ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ (Shreerastu Shubhamastu Serial) ಇಷ್ಟು ದಿನಗಳವರೆಗೂ ಶಾರ್ವರಿ ಪಾತ್ರವನ್ನು ನಟಿ ನೇತ್ರಾ ಜಾಧವ್ (Netra Jadhav) ಅವರು ನಡೆಸಿಕೊಡುತ್ತಿದ್ದರು.ಧಾರಾವಾಹಿಯಲ್ಲಿ ದೆಹಲಿಗೆ ಹೋಗಿ ಬರುತ್ತೇನೆ ಎಂದು ಹೊರಟʻ ಶಾರ್ವರಿʼ, ವಾಪಸ್ ಬಂದಿದ್ದು, ಸ್ವಪ್ನಾ ದೀಕ್ಷಿತ್ ಆಗಿ. ಒಳ್ಳೆಯವಳು ಎನಿಸಿಕೊಂಡು ಕುತಂತ್ರ ಬುದ್ಧಿಯ ಶಾರ್ವರಿ ಪಾತ್ರಕ್ಕೆ ನೇತ್ರಾ ಅವರು ನ್ಯಾಯ ಒದಗಿಸಿಕೊಟ್ಟಿದ್ದರು. ಹೆಸರಿಗೆ ತಕ್ಕಂತೆಯೇ ಅಭಿನಯ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಸೀರಿಯಲ್‌ನಿಂದ ನಟಿ ನಿರ್ಗಮಿಸಿರುವುದು ಬಹಳ ಮಂದಿಗೆ ಬೇಸರ ತಂದಿದೆ.
ಧಾರಾವಾಹಿಯಿಂದ ನಟಿ ಹೊರಗೆ ಹೋಗುತ್ತದ್ದಂತೆ ಮತ್ತೆ ಕಂಡು ಬಂದದ್ದು ಯಕ್ಷಗಾನದ ಗೆಟಪ್‌ನಲ್ಲಿ. ತೆಲಂಗಾಣದಲ್ಲಿ ಅಮ್ಮಂದಿರ ದಿನದಂದು ಈ ಯಕ್ಷಗಾನ ಮಾಡಿರುವುದಾಗಿ ಅವರು ಈ ಫೋಟೋಗಳಿಗೆ ಶೀರ್ಷಿಕೆ ಕೊಟ್ಟಿದ್ದಾರೆ.
ಕರ್ನಾಟಕ ಸಾಂಸ್ಕೃತಿಕ ಪ್ರದರ್ಶನವಾದ ಯಕ್ಷಗಾನವನ್ನು ತೆಲಂಗಾಣದಲ್ಲಿ ತಾಯಂದಿರ ದಿನದ ವಿಶೇಷ ಸಂದರ್ಭದಲ್ಲಿ ʻಸ್ಟಾರ್ ಮಾʼದಲ್ಲಿ ಪ್ರದರ್ಶಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ನೋಡಿದಾಗಲೇ ನಟಿ ಯಕ್ಷಗಾನ ಕಲಾವಿದೆ ಎಂದು ಅಭಿಮಾನಿಗಳಿಗೆ ಗೊತ್ತಾಗಿದ್ದು!
ರಥ ಸಪ್ತಮಿ, ಸುಂದರಿ, ಸಾಗುತ ದೂರ ದೂರ , ಆಕೃತಿ ಹೀಗೆ ಕನ್ನಡ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು ನೇತ್ರಾ.
ಇತ್ತೀಚೆಗೆ ನಡೆದ ʻಜೀ ಕುಟುಂಬ ಅವಾರ್ಡ್ʼ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಖಳ ನಟಿ ಪ್ರಶಸ್ತಿಯನ್ನು ಕೂಡ ನೇತ್ರಾ ಜಾಧವ್ ಪಡೆದುಕೊಂಡಿದ್ದರು.