ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ʻನನ್ನಮ್ಮ ಸೂಪರ್ ಸ್ಟಾರ್ʼ (Nannamma Super Star) ಮತ್ತೆ ಬಂದಿದೆ. ಮಕ್ಕಳ ಮುದ್ದು ಮಾತುಗಳು , ಅವರ ಆಟಗಳು ನೋಡುಗರನ್ನು ರಂಜಿಸುತ್ತಲೇ ಬರುತ್ತಿದೆ. ಎರಡು ಸೀಸನ್ ಪ್ರಸಾರವಾದ ಬಳಿಕ ಈಗ ಮೂರನೇ ಸೀಸನ್ ಶುರುವಾಗಿದೆ.
ಮೊದಲ ಸೀಸನ್‍ನಲ್ಲಿ ವನ್ಷಿಕಾ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ವಿಜೇತರಾಗಿ ಹೊರಹೊಮ್ಮಿದ್ದರು. ಎರಡನೇ ಸೀಸನ್‌ನಲ್ಲಿ ಗ್ರಾಮೀಣ ಭಾಗದ ಪ್ರತಿಭೆಗೆ ಅಂದರೆ ಚೈತ್ರಾ ಮತ್ತು ಅವರ ಅವಳಿ ಮಕ್ಕಳು ಚಿರಂತ್-ಚಿನ್ಮಯ್ ವಿಜೇತರಾಗಿದ್ದರು.ಎರಡನೇ ಸೀಸನ್‌ನಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಅಮ್ಮ ಮಕ್ಕಳ ಜತೆಗೆ ಕಿರುತೆರೆಯ ಚಿನಕುರುಳಿ ಎಂತಲೇ ಖ್ಯಾತಿ ಪಡೆದ ವನ್ಷಿಕಾ ನಿರೂಪಕಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ಎರಡನೇ ಸೀಸನ್‌ನಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಶೋ ಬಹಳ ವಿಶೇಷವಾಗಿತ್ತು. ಏಕೆಂದರೆ ಶೋನಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: Nannamma Super Star: ವೇದಿಕೆ ರೆಡಿ ಆಯ್ತು; ʻನನ್ನಮ್ಮ ಸೂಪರ್ ಸ್ಟಾರ್-3ʼ ಯಾವಾಗ?
ಕಳೆದ ಸೀಸನ್‌ನಂತೆ ಈ ಬಾರಿಯೂ ಸೃಜನ್ ಲೋಕೇಶ್, ತಾರಾ ಅನುರಾಧಾ, ಅನುಪ್ರಭಾಕರ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸ್ಪರ್ಧಿಗಳ ಜತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಾಯಕಿ ಭಾಗ್ಯಳಾಗಿ ನಟಿಸುತ್ತಿರುವ ಸುಷ್ಮಾ ರಾವ್ ‘ನನ್ನಮ್ಮ ಸೂಪರ್ ಸ್ಟಾರ್’ನ ನಿರೂಪಕಿಯಾಗಿ ದ್ದಾರೆ.
ಸುಷ್ಮಾ ರಾವ್ ನಿರೂಪಣಾ ಜರ್ನಿ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಶುರುವಾಗಿತ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ತರ್ಲೆ ನನ್ ಮಕ್ಳು’ ಶೋ ನಿರೂಪಣೆ ಮಾಡಿದ್ದ ಸುಷ್ಮಾ, ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಜೀನ್ಸ್’ ರಿಯಾಲಿಟಿ ಶೋವಿನ ನಿರೂಪಕಿಯಾಗಿ ಕಾಣಿಸಿಕೊಂಡರು.
‘ಸೀರಿಯಲ್ ಸಂತೆ’, ‘ಅವಾರ್ಡ್ ಕಾರ್ಯಕ್ರಮ’, ಹಾಡು ಹರಟೆ’ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದರು. ‘ಭಾಗೀರಥಿ’ ಧಾರಾವಾಹಿಯ ನಂತರ ‘ಸ್ವಾತಿಮುತ್ತು’, ‘ಬಿದಿಗೆ ಚಂದ್ರಮ’, ‘ಯಾವ ಜನ್ಮದ ಮೈತ್ರಿ’, ‘ಗುಪ್ತಗಾಮಿನಿ’, ‘ಸೊಸೆ ತಂದ ಸೌಭಾಗ್ಯ’ ಧಾರಾವಾಹಿಗಳಲ್ಲಿ ಸುಷ್ಮಾ ರಾವ್ ನಟಿಸಿದ್ದರು.