಲಂಕರಿಸಿದ್ದಾರೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ, ನಟ ರಮೇಶ್ ಅರವಿಂದ್, ಖ್ಯಾತ ನಾಯಕ ನಟಿ ಪ್ರೇಮಾ, ‘ಕಾಟೇರ’ದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್ ಸುಧೀರ್ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೆಕ್ಯಾನಿಕಲ್ ಲೈಫ್ ಬಗ್ಗೆ ಕೆಟ್ಟ ಡೈಲಾಗ್ ಹೊಡೆದಿದ್ದ ಗಗನಾ
ಗಗನಾ ಕಳೆದ ಬಾರಿ ಟ್ರೋಲ್ಗೆ ಗುರಿಯಾಗಿದ್ದರು. ಮೆಕ್ಯಾನಿಕಲ್ ಲೈಫ್ ಬಗ್ಗೆ ಕಾನ್ಸೆಪ್ಟ್ ಕೊಟ್ಟಿದ್ದರು. ನಿಮ್ಮ ತಂಗಿ ಮೆಕ್ಯಾನಿಕಲ್ ಅವರನ್ನು ಮದುವೆ ಆಗಿದ್ದರೆ ಏನು ಮಾಡುತ್ತೀಯಾ? ಎಂದು ಸ್ಕಿಟ್ ಮಾಡಬೇಕಿತ್ತು. ಡೈಲಾಗ್ ಹೇಳುವ ಭರದಲ್ಲಿ ಮೆಕ್ಯಾನಿಕ್ ಮದುವೆಯಾದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ ಎಂದಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ರಮೇಶ್ ಅರವಿಂದ್, ಗಗನಾ ಸೇರಿದಂತೆ ಈ ಬಗ್ಗೆ ದೂರು ದಾಖಲಾಗಿತ್ತು.