Site icon Vistara News

Weekend Reality Show: ವೀಕೆಂಡ್‌ನಲ್ಲಿ ಮನರಂಜನೆ ನೀಡಲು ಬರ್ತಿದೆ ಸಿನಿಮಾ, ರಿಯಾಲಿಟಿ ಶೋಗಳು!

Movies, reality shows

ಬೆಂಗಳೂರು: ಈ ಬಾರಿ ಕಿರುತೆರೆ ವೀಕ್ಷಕರಿಗೆ ವೀಕೆಂಡ್‌ನಲ್ಲಿ ಬಂಪರ್‌ ಕೊಡುಗೆಗಳು ಇವೆ. ರಿಯಾಲಿಟಿ ಶೋಗಳು, ಹೊಸ ಧಾರಾವಾಹಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ವೀಕ್ಷಕರಿಗೆ ಮನರಂಜನೆ ನೀಡಲು ಬರುತ್ತಿದೆ. ಅದರಲ್ಲಿ ಸರಿಗಮಪ ಸೀಸನ್ 20, ಕೌಸಲ್ಯ ಸುಪ್ರಜಾ ರಾಮ ಸಿನಿಮಾ, ಬಿಗ್ ಬಾಸ್ ಸೀಸನ್ 10, ಡಿಕೆಡಿ ಗ್ರ್ಯಾಂಡ್‌ ಫಿನಾಲೆ ಸೇರಿದೆ.

ಫ್ಯಾಮಿಲಿಗೆ ಹೆಣ್ಣು ಹೆಚ್ಚಾ? ಗಂಡು ಹೆಚ್ಚಾ? ಉತ್ತರ ಇಂದು ಸಂಜೆ!

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಅಭಿನಯದ ‘ಕೌಸಲ್ಯಾ ಸುಪ್ರಜಾ ರಾಮ’ ಅ.7ರ ಸಂಜೆ 4:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರೀಮಿಯರ್‌ ಆಗುತ್ತಿದೆ. ಈ ವರ್ಷವೇ ತೆರೆಗೆ ಬಂದಿದ್ದು, ಇದರಲ್ಲಿ ಬರುವ ʼನೈಂಟಿ‌ ಹಾಕು ಕಿಟ್ಟಪ್ಪʼ ಹಾಡು ಸಹ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದಿತ್ತು.‌ ಕೌರವ ಪ್ರೊಡಕ್ಷನ್ ಹೌಸ್ ಮತ್ತು ಶಶಾಂಕ್ ಸಿನಿಮಾಸ್ ಜಂಟಿಯಾಗಿ ಕೌಸಲ್ಯಾ ಸುಪ್ರಜಾ ರಾಮ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸುಗ್ನನ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ನಾಗಭೂಷಣ್ ಮತ್ತು ಬೃಂದಾ ಆಚಾರ್ಯ ನಟಿಸಿದ್ದಾರೆ.

ಇದನ್ನೂ ಓದಿ: BBK Season 10: ಬಿಗ್‌ ಬಾಸ್‌ ಸೀಸನ್‌ಗೆ ಮನೆಯೂ ಸ್ಪೆಷಲ್; ಹತ್ತು ವರ್ಷಗಳ ಜರ್ನಿ ಹೇಗಿತ್ತು?

ವಿಭಿನ್ನ ಸಂಗೀತದ ಸ್ವಾದಕ್ಕೆ ನಿಮಗಿದೋ ಒಂದೇ ವೇದಿಕೆ!

ಸರಿಗಮಪ-20 ‘ಮೆಗಾ ಆಡಿಷನ್’ ಶನಿವಾರ ರಾತ್ರಿ 7:30ರಿಂದ ಆರಂಭವಾಗಲಿದೆ. ರಾಜ್ಯ-ಹೊರ ರಾಜ್ಯದ ಗಾಯಕರಷ್ಟೇ ಇರುತ್ತಿದ್ದರು. ಈಗ ದೇಶ-ವಿದೇಶಗಳಿಂದ ಬಂದಂತವರು ಕಂಟೆಸ್ಟೆಂಟ್‌ಗಳಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ. ನಾದಬ್ರಹ್ಮ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ನಿರ್ಣಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುಶ್ರೀ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ.

ʻಬಿಗ್‌ ಬಾಸ್‌ʼ ಲಾಂಚ್‌ ಆಗುವ ದಿನವೇ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌-7ʼ ಗ್ರ್ಯಾಂಡ್‌ ಫಿನಾಲೆ!

ಇದೇ ಅ.8ರಿಂದ ಬಿಗ್‌ ಬಾಸ್‌ ಸೀಸನ್‌ 10 (BBK Season 10) ಕಲರ್ಸ್‌ ಕನ್ನಡದಲ್ಲಿ ಶುರುವಾಗಲಿದೆ. ಇನ್ನು ಕೇವಲ ಎರಡು ದಿನ ಬಾಕಿ ಉಳಿದಿದೆ. ಭಾನುವಾರ (ಅಕ್ಟೋಬರ್ 8) ಸಂಜೆ 6 ಗಂಟೆಗೆ ಬಿಗ್ ಬಾಸ್ ಲಾಂಚ್ ಆಗಲಿದೆ. ಅದೇ ದಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್‌ ಫಿನಾಲೆ ಕೂಡ ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 6ರಿಂದ 10.30ರವರೆಗೆ ಪ್ರಸಾರ ಕಾಣುತ್ತಿದೆ. ಯಾರ ಮುಡಿಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಿರೀಟ ಏರಲಿದೆ ಎಂಬುದೇ ಕುತೂಹಲವಾಗಿದೆ.

ಅ.8ರಂದೇ ಬಿಗ್‌ ಬಾಸ್‌ ಮನೆಗೆ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ರಿವೀಲ್‌ ಆಗಲಿದೆ. ಅಂದೇ ದಿನ ಡಿಕೆಡಿಯಲ್ಲಿ ಯಾರು ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬದೂ ರಿವೀಲ್‌ ಆಗಿದೆ. ಇದೀಗ ನೋಡುಗರು ಎರಡೂ ಕಾರ್ಯಕ್ರಮದ ಪ್ರಸಾರದ ಸಮಯವಾದ್ರೂ ಚೇಂಜ್‌ ಮಾಡ್ಬಾರದಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಈ ಎರಡೂ ರಿಯಾಲಿಟಿ ಶೋ ಹಬ್ಬ ಒಂದೇ ದಿನ ಕ್ಲ್ಯಾಶ್‌ ಆಗಿದೆ.

Exit mobile version