Site icon Vistara News

Mahek Chahal | `ನಾಗಿನ್ 6′ ಧಾರಾವಾಹಿ ಖ್ಯಾತಿಯ ಮಹಕ್ ಚಹಲ್ ಆಸ್ಪತ್ರೆಗೆ ದಾಖಲು

Mahek Chahal

ಬೆಂಗಳೂರು : ‘ನಾಗಿನ್ 6’ ಧಾರಾವಾಹಿಯ ನಟಿ ಮಹಕ್ ಚಹಲ್ (Mahek Chahal ) ನ್ಯುಮೋನಿಯಾ ವಿರುದ್ಧ ಹೋರಾಡುತ್ತಿದ್ದಾರೆ. ಮುಂಬೈ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಾಗಿರುವುದನ್ನು ನಟಿ ಬಹಿರಂಗಪಡಿಸಿದ್ದಾರೆ. ನಟಿ ಮಹಕ್ ಚಹಲ್ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಮಾಧ್ಯಮದವರೊಂದಿಗೆ ನಟಿ ಮಹಕ್ ಚಹಲ್ ಅವರು ಜನವರಿ 2 ರಂದು ಕುಸಿದುಬಿದ್ದಿದ್ದು, ಉಸಿರಾಡಲು ಆಗದೇ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿಕೊಂಡಿದ್ದಾರೆ.

ʻʻನಾನು ಹಲವು ದಿನಗಳಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದೇನೆ . 3-4 ದಿನ ಐಸಿಯುನಲ್ಲಿದ್ದೆ. ನಾನು ಆಮ್ಲಜನಕದ ವೆಂಟಿಲೇಟರ್‌ನಲ್ಲಿದ್ದೆ. ನಾನು ಜನವರಿ 2ರಂದು ಕುಸಿದು ಬಿದ್ದೆ ಮತ್ತು ಆಗ ನನ್ನ ಎದೆಯಲ್ಲಿ ಚಾಕು ಹಾಕಿದಂತೆ ಭಾಸವಾಗಿತ್ತು. ನನಗೆ ಉಸಿರು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ತಕ್ಷಣ ಆಸ್ಪತ್ರೆಗೆ ದಾಖಲಾದೆ. CT ಸ್ಕ್ಯಾನ್ ತೆಗೆದುಕೊಳ್ಳಲಾಗಿದೆ. ನಾನು ಇನ್ನೂ ಆಸ್ಪತ್ರೆಗೆ ದಾಖಲಾಗಿದ್ದೇನೆ. ಎಂಟು ದಿನಗಳು ಕಳೆದಿವೆ. ಆದರೂ ನಾನು ಸಾಮಾನ್ಯ ವಾರ್ಡ್‌ನಲ್ಲಿದ್ದೇನೆ. ನಾನು ಬಹಳಷ್ಟು ಸುಧಾರಿಸಿದ್ದೇನೆ. ನನ್ನ ಎರಡೂ ಶ್ವಾಸಕೋಶಗಳು ಸೋಂಕಿಗೆ ಒಳಗಾಗಿದ್ದವುʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Himanshi Khurana | ಶೂಟಿಂಗ್‌ ವೇಳೆ ಮೂಗಿನಲ್ಲಿ ರಕ್ತಸ್ರಾವ: ಪಂಜಾಬಿ ನಟಿ ಹಿಮಾಂಶಿ ಖುರಾನಾ ಆಸ್ಪತ್ರೆಗೆ ದಾಖಲು

ಚಹಲ್ ತನ್ನ ಜೀವನದಲ್ಲಿ ಹಿಂದೆಂದೂ ಈ ರೀತಿಯ ನೋವನ್ನು ಅನುಭವಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.”ನಾನು ತುಂಬಾ ಹೆದರುತ್ತಿದ್ದೆ. ಏಕೆಂದರೆ, ನನ್ನ ಜೀವನದಲ್ಲಿ ನಾನು ಉಸಿರಾಡಲು ಸಾಧ್ಯವಾಗದ ಹಂತಕ್ಕೆ ಯಾವತ್ತೂ ಬಂದಿಲ್ಲ. ನಾನು ಮೂರ್ಛೆ ಹೋಗುತ್ತಿದ್ದೇನೆ. ನಾನು ಕೆಮ್ಮುವಾಗ ಪ್ರತಿ ಬಾರಿ ನೋವಿಗೆ ಒಳಗಾಗುತ್ತಿದ್ದೇನೆ,ʼʼ ಎಂದು ಅವರು ಹೇಳಿದರು. ಮಹಕ್ ಚಹಲ್ ಅವರು ಆರಂಭದಲ್ಲಿ ಇದು ಸಾಮಾನ್ಯ ಶೀತ ಎಂದು ಭಾವಿಸಿದ್ದರು ಮತ್ತು ಅದಕ್ಕಾಗಿಯೇ ಅವರು ಎಲ್ಲಾ ಮನೆಮದ್ದುಗಳನ್ನು ತೆಗೆದುಕೊಂಡಿದ್ದರು.

ಮಹಕ್ ಚಹಲ್ ಟೆಲಿವುಡ್‌ನಲ್ಲಿ ಜನಪ್ರಿಯರಾಗಿದ್ದು, ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿದ್ದರು. ʻಕವಚ್ʼ ಮತ್ತು ʻನಾಗಿನ್ʼ ಇತರ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ | Oscar award | ಆಸ್ಕರ್‌ ಪ್ರಶಸ್ತಿ ಕಣದಲ್ಲಿ ಕನ್ನಡದ ಕಾಂತಾರ, ವಿಕ್ರಾಂತ್‌ ರೋಣ | ಇನ್ಯಾವ ಸಿನಿಮಾಗಳಿವೆ?

Exit mobile version