Site icon Vistara News

Ghum Hai Kisi Ke Pyaar Mein: ‘ಗುಮ್‌ ಹೈ ಕಿಸೀ ಕೆ ಪ್ಯಾರ್ ಮೇ’ ಧಾರಾವಾಹಿ ಸೆಟ್​ನಲ್ಲಿ ಭೀಕರ ಅಗ್ನಿ ದುರಂತ

Massive fire breaks out on the sets of Ghum Hai Kisi Ke Pyaar Mein

ಬೆಂಗಳೂರು: ‘ಗುಮ್‌ ಹೈ ಕಿಸೀ ಕೆ ಪ್ಯಾರ್ ಮೇ’ (Ghum Hai Kisi Ke Pyaar Mein) ಧಾರಾವಾಹಿ ಸೆಟ್​ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದೆ. ಮುಂಬೈನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾರ್ಯಕ್ರಮದ ಸೆಟ್‌ಗೆ ಬೆಂಕಿ ಹೊತ್ತಿಕೊಂಡಿದೆ. ಮುಂಬೈನ ಫಿಲ್ಮ್​ ಸಿಟಿಯಲ್ಲಿ ಈ ಸೆಟ್​ ಇತ್ತು. ಮಾರ್ಚ್​ 10ರಂದು ಸಂಜೆ ನಾಲ್ಕು ಗಂಟೆ ವೇಳೆಗೆ ಈ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಸೆಟ್‌ನಲ್ಲಿದ್ದ ಸಿಬ್ಬಂದಿ ಹಾಗೂ ಕಲಾವಿದರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಈ ಘಟನೆಗೆ ಕಾರಣವನ್ನು ತನಿಖೆ ಮೂಲಕ ತಿಳಿದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಐದು ಅಗ್ನಿಶಾಮಕ ಇಂಜಿನ್‌ಗಳು, ಒಂಬತ್ತು ಪಂಪ್‌ಗಳು ಹಾಗೂ ಬೆಂಕಿ ನಂದಿಸಲು ಬೇಕಾದ ಉಪಕರಣಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ. ಫಿಲ್ಮ್​ ಸಿಟಿ ನಿರ್ದೇಶಕರ ವಿರುದ್ಧವೂ ಕೇಸ್​ ದಾಖಲಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ತಂಡವು ಮನೆಗೆ ಬೆಂಕಿ ಹಚ್ಚುವ ದೃಶ್ಯವನ್ನು ಚಿತ್ರೀಕರಿಸುತ್ತಿತ್ತು, ಆದರೆ ಸಿಬ್ಬಂದಿಗೆ ವಸ್ತುಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ಇದರ ಪರಿಣಾಮವಾಗಿ ಇಡೀ ಸೆಟ್ ಸುಟ್ಟು ಕರಕಲಾಗಿದೆ. ಅಪಘಾತ ಸಂಭವಿಸಿದಾಗ ಸೆಟ್‌ನಲ್ಲಿ 2000 ಜನರು ಇದ್ದರು ಎಂದು ಹೇಳಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಅಲ್ಲಿಂದ ಎಲ್ಲರನ್ನು ಸ್ಥಳಾಂತರಿಸಲಾಯಿತು ಎಂದು ವರದಿಯಾಗಿದೆ.

ಇದನ್ನೂ ಓದಿ: Fire Accident: ಮಂತ್ರಿ ಮಾಲ್ ಪಕ್ಕದ ಮನೆಯಲ್ಲಿ ಅಗ್ನಿ ದುರಂತ: ಗ್ಯಾಸ್‌ ಸ್ಟವ್‌ನಿಂದ ಹರಡಿದ ಬೆಂಕಿ, ಮಹಿಳೆ ಸಜೀವ ದಹನ

ಅಗ್ನಿ ದುರಂತ

ಅಕ್ಕಪಕ್ಕದ ಸೆಟ್​​ಗೂ ಹಾನಿ

‘‘ಗುಮ್‌ ಹೈ ಕಿಸೀ ಕೆ ಪ್ಯಾರ್ ಮೇ’’ ಧಾರಾವಾಹಿ ಸೆಟ್​ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅಕ್ಕಪಕ್ಕದ ಸೆಟ್​​ಗೂ ಹಾನಿ ಆಗಿದೆ. ಶೂನ್ಯ ಸ್ಕ್ವೇರ್ ಪ್ರೊಡಕ್ಷನ್ಸ್ ಕಡೆಯಿಂದ ಸೆಟ್​ ಒಂದು ನಿರ್ಮಾಣ ಆಗುತ್ತಿತ್ತು. ಅದಕ್ಕೂ ಬೆಂಕಿ ತಗುಲಿದೆ. ಬೆಂಕಿ ಹರಡುವ ಭಯದಿಂದ ಈ ಸೆಟ್​ನ ಸಮೀಪದಲ್ಲಿದ್ದ ಎರಡು ಸೆಟ್​ನಿಂದ ಜನರನ್ನು ಸ್ಥಳಾಂತರ ಮಾಡಲಾಗಿತ್ತು.

ಇದರಲ್ಲಿ ನೀಲ್ ಭಟ್, ಐಶ್ವರ್ಯ ಶರ್ಮಾ ಮತ್ತು ಆಯೇಶಾ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜಯ್​ದೀಪ್​ ಸೇನ್ ಸೇರಿ ಇಬ್ಬರು ನಿರ್ದೇಶಕರು ಈ ಧಾರಾವಾಹಿಗೆ ಕೆಲಸ ಮಾಡುತ್ತಿದ್ದಾರೆ. ಕಥೆಯು ಸಾಯಿ (ಆಯೇಷಾ ಪ್ರಬಂಧ), ವಿರಾಟ್ (ನೀಲ್ ಪ್ರಬಂಧ) ಮತ್ತು ಪತ್ರಲೇಖಾ (ಐಶ್ವರ್ಯಾ ಪ್ರಬಂಧ) ತ್ರಿಕೋನ ಪ್ರೇಮ ಕಥೆ ಇದೆ. ಪ್ರತಿದಿನ ರಾತ್ರಿ 8 ಗಂಟೆಗೆ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುತ್ತದೆ.

Exit mobile version