Site icon Vistara News

Namratha Gowda: ಮತ್ತೆ ಬೋಲ್ಡ್‌ ಅವತಾರ ತಾಳಿದ ನಮ್ರತಾ ಗೌಡ

Namratha Gowda Hot =
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಾಗಿಣಿ 2’ ಧಾರಾವಾಹಿ ನಟಿ ನಮ್ರತಾ ಗೌಡ (Namratha Gowda) ಅವರು ಬಾಲಿ ಟ್ರಿಪ್ ಎಂಜಾಯ್ ಮಾಡುವ ಫೋಟೊಗಳನ್ನು ಹಂಚಿಕೊಂಡಿದ್ದರು. ಬಿಕಿನಿ ಧರಿಸಿ ಸಾಕಷ್ಟು ಸುದ್ದಿಯಲ್ಲಿ ಇರುವಾಗಲೇ ಇದೀಗ ಮತ್ತೆ ಬೋಲ್ಡ್‌ ಅವತಾರ ತಾಳಿದ್ದಾರೆ.
ಪುಟ್ಟಗೌರಿ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಹೊಸ ಲುಕ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ನಮ್ರತಾ.
ಪೋಟೊಗಳಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ರತಾ ಗೌಡ ಅವರು ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು.
ದೀಪಿಕಾ ದಾಸ್ ಬಳಿಕ ನಾಗಿಣಿ ಪಾತ್ರಕ್ಕೆ ನಮ್ರತಾ ಜೀವ ತುಂಬಿದ್ದರು. ಈ ಸೀರಿಯಲ್‌ನಿಂದ ನಮ್ರತಾಗೆ ಜನಪ್ರಿಯತೆ ಸಿಕ್ಕಿತು.
ನಮ್ರತಾ ಗೌಡ ಅವರು ಮುಂಬರುವ ಬಿಗ್ ಬಾಸ್ ಶೋಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.
Exit mobile version