Site icon Vistara News

Mokshitha Pai: ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಆರೈಕೆ ಮಾಡುತ್ತಿರುವ ʻಪಾರುʼ

Mokshita Pai realistic morning routine With special Child brother

ಬೆಂಗಳೂರು : ಜೀ ಕನ್ನಡದಲ್ಲಿ ಪ್ರಮುಖ ಧಾರಾವಾಹಿಗಳಲ್ಲಿ ʻಪಾರುʼ ಕೂಡ ಒಂದಾಗಿತ್ತು. ಇದೀಗ ಈ ಸೀರಿಯಲ್‌ ಅಂತ್ಯ ಕಂಡಿದೆ. ಪಾರು ಧಾರಾವಾಹಿ ಮುಖ್ಯ ನಾಯಕಿ ʻಮೋಕ್ಷಿತಾ ಪೈʼ (Mokshitha Pai) ಅವರ ರಿಯಲ್​ ಲೈಫ್​ ಕೂಡ ಸೀರಿಯಲ್‌ ಪಾತ್ರದ ತರಹವೇ ತ್ಯಾಗಮಯವೇ ಆಗಿದೆ. ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru) ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿತ್ತು. ಇದೀಗ ನಾಯಕಿ ಮೋಕ್ಷಿತಾ ಪೈ ಅವರ ರಿಯಲ್‌ ಲೈಫ್‌ ಬಗ್ಗೆ ಕೇಳಿ ಪ್ರೇಕ್ಷಕರು ಬೇಸರ ಹೊರಹಾಕಿದ್ದಾರೆ.

ಧಾರಾವಾಹಿಯಲ್ಲಿ ಪಾರು ಪಾತ್ರಧಾರಿ ಹೇಗೆ ಇತ್ತು ಎಂದರೆ, ಪಾರು ಮೈದುನನ ಪತ್ನಿಗಾಗಿ ತನ್ನ ಮಗುವನ್ನೇ ತ್ಯಾಗ ಮಾಡಿದ್ದಳು. ಮೈದುನನ ಪತ್ನಿ ಜನನಿ ತನ್ನ ಮಗುವನ್ನು ಕಳೆದುಕೊಂಡಾಗ ಅದು ಆಕೆಗೆ ಗೊತ್ತಾಗಬಾರದು ಎಂದು ಪಾರು ತನ್ನ ಮಗುವನ್ನೇ ಆಕೆಗೆ ಕೊಟ್ಟಿದ್ದಳು. ಆದರೆ ಜನನಿಗೆ ಮಾತ್ರ ತಿಳಿದಿರಲಿಲ್ಲ. ಕೊನೆಗೂ ಅಂತ್ಯದಲ್ಲಿ ಎಲ್ಲವೂ ತಿಳಿದು ಸೀರಿಯಲ್​ ಅಂತ್ಯ ಕಂಡಿತ್ತು. ಈ ರೀತಿ ತ್ಯಾಗಮಯ ವ್ಯಕ್ತಿತ್ವ ಪಾರುದು. ಆದರೆ ರಿಯಲ್‌ ಲೈಫ್‌ನಲ್ಲಿಯೂ ಮೋಕ್ಷತಾ ಬಾಳಿನಲ್ಲಿ ನೋವು ತುಂಬಿದೆ.

ಇದನ್ನೂ ಓದಿ: Paaru TV Serial: ಬೋಲ್ಡ್ ಅವತಾರದಲ್ಲಿ ಪಾರು ಧಾರಾವಾಹಿಯ ದಾಮಿನಿ!

ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಅವನು ವಿಶೇಷ ಚೇತನ. ಅವನ ಆರೈಕೆಯನ್ನು ನಟಿ ಮಾಡುತ್ತಾರೆ. ಈ ಬಗ್ಗೆ ನಟಿ ಹೇಳಿಕೊಂಡಿದ್ದರು. ಒಮ್ಮೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮೋಕ್ಷಿತಾ ಅವರು ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು. ಮಾತ್ರವಲ್ಲ, ಒಂದು ದಿನವೂ ಬಿಡದೇ ನನ್ನ ಧಾರಾವಾಹಿ ನೋಡುತ್ತಿದ್ದ ಎಂದು ಹೇಳಿಕೊಂಡಿದ್ದರು.

ಇದೀಗ ನಟಿ ತಮ್ಮ ಯುಟ್ಯೂಬ್‌ನಲ್ಲಿ ದಿನವಿಡಿ ತಮ್ಮನನ್ನು ಹೇಗೆ ನೋಡಿಕೊಳ್ಳುತ್ತೇನೆ ಎಂದು ವಿಡಿಯೊ ಶೇರ್‌ ಮಾಡಿಕೊಂಡಿದ್ದಾರೆ. ದಿನಪೂರ್ತಿ ಶೂಟಿಂಗ್​ ಇರುವ ಸಮಯದಲ್ಲಿ ಇಂಥ ಮಕ್ಕಳಿಗೆ ಗಮನ ಕೊಡುವುದು ಬಹಳ ಕಷ್ಟ ಆದರೂ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಮೋಕ್ಷಿತಾ. ಇನ್ನು ತಮ್ಮನಿಗಾಗಿ ಮೋಕ್ಷಿತಾ ಅವರು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಅರ್ಧಕ್ಕೆ ನಿಲ್ಲಿಸಿದ್ದರಂತೆ. ಏನೇ ಆಗಲಿ ಈಗ ತಮ್ಮನ ಆರೈಕೆ ಕಂಡು ಫ್ಯಾನ್ಸ್‌ ಕೂಡ ನಟಿಯನ್ನು ಹಾಡಿ ಹೊಗಳುತ್ತಿದ್ದಾರೆ.

ಪಾರು ಧಾರಾವಾಹಿ

ಈ ಧಾರಾವಾಹಿಯಲ್ಲಿ ವಿನಯ್ ಪ್ರಸಾದ್ ಪಾತ್ರ ಅಖಿಲಾಂಡೇಶ್ವರಿ ಪ್ರಮುಖ ಹೈಲೈಟ್‌. ಅರಸನ ಕೋಟೆಯನ್ನು ಬೆಳೆಸುತ್ತ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುವ ಹೆಣ್ಣು ಮಗಳು ಅಖಿಲಾಂಡೇಶ್ವರಿ. ವಿನಯಾಪ್ರಸಾದ್ ಅವರು ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಿರುತೆರೆಗೆ ಕಾಲಿಟ್ಟು ನಟನೆಯ ಮೂಲಕ ಧಾರಾವಾಹಿಯ ಘನತೆ ಹೆಚ್ಚಿಸಿದ್ದರು. ಆದಿ ಪಾತ್ರದ ಶರತ್, ಪಾರು ಪಾತ್ರದ ಮೋಕ್ಷಿತಾ ಪೈ ವೀಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದರು. ಎಸ್. ನಾರಾಯಣ್ ಅವರು ವೀರಯ್ಯದೇವ, ನಾಗೇಂದ್ರ ಶಾ ಅವರು ಹನುಮಂತು ಮತ್ತು ನಾಗೇಶ್ ಯಾದವ್ ಅವರು ರಘು ರಾಮ್ ಕೂಡ ನಟಿಸಿದ್ದರು.

Exit mobile version