Site icon Vistara News

Neha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೊಂಬೆ-ಚಂದನ್‌ ದಂಪತಿ

Neha Gowda is pregnant the actress shared the good news

ಮದುವೆಯಾದ 6 ವರ್ಷಗಳ ಬಳಿಕ ಸಿಹಿ ಸುದ್ದಿ ಕೊಟ್ಟಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆ (Neha Gowda) ನೇಹಾ ಹಾಗೂ ಚಂದನ್‌ ದಂಪತಿ.

ನೇಹಾ ಗೌಡ – ಚಂದನ್ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನೇಹಾ ಗೌಡ – ಚಂದನ್ ಗೌಡ ದಂಪತಿ ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

2018ರಂದು ಬೆಂಗಳೂರಿನಲ್ಲಿ ಚಂದನ್ ಮತ್ತು ನೇಹಾ ಗೌಡ ಮದುವೆಯಾಗಿದ್ದರು.ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ನೇಹಾ ಹಾಗೂ ನಟ ಚಂದನ್​, ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ʻʻನಮ್ಮ ಕುಟುಂಬಕ್ಕೆ ಹೊಸ ಜೀವನವನ್ನು ಸ್ವಾಗತಿಸಲು ತಯಾರಾಗಿದ್ದೇವೆ. ನಮ್ಮ ಹೃದಯವು ಸಂತೋಷ ಮತ್ತು ನಿರೀಕ್ಷೆಯಿಂದ ತುಂಬಿ ತುಳುಕುತ್ತಿದೆ. ನಿಮ್ಮಲ್ಲಿ ಹಲವರು ಊಹಿಸಿದ್ದೀರಿ. ಹೌದು, ನೀವು ಹೇಳಿದ್ದು ಸರಿ! ನಮ್ಮ ಕುಟುಂಬ ಎರಡರಿಂದ ಮೂರಕ್ಕೆ ಬೆಳೆಯುತ್ತಿದೆ. ನಿದ್ದೆಯಿಲ್ಲದ ರಾತ್ರಿಗಳು, ಅಂತ್ಯವಿಲ್ಲದ ನಗು ಮತ್ತು ಮಿತಿಯಿಲ್ಲದ ಪ್ರೀತಿಯಿಂದ ತುಂಬಿರುವ ಈ ಹೊಸ ಅಧ್ಯಾಯಕ್ಕಾಗಿ ಕಾಯುತ್ತಿದ್ದೇವೆʼʼಎಂದು ಬರೆದುಕೊಂಡಿದ್ದಾರೆ ನೇಹಾ ದಂಪತಿ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಲಕ್ಷ್ಮಿ ಬಾರಮ್ಮ ಸೀರಿಯಲ್​ನಲ್ಲಿ ಗೊಂಬೆ ಪಾತ್ರದಲ್ಲಿ ನೇಹಾ ಅವರನ್ನು ಜನ ತುಂಬಾ ಇಷ್ಟಪಟ್ಟಿದ್ದರು. ‘ಸ್ವಾತಿ ಚುನುಕುಲು’ ಧಾರಾವಾಹಿ. ಅಷ್ಟೇ ಅಲ್ಲದೆ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಕಲ್ಯಾಣ ಪರಿಸು’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರಲ್ಲಿ ಸ್ಪರ್ಧಿಸಿದ್ದರು ನೇಹಾ, ಕನ್ನಡದ ಜತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ನೇಹಾ ಕೆಲಸ ಮಾಡಿದ್ದಾರೆ. ಪತಿ ಚಂದನ್ ಜತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಜ-ರಾಣಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಗೆದ್ದಿದ್ದರು.

Exit mobile version