ಬೆಂಗಳೂರು: ಸ್ಟಾರ್ ಸುವರ್ಣವಾಹಿನಿಯಲ್ಲಿ (Star Suvarna) ಪ್ರಸಾರವಾಗುತ್ತಿದ್ದ ʻನಮ್ಮ ಲಚ್ಚಿ’ (Namma Lacchi) ಧಾರಾವಾಹಿಯ ಕೊನೆಯ ಸಂಚಿಕೆ ಈ ವಾರ ಪ್ರಸಾರವಾಗಲಿದೆ ಎಂದು ವರದಿಯಾಗಿದೆ. ಅಪ್ಪ ಮಗಳ ಬಾಂಧವ್ಯದ ಕುರಿತು ಕಥೆ ಸಾಗಿತ್ತು. ವಿಜಯ್ ಸೂರ್ಯ (Vijay Suriya) , ನೇಹಾ ಗೌಡ (Neha Gowda), ಐಶ್ವರ್ಯ ಸಿಂಧೋಗಿ (aishwarya shindogi) ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಸಾಂಘವಿ ಕಾಂತೇಶ್ (Sanghavi kanthesh) ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ʻನಮ್ಮ ಲಚ್ಚಿʼಯಲ್ಲಿ ಲಚ್ಚಿಯಾಗಿ ಬಾಲ ನಟಿ ʻಸಾಂಘವಿʼ ಅಮೋಘವಾಗಿ ಅಭಿನಯಿಸುವ ಮೂಲಕ ಜನಮನ ಗೆದ್ದಿದ್ದರು.
ಲಚ್ಚಿ ಸಂಗಮ್ ಒಂದಾದ ಬೆನ್ನಲ್ಲೇ ಈ ಧಾರಾವಾಹಿ ಮುಗಿಯುವ ಬಗ್ಗೆ ಸುದ್ದಿ ಕೇಳಿಬಂದಿದೆ. 2023ರ ಫೆಬ್ರವರಿ 6ಕ್ಕೆ ಧಾರಾವಾಹಿ ಶುರು ಆಗಿತ್ತು. ಬಂಗಾಳಿ ಭಾಷೆಯ ʻಪೋಟಲ್ ಕುಮಾರ್ ಗಾನಾವಾಲʼ (Potol Kumar Gaanwala) ಧಾರಾವಾಹಿಯ ಅಧಿಕೃತ ರೀಮೆಕ್ ಈ ʻನಮ್ಮ ಲಚ್ಚಿʼ. ಸಂಗಮ್ ಎನ್ನುವ ಗಾಯಕ ಒಂದು ಗ್ರಾಮದಲ್ಲಿ ಬಂದು ಗಿರಿಜಾ ಪ್ರೀತಿಯಲ್ಲಿ ಬೀಳುತ್ತಾನೆ. ಗುಟ್ಟಾಗಿ ಆಕೆಯನ್ನು ಮದುವೆಯೂ ಆಗುತ್ತಾನೆ. ಬಳಿಕ ಸಂಗಮ್ ಶ್ರೀಮಂತೆ ದೀಪಿಕಾ ಎನ್ನುವಳನ್ನು ಮದುವೆಯಾಗಿ ʻರಿಯಾʼ ಎನ್ನುವ ಮಗಳ ತಂದೆಯಾಗುತ್ತಾನೆ. ಆದರೆ ಆ ಕಡೆ ಗಿರಿಜಾಗೆ ಮಗಳು ಹುಟ್ಟುತ್ತಾಳೆ. ಮಗಳು ಲಚ್ಚಿ ಅಪ್ಪನಂತೆ ಅದ್ಭುತ ಗಾಯಕಿ. ಅಮ್ಮನ ಸಾವಿನ ನಂತರ ವೇಷ ಹಾಕಿಕೊಂಡು ಅಪ್ಪನನ್ನು ಹುಡುಕಿಕೊಂಡು ಬಂದು ಸಂಗಮ್ ಮನೆ ಸೇರುತ್ತಾಳೆ. ಹೀಗೆ ಕಥೆ ಸಾಗುತ್ತದೆ. ಈಗ ಸಂಗಮ್ ಆಸ್ಪತ್ರೆಯಲ್ಲಿ ಇದ್ದಾನೆ. ಎಪಿಸೋಡ್‌ಗಳು ನೋಡುತ್ತಿದ್ದರೆ ಕಥೆಗೆ ಫುಲ್ ಸ್ಟಾಪ್ ಇಡುವಂತಿದೆ.
ಇದನ್ನೂ ಓದಿ: Namma Lachi Kannada Serial: ಲಚ್ಚಿ-ರಿಯಾ ಜತೆ ರಾಧಿಕಾ ಕುಮಾರಸ್ವಾಮಿ; ಕಿರುತೆರೆಗೆ ಎಂಟ್ರಿ ಕೊಟ್ರಾ ನಟಿ?
ವೀಕ್ಷಕರು ಕಮೆಂಟ್ ಮೂಲಕ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻಎಲ್ಲಿಯೂ ಎಳೆಯದೇ ಸರಾಗವಾಗಿ ಕಥೆ ಸಾಗಿತ್ತು. ಧಾರಾವಾಹಿ ಕೊನೆಯಾಗುವ ಸುದ್ದಿ ಕೇಳಿ ಬೇಸರವಾಗಿದೆʼ ಎಂದು ಬೇಜಾರು ವ್ಯಕ್ತಪಡಿಸ್ತಿದ್ದಾರೆ.
ಈ ಧಾರಾವಾಹಿಯಲ್ಲಿ ಸಂಗೀತಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಸಂಗೀತದಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡಿದ್ದ ಸಂಗಮ್, ಸಾಧನೆಯ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ನಿರ್ದೇಶಕ ಸಂಪೃಥ್ವಿ ತೆರೆದಿಟ್ಟಿದ್ದಾರೆ.
ಧಾರಾವಾಹಿಯಲ್ಲಿ ಸಂಗಮ್ ಪಾತ್ರವನ್ನು ವಿಜಯ್ ಸೂರ್ಯ ಮಾಡಿದ್ದರೆ, ಗಿರಿಜಾ ಪಾತ್ರವನ್ನು ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ ಮಾಡಿದ್ದರು. ʼನಮ್ಮ ಲಚ್ಚಿ’ ಧಾರಾವಾಹಿಯಲ್ಲಿ ಮೂವರು ಮಕ್ಕಳು ಸಾಕಷ್ಟು ಗಮನ ಸೆಳೆಯುತ್ತಾರೆ. ಅದರಲ್ಲಿ ಲಚ್ಚಿ ಮುಖ್ಯ ಪಾತ್ರಧಾರಿಯಾದರೆ, ರಿಯಾ ಕೂಡ ಪ್ರಾಮುಖ್ಯತೆ ಪಡೆದಿದ್ದಾರೆ. ಇನ್ನು ಸುಗ್ಗಿ, ಲಚ್ಚಿಗೆ ತಂಗಿಯಾಗಿ ಗಮನ ಸೆಳೆದಿದ್ದಳು.