Site icon Vistara News

Kaustubha Mani: ʻನನ್ನರಸಿ ರಾಧೆʼ ಖ್ಯಾತಿಯ ಕೌಸ್ತುಭ ಮಣಿ ನಿಶ್ಚಿತಾರ್ಥ: ಫೋಟೊ ವೈರಲ್‌!

nannarasi radhe Kaustubha Mani engagement

ʻನನ್ನರಸಿ ರಾಧೆʼ ಖ್ಯಾತಿಯ (Kaustubha Mani) ಕೌಸ್ತುಭ ಮಣಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಸತೀಶ್ ಎಂಬುವರ ಜತೆಗೆ ಎಂಗೇಜ್‌ ಆಗಿದ್ದಾರೆ.

ʻಗೌರಿಶಂಕರʼ ಧಾರಾವಾಹಿಯಲ್ಲಿ ನಾಯಕಿ ನಟಿ ಪಾತ್ರದಲ್ಲಿ ನಟಿ ಕೌಸ್ತುಭಮಣಿ ಅವರು ಬಣ್ಣ ಹಚ್ಚಿದ್ದರು. ಆದರೆ, ಕೆಲವೇ ದಿನಗಳಲ್ಲಿ ಧಾರಾವಾಹಿ ತಂಡದಿಂದ ಹೊರಗೆ ಬಂದಿದ್ದರು.

ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ʻನನ್ನರಸಿ ರಾಧೆʼ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು.

ಕಲರ್ಸ್ ಕನ್ನಡದ ʻನನ್ನರಸಿ ರಾಧೆʼ ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ಗೆದ್ದಿದ್ದರು.

ಇದನ್ನೂ ಓದಿ: Ondu Sarala Premakathe: ನಾಲ್ಕು ಭಾಷೆಗಳಿಗೆ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಡಬ್; ಒಟಿಟಿ ರಿಲೀಸ್ ಯಾವಾಗ?

ಇದಾದ ಬಳಿಕ ತೆಲುಗು ಕಿರುತೆರೆಗೆ ಕೌಸ್ತುಭ ಮಣಿ ಪದಾರ್ಪಣೆ ಮಾಡಿದರು. ತೆಲುಗಿನ ʻಕೋಡಲು ಮೀಕು ಜೋಹರ್ಲುʼ ಎಂಬ ಧಾರಾವಾಹಿಯಲ್ಲಿ ನಟಿಸಿದರು. ಕೌಸ್ತುಭ ಮಣಿ ಸ್ಯಾಂಡಲ್‌ವುಡ್‌ನಲ್ಲಿ ಎಂಟ್ರಿ ಕೊಟ್ಟಿದ್ದು, ರಾಮಾಚಾರಿ 2.0 ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಕೌಸ್ತುಭ ಮಣಿ ಅವರ ಮದುವೆ ಕೆಲವೇ ದಿನಗಳಲ್ಲಿ ನೆರವೇರಲಿದೆ ಎನ್ನಲಾಗಿದೆ.

Exit mobile version