ಬೆಂಗಳೂರು: ರಿಯಾಲಿಟಿ ಶೋ ನಮ್ಮಮ್ಮ ಸೂಪರ್ ಸ್ಟಾರ್ (Nannamma Super Star) ಗ್ರ್ಯಾಂಡ್ ಫಿನಾಲೆ ನಡೆದಿದ್ದು, ಮಂಡ್ಯದ ಅವಳಿ ಮಕ್ಕಳು ಮತ್ತವರ ತಾಯಿಗೆ ಸೂಪರ್ ಸ್ಟಾರ್ ಕಿರೀಟ ಸಿಕ್ಕಿದೆ. ಈ ಬಾರಿ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಅಮ್ಮ ಮಕ್ಕಳ ಜತೆಗೆ ಕಿರುತೆರೆಯ ಚಿನಕುರುಳಿ ಎಂತಲೇ ಖ್ಯಾತಿ ಪಡೆದ ವನ್ಷಿಕಾ ನಿರೂಪಕಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಅವಳಿ ಮಕ್ಕಳ ಸುದ್ದಿ ಗೊತ್ತಾಗುತ್ತಿದ್ದಂತೆ ಗ್ರಾಮೀಣ ಭಾಗದ ಪ್ರತಿಭೆಗೆ ಈ ಗೌರವ ಸಿಕ್ಕಿರುವುದು ಖುಷಿಯಾಗಿದೆ ಎಂದು ನೋಡುಗರು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ವಿಜೇತರಾಗಿ ಮಂಡ್ಯದ ತಾಯಿ ಚೈತ್ರಾ ಮತ್ತು ಅವರ ಅವಳಿ ಮಕ್ಕಳು ಚಿರಂತ್-ಚಿನ್ಮಯ್ ಆಯ್ಕೆ ಆಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2’ ಟೈಟಲ್ ವಿಜೇತರಿಗೆ ಪ್ರಶಸ್ತಿ ನೀಡಿದರು. ಕಳೆದ ಬಾರಿ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬಾರಿಯ ನಮ್ಮಮ್ಮ ಸೂಪರ್ ಸ್ಟಾರ್ ಶೋ ಬಹಳ ವಿಶೇಷ. ಏಕೆಂದರೆ ಈ ಬಾರಿ ಶೋನಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: Pathaan Movie | ರಿಯಾಲಿಟಿ ಶೋನಲ್ಲಿ ಪ್ರಚಾರ ಬೇಡ ಅಂದ್ರಾ ಶಾರುಖ್ ಖಾನ್? ಇದು ʻಪಠಾಣ್ʼ ಹೊಸ ತಂತ್ರ!
ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಫಿನಾಲೆಗೆ 6 ಜೋಡಿಗಳು ಸೆಲೆಕ್ಟ್ ಆಗಿದ್ದರು. ಅದರಲ್ಲಿ ಎಲ್ಲರನ್ನೂ ಹಿಂದಿಕ್ಕಿ ಚೈತ್ರಾ ನನ್ನಮ್ಮ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಗೆದ್ದ ಅವಳಿ ಮಕ್ಕಳಿಗೆ 2 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ರಶ್ಮಿ ಮತ್ತು ಗೊಂಬೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರನ್ನರ್ ಅಪ್ ಆಗಿದ್ದಾರೆ. ಈ ಜೋಡಿಗೆ 1 ಲಕ್ಷ ರೂ. ಬಹುಮಾನ ನೀಡಲಾಗಿದೆ.
ಇದನ್ನೂ ಓದಿ: Urfi Javed | ರಿಯಾಲಿಟಿ ಶೋದತ್ತ ಮುಖ ಮಾಡಿದ ಉರ್ಫಿ ಜಾವೇದ್: ಟ್ರೋಲ್ ಆಗಿದ್ಯಾಕೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗಿದ್ದ ನನ್ನಮ್ಮ ಸೂಪರ್ ಸ್ಟಾರ್ ಮೊದಲ ಸೀಸನ್ನಲ್ಲಿ ವನ್ಷಿಕಾ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ವಿಜೇತರಾಗಿ ಹೊರಹೊಮ್ಮಿದರು. ನಟಿ ತಾರಾ, ಅನು ಪ್ರಭಾಕರ್ , ಸೃಜನ್ ಲೋಕೇಶ್ ಈ ಶೋನ ನಿರೂಪಕರು, ಅನುಪಮಾ ಗೌಡ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.